ಮಂಗಳೂರು: ಅಮ್ಮ ಕಲಾವಿದೆರ್ ತಂಡದ “ಅಮ್ಮೆರ್” ನಾಟಕದ ನೂರರ ಸಂಭ್ರಮ ಮ೦ಗಳವಾರ ಮಂಗಳೂರಿನ ಪುರಭವನದಲ್ಲಿ ಜರಗಲಿದೆ.
ಶಿವಾನಂದ ಶೆಟ್ಟಿ ಮಂಗಲ್ಪಾಡಿ ಸಾರಥ್ಯದಲ್ಲಿ,’ಲಯನ್ ಕಿಶೋರ್ ಡಿ. ಶೆಟ್ಟಿ’ ಇವರ ಸಲಹೆ ಸಹಕಾರದೊಂದಿಗೆ ಸೋಮನಾಥ ಶೆಟ್ಟಿ ಮಂಗಲ್ಪಾಡಿ ರಚಿಸಿ, ‘ತುಳುನಾಡ ಕಲಾಬಿರ್ಸೆ’ ದೀಪಕ್ ರೈ ಪಾಣಾಜೆ ಹಾಗೂ ‘ಮಂಗಳೂರು ಮೀನನಾಥ’ ರಾಘವೇಂದ್ರ ರೈ ಅಭಿನಯದಲ್ಲಿ “ರಂಗ್ ದ ರಾಜೆ” ಸುಂದರ್ ರೈ ಮಂದಾರ ನಿರ್ದೇಶಿಸಿ ಅಭಿನಯಿಸುವ ಅಮ್ಮ ಕಲಾವಿದೆರ್ ಕುಡ್ಲ ಅಭಿನಯಿಸುವ “ಅಮ್ಮೆರ್” ತುಳು ನಾಟಕದ ನೂರರ ಸಂಭ್ರಮದ ನಾಟಕ ಪ್ರದರ್ಶನವು ನಾಳೆ ಮಂಗಳೂರಿನ ಪುರಭವನದಲ್ಲಿ ಸಂಜೆ 5:30 ಗಂಟೆಗೆ ನಡೆಯಲಿದೆ. ಸರ್ವರಿಗೂ ಉಚಿತ ಪ್ರವೇಶವಿದೆ ಎಂದು ಪ್ರಕಟಣೆಯಲ್ಲಿ ತಿಳಿಸಿದೆ.