25.2 C
Karnataka
Sunday, May 19, 2024

ಮಂಗಳೂರು-ಮಡ್ಗಾಂವ್‌ ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ ಚಾಲನೆ

ಮಂಗಳೂರು:ಕರಾವಳಿ ಭಾಗದ ಬಹುದಿನಗಳ ಕನಸಾದ ಮಂಗಳೂರು-ಮಡಗಾಂವ್ ನಡುವಿನ ‘ವಂದೇ ಭಾರತ್’ ಎಕ್ಸ್ಪ್ರೆಸ್ ರೈಲ್‌ ಗೆ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ಶನಿವಾರ ಬೆಳಗ್ಗೆ ಅಯೋಧ್ಯೆಯಿ೦ದ ವರ್ಚುವಲ್ ಆಗಿ ಚಾಲನೆ ನೀಡಿದರು.
ವಂದೇ ಭಾರತ್‌ ಎಕ್ಸ್‌ಪ್ರೆಸ್‌ ರೈಲು ಸಂಚಾರಕ್ಕೆ ಚಾಲನೆ ಅ೦ಗವಾಗಿ ಬೆಳಗ್ಗೆ 10 ಗಂಟೆಗೆ ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣದ ಒಂದನೇ ಫ್ಲ್ಯಾಟ್‌ಫಾರಂನಲ್ಲಿಔಪಚಾರಿಕ ಸಮಾರಂಭ ಜರಗಿತು.ಸಮಾರಂಭದಲ್ಲಿ ಮಾತನಾಡಿದ ಸಂಸದ ನಳಿನ್ ಕುಮಾರ್ ಕಟೀಲ್ ಅವರು ವಂದೇ ಭಾರತ್‌ ರೈಲು ಸಂಚಾರದಿಂದ ಉಡುಪಿ, ಕಾರವಾರ ಹಾಗೂ ಗೋವಾ ಪ್ರವಾಸಿಗರಿಗೆ ಬಹಳ ಅನುಕೂಲವಾಗಲಿದೆ.

ಅಲ್ಲಿಂದ ದ.ಕ. ಜಿಲ್ಲೆಗೆ ಪ್ರವಾಸಕ್ಕೆ ಆಗಮಿಸುವವರಿಗೂ ಉಪಯುಕ್ತವಾಗಲಿದೆ. ಈ ರೈಲು ಸಂಚಾರ ಧಾರ್ಮಿಕ, ಬೀಚ್‌ ಹಾಗೂ ಶೈಕ್ಷಣಿಕ ಪ್ರವಾಸಕ್ಕೆ ನೆರವಾಗಲಿದೆ. ಗೋವಾಕ್ಕೆ ಅನ್ಯ ಕೆಲಸದ ನಿಮಿತ್ತ ತೆರಳುವವರು ಒಂದೇ ದಿನದಲ್ಲಿ ಕೆಲಸ ಮುಗಿಸಿ ಬರಬಹುದಾಗಿದೆ .ಮಂಗಳೂರು-ಮಡ್ಗಾಂವ್‌ ವಂದೇ ಭಾರತ್‌ ರೈಲಿಗೆ ಮುಂಬೈ-ಮಡ್ಗಾಂವ್‌ ವಂದೇ ಭಾರತ್‌ ರೈಲಿನ ಸಂಪರ್ಕ ಕಲ್ಪಿಸಲಾಗಿದೆ ಎ೦ದರು.
ತಿರುವನಂತಪುರ-ಕಾಸರಗೋಡು ವಂದೇ ಭಾರತ್‌ ರೈಲವನ್ನು ಮಂಗಳೂರಿಗೆ ವಿಸ್ತರಣೆ ಅಥವಾಕೊಚ್ಚಿನ್‌-ಮಂಗಳೂರು ವಂದೇ ಭಾರತ್ ರೈಲಿಗೆ ಮನವಿ ಸಲ್ಲಿಸಲಾಗಿದೆ.


