ಮಂಗಳೂರು: ಅ.27ರಂದು ಕರಾವಳಿಯಾದ್ಯಂತ ಬಹು ನಿರೀಕ್ಷಿತ “ಪುಳಿಮುಂಚಿ” ಚಿತ್ರ ತೆರೆಗೆ ಬರಲಿದೆ ಎಂದು ಚಿತ್ರ ನಿರ್ದೇಶಕ ತ್ರಿಶೂಲ್ ಶೆಟ್ಟಿ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
“ಈಗಾಗಲೇ ದುಬೈ, ಬೆಹರಿನ್ ನಲ್ಲಿ ಚಿತ್ರದ ಪ್ರೀಮಿಯರ್ ಶೋ ನಡೆದಿದ್ದು ತುಳುವರು ಚಿತ್ರವನ್ನು ಮೆಚ್ಚಿದ್ದಾರೆ. ಈಗಾಗಲೇ ಬುಕ್ ಮೈ ಶೋ ನಲ್ಲಿ ಚಿತ್ರದ ಬುಕಿಂಗ್ ತೆರೆದಿದೆ. ಬಿಗ್ ಸಿನಿಮಾಸ್ ಸಹಿತ ಮಲ್ಟಿಫ್ಲೆಕ್ಸ್, ಸಿಂಗಲ್ ಥಿಯೇಟರ್ ಗಳಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ತುಳುವರು ಇಷ್ಟಪಟ್ಟು ಸಿನಿಮಾ ನೋಡುವ ಮೂಲಕ ತುಳು ಸಿನಿಮಾವನ್ನು ಗೆಲ್ಲಿಸಬೇಕಿದೆ” ಎಂದರು.
“ಒಂದು ವಾರದಲ್ಲಿ ಚಿತ್ರ ನೋಡುವವರಿಗೆ ಟಿಕೆಟ್ ಮೂಲಕ 2.87 ಲಕ್ಷದ ಸುಜುಕಿ ಜಿಕ್ಸರ್ ಗೆಲ್ಲುವ ಅವಕಾಶವಿದೆ” ಎಂದು ಚಿತ್ರ ನಿರ್ದೇಶಕ ತ್ರಿಶೂಲ್ ಶೆಟ್ಟಿ ಅವರು ಈ ಸಂದರ್ಭದಲ್ಲಿ ಹೇಳಿದರು.
ಚಿತ್ರಕ್ಕೆ ಸಂಗೀತವನ್ನು ಕಿಶೋರ್ ಕುಮಾರ್ ಶೆಟ್ಟಿ ನೀಡಿದ್ದು ಮಯೂರ್ ಆರ್. ಶೆಟ್ಟಿ ಸಾಹಿತ್ಯ ಮತ್ತು ಚಿತ್ರೀಕರಣ ಸೇರಿದಂತೆ ಹಲವು ಪ್ರತಿಭಾನ್ವಿತಕಲಾವಿದರು ಈ ಚಿತ್ರಕ್ಕೆ ದುಡಿದಿದ್ದಾರೆ.
ವಿನೀತ್ ಕುಮಾರ್ ನಾಯಕ ನಟನಾಗಿ, ಸಮತಾ ಅಮೀನ್ ನಾಯಕಿಯಾಗಿನಟಿಸಿದ್ದಾರೆ. ಉಳಿದಂತೆ ತಾರಾಗಣದಲ್ಲಿ ರಾಹುಲ್ ಅಮೀನ್, ಸ್ವರಾಜ್ ಶೆಟ್ಟಿ, ಆರಾಧ್ಯ ಶೆಟ್ಟಿ, ನವೀನ್ ಡಿ ಪಡೀಲ್, ಅರವಿಂದ್ ಬೋಳಾರ್, ಭೋಜರಾಜ್ ಬಾಮಂಜೂರು, ಸಾಯಿಕೃಷ್ಣ ಕುಡ್ಲ, ರವಿ ರಾಮಕುಂಜ, ಸಂದೀಪ್ ಶೆಟ್ಟಿ, ಪ್ರಸನ್ನ ಶೆಟ್ಟಿ, ಬೈಲೂರು, ಉಮೇಶ್ ಮಿಜಾರ್, ಪಿಂಕಿ ರಾಣಿ, ಸಂತೋಷ್ ಶೆಟ್ಟಿ, ಅದ್ವಿಕಾ
ಶೆಟ್ಟಿ ಸೇರಿದಂತೆ ಹಲವರು ನಟಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ನಿರ್ಮಾಪಕ ಹರಿಪ್ರಸಾದ್ ರೈ, ನಿರ್ದೇಶಕ ತ್ರಿಶೂಲ್ ಶೆಟ್ಟಿ, ಕೆಮರಾಮ್ಯಾನ್ ಮಯೂರ್ ಶೆಟ್ಟಿ, ಡಿಬಿಸಿ ಶೇಖರ್, ಪ್ರಜ್ವಲ್, ನಟರಾದ ರಾಹುಲ್ ಅಮೀನ್, ವಿನೀತ್, ಹರೀಶ್ ನಾಯ್ಕ್, ಗಣೇಶ್ ನೀರ್ಚಾಲ್ ಮತ್ತಿತರರು ಉಪಸ್ಥಿತರಿದ್ದರು.