ಮ೦ಗಳೂರು: ಎಂಸಿಸಿ ಬ್ಯಾಂಕ್ – ಬೈಂದೂರು ಶಾಖೆಯು ಪ್ರಾರಂಭವಾದ ಕೇವಲ ಆರು ತಿಂಗಳೊಳಗೆ ರೂ.10 ಕೋಟಿ ವ್ಯವಹಾರ ವಹಿವಾಟು ದಾಟಿದ ಗಮನಾರ್ಹ ಸಾಧನೆಯ ಸ್ಮರಣಾರ್ಥವಾಗಿ, ಮಾರ್ಚ್ 8ರಂದು ಬೈಂದೂರು ಶಾಖೆಯ ಆವರಣದಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ ಮತ್ತು ಉಚಿತ ವೈದ್ಯಕೀಯ ಆರೋಗ್ಯ ಶಿಬಿರದೊಂದಿಗೆ ಭವ್ಯ ಆಚರಣೆಯನ್ನು ಆಯೋಜಿಸಲಾಗಿತ್ತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಂಸಿಸಿ ಬ್ಯಾಂಕ್ ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೊ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಬೈಂದೂರು ಹೋಲಿ ಕ್ರಾಸ್ ಚರ್ಚ್ ನ ಧರ್ಮಗುರುಗಳಾದ ವಂದನೀಯ ಫಾದರ್ ವಿನ್ಸೆಂಟ್ ಕುವೆಲ್ಲೊ; ರಂಗಭೂಮಿ ಕಲಾವಿದ ಗಣೇಶ್ ಕಾರಂತ್; ಸಮಾಜ ಸೇವಕ ಫಯಾಜ್ ಅಲಿ; ಮತ್ತು ಬೈಂದೂರು ಯೆಡ್ಥರೆಯಲ್ಲಿರುವ ಧರ್ಮಸ್ಥಳ ಸ್ವಸಹಾಯ ಗುಂಪಿನ ಅಧ್ಯಕ್ಷೆ ಶ್ರೀಮತಿ ಶೈಲಾ ಭಾಗವಹಿಸಿದ್ದರು. ಫಾ| ಮುಲ್ಲರ್ ಮೆಡಿಕಲ್ ಕಾಲೇಜು ಅಸ್ಪತೆಯ ಡಾ| ಎಲ್‌ರೊಯ್ ಸಲ್ಡಾನ್ಹಾ, ಶಾಖಾ ನಿರ್ದೇಶಕರಾದ ಎಲ್ರಾಯ್ ಕೆ. ಕ್ರಾಸ್ಟೊ; ಜನರಲ್ ಮ್ಯಾನೇಜರ್ ಸುನಿಲ್ ಮಿನೇಜಸ್; ಮತ್ತು ಬೈಂದೂರ್ ಶಾಖೆಯ ಹಿರಿಯ ವ್ಯವಸ್ಥಾಪಕ ಸಂದೀಪ್ ಕ್ವಾಡ್ರಸ್ ವೇದಿಕೆಯಲ್ಲಿದ್ದರು.

ಫಾ| ಮುಲ್ಲರ್ ಮೆಡಿಕಲ್ ಕಾಲೇಜು, ಮಂಗಳೂರು ಏರ್ಪಡಿಸಿದ ಉಚಿತ ವೈದ್ಯಕೀಯ ಆರೋಗ್ಯ ಶಿಬಿರವನ್ನು ವೇದಿಕೆಯ ಮೇಲಿದ್ದ ಗಣ್ಯರು ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು,
ಆಚರಣೆಯ ಭಾಗವಾಗಿ, ಬೈಂದೂರು ಶಾಖೆಯ 10 ಸ್ಥಾಪಕ ಗ್ರಾಹಕರು, ಅಧ್ಯಕ್ಷರು, ಗೌರವಾನ್ವಿತ ಅತಿಥಿಗಳು, ಶಾಖಾ ವ್ಯವಸ್ಥಾಪಕರು ಮತ್ತು ಇತರ ಗಣ್ಯರ ಸಮ್ಮುಖದಲ್ಲಿ ಕೇಕ್ ಕತ್ತರಿಸಿ ಸಂಭ್ರಮವನ್ನು ಆಚರಿಸಲಾಯಿತು.
ಈ ಸಂದರ್ಭದಲ್ಲಿ, ಬೈಂದೂರು ಶಾಖೆಯ ಸ್ಥಾಪಕ ಗ್ರಾಹಕರನ್ನು ಅಧ್ಯಕ್ಷರಾದ ಸಹಕಾರ ರತ್ನ ಅನಿಲ್ ಲೋಬೊ ಅವರು ಶಾಖೆಯ ಪ್ರಾರಂಭದಿ೦ದಲೂ ಶಾಖೆಯ ಮೇಲೆ ಅವರ ನಂಬಿಕೆ, ಪ್ರೋತ್ಸಾಹ ಮತ್ತು ಅಡಿಪಾಯದ ಬೆಂಬಲವನ್ನು ಗುರುತಿಸಿ. ಶಾಖೆಯು ಗಮನಾರ್ಹವಾಗಿ ಕಡಿಮೆ ಅವಧಿಯಲ್ಲಿ ರೂ. 10 ಕೋಟಿ ವ್ಯವಹಾರದ ಮೈಲಿಗಲ್ಲನ್ನು ಸಾಧಿಸುವಲ್ಲಿ ಅವರ ಪ್ರೋತ್ಸಾಹಕ್ಕಾಗಿ ಶಾಖೆಯ ಎಲ್ಲಾ ಗ್ರಾಹಕರ ಪರವಾಗಿ ಸನ್ಮಾನಿಸಿದರು, ಎಂಸಿಸಿ ಬ್ಯಾಂಕಿನ ಬೈಂದೂರ್ ಶಾಖೆಯ ಬೆಳವಣಿಗೆಗೆ ಅವರ ನಿರಂತರ ಬೆಂಬಲ, ವಿಶ್ವಾಸ ಮತ್ತು ಬದ್ಧತೆಗೆ ಹೃತ್ಪೂರ್ವಕ ಕೃತಜ್ಞತೆಯನ್ನು ವ್ಯಕ್ತಪಡಿಸಿದರು. ಬೈಂದೂರು ಶಾಖೆಯು ಆರು ತಿಂಗಳೊಳಗೆ ರೂ.10 ಕೋಟಿ ವ್ಯವಹಾರವನ್ನು ಸಾಧಿಸುವುದು ಎಂಸಿಸಿ ಬ್ಯಾಂಕಿನ ಐತಿಹಾಸಿಕ ಮೈಲಿಗಲ್ಲು ಎಂದು ಹೇಳಿದರು.