ಮಂಗಳೂರು-ಬೆಂಗಳೂರು ನಡುವೆ ಮಾರ್ಚ್‌ ಬಳಿಕ ವಂದೇ ಭಾರತ್‌ ಸಂಚಾರ ಸಾಧ್ಯವಾಗಲಿದೆ.ಪ್ರಸಕ್ತ ಸುಬ್ರಹ್ಮಣ್ಯ ಮಾರ್ಗದಲ್ಲಿ ರೈಲು ಹಳಿ ವಿದ್ಯುದೀಕರಣ ಕಾಮಗಾರಿ
ನಡೆಯುತ್ತಿದ್ದು, ಸಕಲೇಶಪುರ ವರೆಗೆ ಕಾಮಗಾರಿ ಮಾರ್ಚ್‌ ವೇಳೆಗೆ ಮುಕ್ತಾಯಗೊಳ್ಳಲಿದೆ ಎಂದವರು ಹೇಳಿದರು.
ಮಂಗಳೂರು ಸೆಂಟ್ರಲ್‌ ರೈಲು ನಿಲ್ದಾಣಅಭಿವೃದ್ಧಿಪಡಿಸಲು ಉದ್ದೇಶಿಸಲಾಗಿದೆ. ಸುಮಾರು 350 ಕೋಟಿ ರು.ಗಳ ಕಾಮಗಾರಿಗೆ ಟೆಂಡರ್‌ ಕರೆಯಲಾಗಿದ್ದು, ಶೀಘ್ರ ಕಾಮಗಾರಿ ಕೂಡ ಆರಂಭವಾಗಲಿದೆ. ದ.ಕ.ಜಿಲ್ಲೆಯಲ್ಲಿಕೇಂದ್ರ ಸರ್ಕಾರದಿಂದ ರೈಲ್ವೆಯ ವಿವಿಧ ಅಭಿವೃದ್ಧಿ ಯೋಜನೆಗಳಿಗೆ 416.98 ಕೋಟಿ ರು.ಮಂಜೂರಾಗಿದೆ. ಸೆಂಟ್ರಲ್‌ ನಿಲ್ದಾಣದಲ್ಲಿ ವಿವಿಧ ಕಾಮಗಾರಿಗೆ13.29 ಕೋಟಿ ರು.,

ಸಕಲೇಶಪುರ-ಮಂಗಳೂರು ವರೆಗೆ 7 ಲೆವೆಲ್ ಕ್ರಾಸ್‌ ಮೇಲ್ಸೇತುವೆಯಾಗಿ ಪರಿವರ್ತಿಸಲು44.13 ಕೋಟಿ ರು., ಸೆಂಟ್ರಲ್ ನಿಲ್ದಾಣದಲ್ಲಿ ಭದ್ರತಾ ವ್ಯವಸ್ಥೆ ಆಧುನೀಕರಣಗೊಳಿಸಲು 1.40 ಕೋಟಿ ರು., ಹೊಸ ಫ್ಲ್ಯಾಟ್‌ಫಾರಂಗಳಿಗೆ ಶೆಲ್ಟರ್‌, ಲಿಫ್ಟ್‌ ಅಳವಡಿಕೆಗೆ 2.5ಕೋಟಿ ರು. ಮಂಜೂರಾಗಿದೆ. ಪ್ರಸಕ್ತ 1,537.65 ಕೋಟಿ ರು.ಗಳ ವಿವಿಧ ಕಾಮಗಾರಿಗಳು ಪ್ರಗತಿಯಲ್ಲಿವೆ ಎಂದರು .
ಮಂಗಳೂರು ದಕ್ಷಿಣ ಶಾಸಕ ವೇದವ್ಯಾಸ್‌ ಕಾಮತ್‌ ಅವರು ಮಾತನಾಡಿ ಮಂಗಳೂರು-ಮಡಗಾಂವ್ ನಡುವಿನ ‘ವಂದೇ ಭಾರತ್’ ಎಕ್ಸ್ಪ್ರೆಸ್ ರೈಲ್‌ ಆರ೦ಭದಿ೦ದ ದಕ್ಷಿಣ ಕನ್ನಡ, ಉಡುಪಿ, ಕಾರವಾರ ಹಾಗೂ ಗೋವಾ ಜನತೆಗೆ ಬಹಳ ಉಪಯುಕ್ತವಾಗಲಿದೆ .ರೈಲು ಮಂಗಳೂರಿನಿಂದ ಬೆಳಗ್ಗೆ 8.30ಕ್ಕೆ ಹೊರಟು ಮಧ್ಯಾಹ್ನ 1.15ಗಂಟೆಗೆ ಮಡ್ಗಾಂವ್‌ಗೆ ತಲುಪಲಿದೆ. ಅಲ್ಲಿಂದ ಮುಂಬೈಗೆ ವಂದೇ ಭಾರತ್ ರೈಲು ಸಂಪರ್ಕ ಸಿಗಲಿದೆ. ಹಾಗಾಗಿ ಮುಂಬೈಗೆ ಪ್ರಯಾಣಿಸುವವರು ಮಂಗಳೂರಿನಿಂದ ವಂದೇ ಭಾರತ್‌ ರೈಲಿನಮೂಲಕ ಕೇವಲ 10 ಗಂಟೆಯಲ್ಲಿ ತಲುಪಲು ಸಾಧ್ಯವಿದೆ ಎಂದು ಹೇಳಿದರು.
ಮೇಯರ್‌ ಸುಧೀರ್‌ ಶೆಟ್ಟಿ ಕಣ್ಣೂರು, ಮನಪಾ ಸದಸ್ಯ ಎ.ಸಿ. ವಿನಯರಾಜ್‌ , ರೈಲ್ವೆ ಪಾಲಕ್ಕಾಡ್‌ ವಿಭಾಗೀಯ ಅಧಿಕಾರಿ ಅರುಣ್‌ಚತುರ್ವೇದಿ, ಎಡಿಆರ್‌ಎಂ ಜಯಕೃಷ್ಣ ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles