ಮಂಗಳೂರು: ಪುತ್ತೂರು-ಉಪ್ಪಿನಂಗಡಿ ರಸ್ತೆಯ ಹಾರಾಡಿ ರೈಲ್ವೇ ಸೇತುವೆಯ ಕೆಳಭಾಗದ ರಸ್ತೆಯ ಕಾಂಕ್ರೀಟಿಕರಣ ಕಾಮಗಾರಿ ಸಂಬಂಧ ಜೂನ್ 18 ರಿಂದ ಜುಲೈ 18 ರವರೆಗೆ ರಸ್ತೆಯಲ್ಲಿ ವಾಹನಗಳ ಸಂಚಾರವನ್ನು ತಾತ್ಕಾಲಿಕವಾಗಿ ನಿಷೇಧಿಸಿ, ಮಾರ್ಗ ಬದಲಾವಣೆ ಮಾಡಿ ಸಂಚರಿಸಲು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಆದೇಶಿಸಿದ್ದಾರೆ.
ಬದಲಿ ಮಾರ್ಗಗಳು:
ಪುತ್ತೂರಿನಿಂದ ಉಪ್ಪಿನಂಗಡಿ ಕಡೆಗೆ ಸಂಚರಿಸುವ ವಾಹನಗಳು ಪುತ್ತೂರು ಖಾಸಗಿ ಬಸ್ ನಿಲ್ದಾಣ ಮಾರ್ಗವಾಗಿ ಮಹಾಲಿಂಗೇಶ್ವರ ದೇವಸ್ಥಾನದ ಗದ್ದೆಯ ಮೂಲಕ ಕೋಟೆಚಾ ಹಾಲ್ ಮುಖಾಂತರ ಉಪ್ಪಿನಂಗಡಿ ರಸ್ತೆಯನ್ನು ಸಂಪರ್ಕಿಸಬೇಕು. ಉಪ್ಪಿನಂಗಡಿಯಿಂದ ಪುತ್ತೂರು ಕಡೆಗೆ ಸಂಚರಿಸುವ ವಾಹನಗಳು ಕೋಟೆಚಾ ಹಾಲ್ ಮೂಲಕ ಎ.ಪಿ.ಎಂ.ಸಿ. ರಸ್ತೆಯಾಗಿ ಪುತ್ತೂರು ಮುಖ್ಯ ರಸ್ತೆಯನ್ನು ಸಂಪರ್ಕಿಸಬೇಕು. ಉಪ್ಪಿನಂಗಡಿ ಕಡೆಯಿಂದ ಮಂಗಳೂರು ಕಡೆಗೆ ಸಂಚರಿಸುವ ವಾಹನಗಳು ಪಡೀಲ್ ಜಂಕ್ಷನ್ ಮೂಲಕ ನಗರ ಮಾರ್ಗದಲ್ಲಿ ಸಂಪರ್ಕಿಸಬೇಕು.
ಬೆಳ್ತಂಗಡಿ ಸೇತುವೆ ಪುನರ್ ನಿರ್ಮಾಣ ಕಾಮಗಾರಿ: ಸಂಚಾರ ಮಾರ್ಗ ಬದಲಾವಣೆ
ಬೆಳ್ತಂಗಡಿ ತಾಲ್ಲೂಕಿನ ಉಜಿರೆ-ಇಂದಬೆಟ್ಟು ಜಿಲ್ಲಾ ಮುಖ್ಯ ರಸ್ತೆಯಲ್ಲಿನ ಕಿ.ಮೀ.1.10 ರಲ್ಲಿ ಬರುವ ಅಂಬಡಬೆಟ್ಟು ಎಂಬಲ್ಲಿ ಸೇತುವೆ ಪುನರ್ ನಿರ್ಮಾಣ ಕಾಮಗಾರಿಯ ಸಂಬಂಧ ಸೇತುವೆಯಲ್ಲಿ ಜೂನ್ 9 ರಿಂದ 2027 ರ ಜನವರಿ 6 ರವರೆಗೆ ಎಲ್ಲಾ ವಾಹನಗಳ ಸಂಚಾರವನ್ನು ನಿಬರ್ಂಧಿಸಿ, ಮಾರ್ಗ ಬದಲಾವಣೆ ಮಾಡಿ ಸಂಚರಿಸಲು ಜಿಲ್ಲಾಧಿಕಾರಿ ದರ್ಶನ್ ಹೆಚ್.ವಿ ಆದೇಶಿಸಿದ್ದಾರೆ.
ಬದಲಿ ಮಾರ್ಗಗಳು: ಉಜಿರೆ ಜನಾರ್ಧನ ಸ್ವಾಮಿ ದೇವಸ್ಥಾನದ ದ್ವಾರದಿಂದ – ಸೂರ್ಯ ದೇವಸ್ಥಾನ ಮಾರ್ಗವಾಗಿ – ಕೇಳ್ತಜೆ ಮುಖಾಂತರ ಸಂಚರಿಸಬೇಕು. ಬೆಳ್ತಂಗಡಿ – ಕಿಲ್ಲೂರು ಕಾಜೂರು ರಸ್ತೆಯ ಇಂದಬೆಟ್ಟು ಗ್ರಾಮದಿಂದ ನೇತ್ರಾವತಿ ಎಸ್.ಟಿ ಕಾಲೊನಿ ಮಾರ್ಗವಾಗಿ ಬೆಳ್ಳೂರು ಕ್ರಾಸ್ ರಸ್ತೆಯಾಗಿ ರಾಜ್ಯ ಹೆದ್ದಾರಿ 276ರ ರಸ್ತೆಯಾದ ಸುಳ್ಯ ಪೈಚಾರು ಬೆಳ್ಳಾರೆ ಸವಣೂರು ಕುದ್ಮಾರು ಅಲಂಕಾರು ಸುರುಳಿ ಮಾದೇರಿ ಪಟ್ರಮೆ ಧರ್ಮಸ್ಥಳ ಮುಂಡಾಜೆ ದಿಡುಪೆ ರಸ್ತೆಯನ್ನು ಸಂಪರ್ಕಿಸಬೇಕು.