ಅಂತರಾಷ್ಟ್ರೀಯ ಮಹಿಳಾ ದಿನಾಚರಣೆಯ ಸಂದರ್ಭದಲ್ಲಿ, ಬೈಂದೂರು ಶಾಖೆಯ ಮಹಿಳಾ ಗ್ರಾಹಕರಿಗೆ ಬ್ಯಾಂಕಿನೊ೦ದಿಗಿನ ಅವರ ಅಮೂಲ್ಯ ಸಂಬ೦ಧ ಮತ್ತು ಶಾಖೆಯ ಬೆಳವಣಿಗೆಗೆ ನೀಡಿದ ಕೊಡುಗೆಯನ್ನು ಗುರುತಿಸಿ ಶಾಲು, ಉಡುಗೊರೆ ಮತ್ತು ಗುಲಾಬಿ ಹೊದಿಕೆಯನ್ನು ನೀಡಿ ಗೌರವಿಸಲಾಯಿತು. ಮಹಿಳಾ ಸಿಬ್ಬಂದಿಯನ್ನು ಈ ಸಂದರ್ಭದಲ್ಲಿ ಸನ್ಮಾಸಿಸಲಾಯಿತು. ಬೈಂದೂರು ಶಾಖೆಯ ಹಿರಿಯ ಪ್ರಬಂಧಕರು ಮತ್ತು ಸಿಬ್ಬಂದಿಗಳನ್ನು ಹಾಗೂ ಶಾಖಾ ನಿರ್ದೇಶಕರಾದ ಎಲ್‌ರೊಯ್ ಕೆ ಕ್ರಾಸ್ಟೊರವರನ್ನೂ ಸನ್ಮಾನಿಸಲಾಯಿತು.
ಬ್ಯಾಂಕಿನ ಸಿಬ್ಬದಿ ಮನೋಜ್ ಲೋಪೆಸ್ ಮತ್ತು ಖ್ಯಾತ ಗಾಯಕಿ ಕು| ಟ್ರಿಜಾ ಲೊಪೆಸ್ ಅವರ ಪ್ರಾರ್ಥನಾ ಗೀತೆಯೊಂದಿಗೆ ಕಾರ್ಯಕ್ರಮವು ಪ್ರಾರಂಭವಾಯಿತು. ಶಾಖಾ ನಿರ್ದೇಶಕ ಎಲ್‌ರೊಯ್ ಕೆ. ಕ್ರಾಸ್ಟೊ ಸ್ವಾಗತಿಸಿ, ಬ್ರಹ್ಮಾವರ ಶಾಖಾ ವ್ಯವಸ್ಥಾಪಕ ಒವಿನ್ ರೆಬೆಲ್ಲೊ ನಿರೂಪಿಸಿ ವಂದಿಸಿದರು.
ಬೈಂದೂರು ಶಾಖೆಯು ರೂ. 10 ಕೋಟಿ ವ್ಯವಹಾರದ ಮೈಲಿಗಲ್ಲು ಸಾಧಿಸಿದ ಸಂದರ್ಭದಲ್ಲಿ ಗ್ರಾಹಕರು ಮತ್ತು ಸಾರ್ವಜನಿಕರಿಗಾಗಿ ಉಚಿತ ವೈದ್ಯಕೀಯ ಆರೋಗ್ಯ ಶಿಬಿರವನ್ನು ಫಾ| ಮುಲ್ಲರ್ ಮೆಡಿಕಲ್ ಕಾಲೇಜ್ ಅಸ್ಪತ್ರೆಯ ವತಿಯಿಂದ ಆಯೋಜಿಸಲಾಗಿತ್ತು. ಫಾದರ್ ಮುಲ್ಲರ್ ವೈದ್ಯಕೀಯ ಕಾಲೇಜು ಆಸ್ಪತ್ರೆಯ ವೈದ್ಯರಾದ ಡಾ| ಎಲ್‌ರೊಯ್ ಸಲ್ಡಾನ್ಹಾರವರು ವೈದ್ಯಕೀಯ ಆರೋಗ್ಯ ಶಿಬಿರದ ಪರಿಚಯವನ್ನು ಮಾಡಿ, ಶಿಬಿರದ ಮೂಲಕ ಸಾರ್ವಜನಿಕರಿಗೆ ನೀಡಲಾಗುವ ಸೇವೆಗಳು ಮತ್ತು ಪ್ರಯೋಜನಗಳನ್ನು ವಿವರಿಸಿದರು.


