ಮಂಗಳೂರು:ರಾಜ್ಯ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕ್ರತಿಕ ಸ್ಪರ್ಧೆ ಅಕ್ಟೋಬರ್ 27 ರಿಂದ 29 ರವರೆಗೆ ತುಮಕೂರು ಜಿಲ್ಲೆಯಲ್ಲಿ ನಡೆಯಲಿದೆ.
2022 ಡಿಸೆಂಬರ್ 14 ಮತ್ತು 15 ರಂದು ಮಂಗಳೂರಿನಲ್ಲಿ ನಡೆದ 2022-2023ನೇ ಸಾಲಿನ ದ.ಕ ಜಿಲ್ಲಾ ಮಟ್ಟದ ಸರ್ಕಾರಿ ನೌಕರರ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಿ ವೈಯಕ್ತಕ ಸ್ಪರ್ಧೆಯಲ್ಲಿ ಪ್ರಥಮ ಮತ್ತು ದ್ವಿತೀಯ ಹಾಗೂ ತಂಡ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಪಡೆದಿರುವವರು ಮಾತ್ರ ಈ ರಾಜ್ಯ ಮಟ್ಟದ ಕ್ರೀಡಾಕೂಟದಲ್ಲಿ ಭಾಗವಹಿಸಲು ಅರ್ಹರಾಗಿರುತ್ತಾರೆ.
ದ.ಕ ಜಿಲ್ಲೆಯಿಂದ ಆಯ್ಕೆಯಾದ ಅರ್ಹ ನೌಕರ ಕ್ರೀಡಾಪಟುಗಳು ಅಕ್ಟೋಬರ 27 ರಂದು ಬೆಳಗ್ಗೆ 8 ಗಂಟೆಯೊಳಗೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ,ಜಿಲ್ಲಾ ಕ್ರೀಡಾಂಗಣ, ತುಮಕೂರು ಜಿಲ್ಲೆ ಇಲ್ಲಿ ್ಲ ವರದಿ ಮಾಡಿಕೊಳ್ಳುವಂತೆ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಸಹಾಯಕ ನಿರ್ದೇಶಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
