ಮಂಗಳೂರು: ಯಂಗ್ ಇಂಡಿಯನ್ಸ್ ಸಂಘಟನೆಯ ಮಂಗಳೂರು ಚಾಪ್ಟರ್ ವತಿಯಿಂದ ದೀಪಾವಳಿ ಹಬ್ಬದ ಮಹತ್ವವನ್ನು ಸಾರುವ ಕಾರ್ಯಕ್ರಮ ಮಂಗಳೂರಿನ ಕಾರ್ ಸ್ಟ್ರೀಟ್ ನಲ್ಲಿರುವ ಬಿ.ಇ.ಎಂ. ಶಾಲೆಯಲ್ಲಿ ನಡೆಯಿತು.
ಈ ವಿಶಿಷ್ಟ ಕಾರ್ಯಕ್ರಮದಲ್ಲಿ ಮಂಗಳೂರಿನ ಅಶೋಕ ನಗರದಲ್ಲಿರುವ ಎಸ್.ಡಿ.ಎಂ. ಶಾಲೆಯ ವಿದ್ಯಾರ್ಥಿಗಳು ತಾವು ತಯಾರಿಸಿದ ಅಲಂಕರಿಸಲ್ಫಟ್ಟ ಹಣತೆ ದೀಪಗಳೊಂದಿಗೆ ಬಿ.ಎ.ಎಂ.ಶಾಲೆಗೆ ಆಗಮಿಸಿ ಅಲ್ಲಿಯ ವಿದ್ಯಾರ್ಥಿಗಳಿಗೆ ಅವುಗಳನ್ನು ಹಂಚಿದರು ಜೊತೆಗೆ ಸಂಘಟನೆಯ ವತಿಯಿಂದ ಸಿಹಿತಿಂಡಿಯನ್ನು ವಿತರಿಸಲಾಯಿತು.
ದೀಪಾವಳಿ ಹಬ್ಬದ ಮಹತ್ವದ ಬಗ್ಗೆ ಯಂಗ್ ಇಂಡಿಯನ್ಸ್ ಸಂಘಟನೆಯ ಗ್ರಾಮೀಣ ಉಪಕ್ರಮದ ಸಂಚಾಲಕ ಈಶ್ವರ ಶೆಟ್ಟಿ ಮಾತನಾಡಿ ದೀಪಾವಳಿ ಎಂದರೆ ಬೆಳಕಿನ ಹಬ್ಬ. ಮೂರು ದಿನಗಳ ಕಾಲ ಆಚರಿಸುವ ಈ ಹಬ್ಬ ಭಾರತೀಯ ಸಂಸ್ಕೃತಿಯಲ್ಲಿ ಬಹಳ ದೊಡ್ಡ ಹಬ್ಬ ಎಂದು ಪರಿಗಣಿತವಾಗಿದೆ. ದೇಶಾದ್ಯಂತ ಇದನ್ನು ಆಚರಿಸಲಾಗುತ್ತದೆ. ಕತ್ತಲೆಯನ್ನು ದೂರ ಮಾಡಲು ಹಣತೆ ಹಚ್ಚುವ ಆಚರಣೆಯ ಈ ಹಬ್ಬ ಬಹಳ ದೊಡ್ದ ಸಂದೇಶವನ್ನು ಸಾರುತ್ತದೆ ಎಂದರು. ಯಂಗ್ ಇಂಡಿಯನ್ಸ್ ಸಂಘಟನೆಯ ಕಾರ್ಯ ಚಟುವಟಿಕೆಗಳ ಬಗ್ಗೆಯೂ ಈ ಸಂದರ್ಭದಲ್ಲಿ ಅವರು ವಿವರಗಳನ್ನು ನೀಡಿದರು.ಯಂಗ್ ಇಂಡಿಯನ್ಸ್ ಸಂಘಟನೆಯ ಸಂಚಾಲಕರಾಗಿರುವ ಸಮೀಕ್ಷಾ ಶೆಟ್ಟಿ, ಸಹ ಸಂಚಾಲಕರಾಗಿರುವ ಆತ್ಮಿಕಾ ಅಮೀನ್ , ಕಾರ್ಯಕಾರಿ ಸಮಿತಿಯ ಸದಸ್ಯರಾದ ಶೋಭನ್ ಶೆಟ್ಟಿ, ಮಧುಕರ್ ಕುಡ್ವಾ, ಅಜಿತ್ ಕುಮಾರ್, ಬಿ.ಇ.ಎಂ. ಶಾಲೆಯ ಪ್ರಾಂಶುಪಾಲರಾದ ಯಶವಂತ ಮಾಡಾ, ಎಸ್.ಡಿ.ಎಂ. ಶಾಲೆಯ ದೀಪಾ ಮತ್ತು ನಾಗರತ್ನ ಅವರು ಉಪಸ್ಥಿತರಿದ್ದರು.