25.4 C
Karnataka
Thursday, November 21, 2024

ವಿವಿ ಕಾಲೇಜಿನಲ್ಲಿ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ

ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರ ಕಲಾ ಭವನದಲ್ಲಿ ವಾಣಿಜ್ಯ ಸಂಘ, ಗ್ರಾಹಕ ವೇದಿಕೆ ಆಂತರಿಕ ಗುಣಮಟ್ಟ ಖಾತರಿ ಕೋಶದ ವತಿಯಿಂದ ವಿದ್ಯಾರ್ಥಿಗಳಿಗಾಗಿ ಒಂದು ದಿನದ ಹೂಡಿಕೆದಾರರ ಜಾಗೃತಿ ಕಾರ್ಯಕ್ರಮ ಆಯೋಜಿಸಲಾಗಿತ್ತು.
ಮಂಗಳೂರಿನ ಪ್ರಮಾಣೀಕೃತ ಆರ್ಥಿಕ ಯೋಜಕ ನವೀನ್ ಜೂಲಿಯನ್ ರೆಗೊ, ವಿದ್ಯಾರ್ಥಿ ಹಂತದಲ್ಲೇ ವೈಯಕ್ತಿಕ ಆರ್ಥಿಕ ಶಿಸ್ತು ಹಾಗೂ ಉಳಿತಾಯದ ಕುರಿತಾದ ಜ್ಞಾನವನ್ನು ಬೆಳೆಸಿಕೊಳ್ಳಬೇಕು. ಆ ನಿಟ್ಟಿನಲ್ಲಿ ವಿದ್ಯಾರ್ಥಿಗಳು ಗಮನ ಹರಿಸಬೇಕು. ಉಳಿತಾಯ ಮಾಡುವುದರಿಂದ ದೇಶದ ಆರ್ಥಿಕ ಬೆಳವಣಿಗೆಯೂ ಸಾಧ್ಯವಾಗುತ್ತದೆ ಎಂದರು.
ಮಂಗಳೂರು ಫ್ರಾಂಕ್ಲಿನ್ ಟೆಂಪಲ್ ಟನ್ ಶಾಖಾಧಿಕಾರಿ ಲಿಯೋ ಅಮಲ್, ಬ್ಯಾಕ್ ಟು ಬೇಸಿಕ್ಸ್ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು. ಮಂಗಳೂರಿನ ಆರ್ಥಿಕ ಸಲಹೆಗಾರ ಮತ್ತು ಹೂಡಿಕೆ ಸೇವಾ ವೃತ್ತಿನಿರತ ವಿಯೋನಿಲ್ ಡಿಸೋಜ, ಅವರು ವೈಯಕ್ತಿಕ ಹೂಡಿಕೆ ಯೋಜನೆ ಕುರಿತು ವಿವರಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ, ವಿದ್ಯಾರ್ಥಿಗಳಿಗೆ ಅದರಲ್ಲೂ ವಿಶೇಷವಾಗಿ ವಾಣಿಜ್ಯ ಕ್ಷೇತ್ರದಲ್ಲಿ ಸ್ಪರ್ಧಾತ್ಮಕತೆ ಹೆಚ್ಚುತ್ತಿದೆ. ಹಾಗಾಗಿ ಬದುಕಿನಲ್ಲಿ ಹೂಡಿಕೆ ಕುರಿತಾದ ಮಾಹಿತಿ ಹೊಂದಿರುವುದು ಅತಯತ ಅಗತ್ಯವಾಗಿದೆ. ಈ ನಿಟ್ಟಿನಲ್ಲಿ ಜಾಗೃತಿ ಕಾರ್ಯಕ್ರಮ ಬಹಳ ಉಪಯುಕ್ತವಾದುದು. ವಿದ್ಯಾರ್ಥಿಗಳು ಇದರ ಸದುಪಯೋಗ ಪಡೆದುಕೊಳ್ಳಬೇಕು ಎಂದು ಕಿವಿ ಮಾತು ಹೇಳಿದರು.ವಾಣಿಜ್ಯ ವಿಭಾಗದ ಪ್ರಾಧ್ಯಾಪಕಿ ಪ್ರೊ. ಶುಭಾಷಿಣಿ ಶ್ರೀವತ್ಸ ಸೇರಿದಂತೆ ವಾಣಿಜ್ಯ ವಿಭಾಗದ ಉಪನ್ಯಾಸಕರು
ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles