25.1 C
Karnataka
Wednesday, May 27, 2026

ಕೊಪ್ಪಲಕಾಡು ಚರಂಡಿ ನಿರ್ಮಾಣ ಕಾಮಗಾರಿಗೆ ಭೂಮಿ ಪೂಜೆ

ಮ೦ಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 22ನೇ ಕದ್ರಿ ಪದವು ವಾರ್ಡಿನ ಕೊಪ್ಪಲಕಾಡು ಶಂಕರಭವನ ರಸ್ತೆಯ ಚರಂಡಿ ನಿರ್ಮಾಣ ಕಾಮಗಾರಿಯು ರೂ. 25ಲಕ್ಷ ವಿಶೇಷ ಅನುದಾನದಲ್ಲಿ ನಡೆಯಲಿದ್ದು ಶಾಸಕ ವೇದವ್ಯಾಸ ಕಾಮತ್ ರವರ ನೇತೃತ್ವದಲ್ಲಿ ಭೂಮಿ ಪೂಜೆಯು ನಡೆಯಿತು.

ನಂತರ ಮಾತನಾಡಿದ ಶಾಸಕರು, ಈ ಭಾಗಕ್ಕೆ ಅತೀ ಅಗತ್ಯವಿರುವ ಚರಂಡಿ ನಿರ್ಮಾಣ ಕಾಮಗಾರಿಗೆ ಮಾಜಿ ಮೇಯ‌ರ್ ಹಾಗೂ ಸ್ಥಳೀಯ ನಿಕಟಪೂರ್ವ ಪಾಲಿಕೆ ಸದಸ್ಯರಾದ ಶ್ರೀ ಜಯಾನಂದ ಅಂಚನ್‌ ರವರು ವಿಶೇಷ ರೀತಿಯಲ್ಲಿ ಶ್ರಮ ವಹಿಸಿದ್ದಾರೆ. ಸ್ಥಳೀಯರು ಸಹ ಈ ಬಗ್ಗೆ ಅನೇಕ ಬಾರಿ ಮನವಿ ಮಾಡಿದ್ದು ಲೋಕೋಪಯೋಗಿ ಇಲಾಖೆಯಿಂದ ಅನುದಾನಗಳನ್ನು ಹೊಂದಿಸಿಕೊಂಡು ಕಾಮಗಾರಿಗೆ ಚಾಲನೆ ನೀಡುತ್ತಿರುವುದು ಸಂತಸ ತಂದಿದೆ ಎಂದರು.

ಈ ಸಂದರ್ಭದಲ್ಲಿ ಪ್ರಮುಖರಾದ ಸದಾನಂದ ಪ್ರಭು, ಅಶೋಕ್, ಸೌಮ್ಯ ಧನರಾಜ್, ಗೋಪಾಲ ಶೆಟ್ಟಿ, ವಿನಯ್, ಪ್ರವೀಣ್ ನಿಡ್ಡೇಲ್, ಮಧುಸೂಧನ್ ಕುಲಾಲ್, ಸೇರಿದಂತೆ ಸ್ಥಳೀಯರು, ವಾರ್ಡಿನ ಬಿಜೆಪಿ ಕಾರ್ಯಕರ್ತರು, ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles