35.1 C
Karnataka
Monday, May 11, 2026

ಜೈ ತುಳು ಸಿನಿಮಾದ ಶತ ಸಂಭ್ರಮ,”ಬ್ರೋ” ಹೊಸ ತುಳು ಸಿನಿಮಾದ ಘೋಷಣೆ

ಮಂಗಳೂರು: ತುಳು ನಮ್ಮ ಪ್ರಾದೇಶಿಕ ಭಾಷೆಯಾದರೂ ಅದರ ಅಭಿಮಾನದಿಂದ ತುಳು ಸಿನಿಮಾಗಳನ್ನು ನಿರ್ಮಿಸುವ ನಿರ್ಮಾಪಕರು ಕಲಾವಿದರಿಗೆ ಆಸರೆಯಾಗಿದ್ದಾರೆ. ಜೈ ತುಳು ಸಿನಿಮಾ ತುಳು ಚಿತ್ರರಂಗಕ್ಕೆ ಹೊಸ ಚೈತನ್ಯ ನೀಡಿದೆ. ವಿಶ್ವದ ತುಳುವರು ಈ ಸಿನಿಮಾವನ್ನು ಗೆಲ್ಲಿಸಿದ್ದಾರೆ ಎಂದು ಕೆಪಿಸಿಸಿ ಕಾರ್ಯದರ್ಶಿ ಮಿಥುನ್ ಎಂ. ರೈ ಹೇಳಿದರು.
ಅವರು ಬಜಪೆ ಬಳಿಯ ಮರವೂರಿನ ಸಶೂಲಿನ್ ಪ್ಯಾಲೇಸ್ ನಲ್ಲಿ “ಜೈ” ತುಳು ಸಿನಿಮಾದ ನೂರನೇ ದಿನದ ಸಂಭ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ನಟ ನಿರ್ದೇಶಕ ರೂಪೇಶ್ ಶೆಟ್ಟಿ ಮಾತನಾಡಿ, “ಜೈ” ಸಹಿತ ತನ್ನ ಎಲ್ಲಾ ಚಿತ್ರಗಳು ಜನರ ಆಶೀರ್ವಾದದಿಂದ ಯಶಸ್ವಿಯಾಗಿದೆ. ಸಣ್ಣ ಆಲ್ಬಂ ಸಾಂಗ್‌ನಿಂದ ನಿರೂಪಕನಾಗಿ ಬಿಗ್ ಬಾಸ್ ವಿಜೇತನಾಗಿರುವ ತನಗೆ ವಿಶ್ವ ಮಟ್ಟದಲ್ಲಿನ ತುಳುವರು ಅಭಿಮಾನದಿಂದ ಪ್ರೋತ್ಸಾಹ ನೀಡಿದ್ದಾರೆ ತುಳು ಸಿನಿಮಾ ಕ್ಷೇತ್ರ ಇನ್ನಷ್ಟು ಎತ್ತರಕ್ಕೆ ಏರಬೇಕೆಂಬ ಕನಸಿಗೆ ಎಲ್ಲರ ಸಹಕಾರ ಅಗತ್ಯ ಎಂದರು.
ಈ ಸಂದರ್ಭದಲ್ಲಿ ಸಿನಿಮಾ ಕ್ಷೇತ್ರದ ವಿವಿಧ ಸಾಧಕರನ್ನು ಹಾಗೂ ಜೈ ಸಿನಿಮಾಕ್ಕೆ ಸಹಕರಿಸಿದ ಗಣ್ಯರನ್ನು, ಭಾರತ್ ಸಿನಿಮಾದ ಮಾಲಕ ಬಾಲಕೃಷ್ಣ ಶೆಟ್ಟಿ, ಹಾಗೂ ಸುರತ್ಕಲ್ ಸಿನಿ ಗ್ಯಾಲಾಕ್ಸಿನ ಮುಖ್ಯಸ್ಥ ದೀಪಕ್, ಸಿನಿಮಾ ತಂತ್ರಜ್ಞರನ್ನು, ಕಲಾವಿದರನ್ನು ವಿಶೇಷವಾಗಿ ಗೌರವಿಸಲಾಯಿತು.
ಸಮಾರಂಭದಲ್ಲಿ ಉದ್ಯಮಿ ಡಾ ಆರ್ .ಕೆ .ಶೆಟ್ಟಿ ಚಿತ್ರ ನಿರ್ಮಾಪಕರಾದ ಮುಗ್ರೋಡಿ ಸುಧಾಕರ ಶೆಟ್ಟಿ, ಅನಿಲ್ ಶೆಟ್ಟಿ, ಮಂಜುನಾಥ ಅತ್ತಾವರ್, ಸಮಾಜ ಸೇವಕ ಭಾಸ್ಕರಚಂದ್ರ ಶೆಟ್ಟಿ, ಸಂಗೀತ ನಿರ್ದೇಶಕ ಗುರುಕಿರಣ್, ರಜತ್ ಹೆಗ್ಡೆ, ಅರವಿಂದ ಬೋಳಾರ್, ಉಮೇಶ್ ಮಿಜಾರ್, ಪ್ರಸನ್ನ ಶೆಟ್ಟಿ ಬೈಲೂರು, ಸಂದೀಪ್ ಶೆಟ್ಟಿ ಮಾಣಿಬೆಟ್ಟು, ಡಾ.ಶಿವಚರಣ್ ಶೆಟ್ಟಿ, ನವೀನ್ ಶೆಟ್ಟಿ ಎಡ್ಮೆಮಾರ್, ಲೀಲಾಕ್ಷ ಕರ್ಕೇರ, ಲಕ್ಷ್ಮಣ್ ಕುಂದರ್, ಬಾಳ ಜಗನ್ನಾಥ ಶೆಟ್ಟಿ, ಶ್ಯಾಮ್, ನಾರಾಯಣ ಪೂಜಾರಿ, ಚಿತ್ರ ನಟಿ ಅದ್ವಿತಿ ಶೆಟ್ಟಿ, ನಟ ರಾಜ್ ದೀಪಕ್ ಶೆಟ್ಟಿ, ನವೀನ್ ಶೆಟ್ಟಿ ಆರ್ಯನ್ಸ್ ಮತ್ತಿತರರು ಉಪಸ್ಥಿತರಿದ್ದರು. ನಿತೇಶ್ ಶೆಟ್ಟಿ ಎಕ್ಕಾರ್ ಕಾರ್ಯಕ್ರಮ ನಿರ್ವಹಿಸಿದರು.
ಹೊಸ ತುಳು ಚಿತ್ರ “ಬ್ರೊ…” ಘೋಷಣೆ
ಹ್ಯಾಟ್ರಿಕ್ ಹಿಟ್ ಸಿನಿಮಾಗಳನ್ನು ನೀಡಿ ಕೋಸ್ಟಲ್‌ವುಡ್‌ನಲ್ಲಿ ಹೊಸ ಸಂಚಲನ ಸೃಷ್ಟಿಸಿರುವ ಜನಪ್ರಿಯ ನಟ ನಿರ್ದೇಶಕ ಬಿಗ್ ಬಾಸ್ ವಿನ್ನರ್ ರೂಪೇಶ್ ಶೆಟ್ಟಿ ಹೊಸ ಸಿನಿಮಾದ ಶೀರ್ಷಿಕೆಯನ್ನು ಘೋಷಿಸಿದ್ದಾರೆ. “ಜೈ” ಸಿನಿಮಾದ ಸಂಭ್ರಮದಲ್ಲಿ ತಮ್ಮ ಮುಂದಿನ ಸಿನಿಮಾವನ್ನು “ಬ್ರೊ” ಎಂಬ ಶೀರ್ಷಿಕೆಯನ್ನು ಪ್ರಚುರ ಪಡಿಸಿ ಪ್ರೇಕ್ಷಕರಲ್ಲಿ ಕುತೂಹಲ ಹೆಚ್ಚಿಸಿದ್ದಾರೆ. ಗಿರಿಗಿಟ್, ಗಮ್‌ಜಾಲ್, ಸರ್ಕಸ್, ಜೈ ಸಿನಿಮಾದ ಮೂಲಕ ಕೋಸ್ಟಲ್‌ವುಡ್ ನಿರ್ದೇಶನಕ್ಕೂ ಸೈ ಎಂದು ಸಾಬೀತು ಪಡಿಸಿರುವ ತುಳುನಾಡ ರಾಕ್‌ಸ್ಟಾರ್ ಮತ್ತೆ ನಿರ್ದೇಶಕನಾಗಿ ಮುಂದುವರಿದಿದ್ದಾರೆ. ರೂಪೇಶ್ ಅವರು ತಮ್ಮ ಮುಂದಿನ ಚಿತ್ರಕ್ಕೆ “ಬ್ರೊ” ಎನ್ನುವ ಟೈಟಲ್ ಇಟ್ಟಿದ್ದಾರೆ. ಗುಲಾಬಿ ಹೂ ಕಚ್ಚಿಕೊಂಡು ಲವರ್ ಬಾಯ್ ನಂತೆ ರೂಪೇಶ್ ಕಾಣಿಸಿಕೊಂಡಿದ್ದು, ಪೋಸ್ಟರ್‌ನಲ್ಲಿ ಹಣ ತುಂಬಿದ ಬ್ಯಾಗ್, ಕಾರಿನಲ್ಲಿ ಪರಾರಿ ಆಗುವ ದೃಶ್ಯ ಅದರ ಹಿಂದೆ ಜನ ಓಡೋಡಿ ಬರುವುದನ್ನು ತೋರಿಸಲಾಗಿದೆ. ಮೇಲ್ನೋಟಕ್ಕೆ ಇದೊಂದು ಕಾಮಿಡಿ ಲವ್ ಜಾನರ್‌ನ ಸಿನಿಮಾದಂತೆ ಕಾಣುತ್ತದೆ, ಕೋಸ್ಟಲ್‌ವುಡ್‌ಗೆ ಇದೊಂದು ರಿಫ್ರೆಶ್ ಕಥೆಯಂತೆ ಟೈಟಲ್‌ನಲ್ಲಿ ಬಿಗ್ ಲವ್ ರಿಸ್ಕಿ ಒನ್ಲಿ ಎನ್ನುವ ಸಬ್ ಟೈಟಲ್ ಇಡಲಾಗಿದೆ. ರೂಪೇಶ್ ಅವರ ಲುಕ್ ಸಖತ್ ಕೂಲ್ ಆಗಿದೆ. ಶೂಲಿನ್ ಫಿಲಿಂಸ್ ಬ್ಯಾನರ್‌ನಲ್ಲಿ ಮುಂಜುನಾಥ್ ಅತ್ತವಾರ್, ಮುಗ್ರೋಡಿ ಪ್ರೋಡಕ್ಷನ್ಸ್ ಚಿತ್ರಕ್ಕೆ ಬಂಡವಾಳ ಹಾಕಲಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles