ಮಂಗಳೂರು : ನಗರದ ಎಮ್ಮೆಕೆರೆಯಲ್ಲಿ ಸ್ಮಾರ್ಟ್‌ಸಿಟಿ ಅನುದಾನದೊಂದಿಗೆ ನಿರ್ಮಿಸಿರುವ ಅಂತರಾಷ್ಟ್ರೀಯ ಈಜುಕೊಳ ಸಂರ್ಕಿಣವನ್ನು ನ.24 ರಂದು ಮುಖಮಂತ್ರಿ ಸಿದ್ದರಾಮಯ್ಯ ಅವರು ಉದ್ಘಾಟಿಸಲಿದ್ದಾರೆ.
ಅಂತರಾಷ್ಟ್ರೀಯ ಈಜುಕೊಳ ಸಂರ್ಕಿಣದ ಬಗ್ಗೆ ನ.13 ರಂದು ವಿಧಾನಸಭಾ ಸ್ಪೀಕರ್ ಯು.ಟಿ ಖಾದರ್ ಅವರು ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿ ಸುಮಾರು ಸುಮಾರು 22 ಕೋ.ರೂ. ವೆಚ್ಚದಲ್ಲಿ ಅಂತಾರಾಷ್ಟೀಯ ಗುಣಮಟ್ಟದ ಈಜುಕೊಳವನ್ನು ನಿರ್ಮಿಸಲಾಗಿದೆ. 2 ಕೋ.ರೂ. ಮೊತ್ತವನ್ನು ನಿರ್ವಹಣೆಗೆ ಮೀಸಲಿರಿಸಲಾಗಿದೆ. ಉದ್ಘಾಟನಾ ಸಮಾರಂಭದಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ದಿನೇಶ್ ಗುಂಡೂರಾವ್,ಸಚಿವರಾದ ಬೈರತಿ ಸುರೇಶ್, ನಾಗೇಂದ್ರ ಅವರು ಅತಿಥಿಗಳಾಗಿರುತ್ತಾರೆ. ಜಿಲ್ಲೆಯ ಸಂಸದರು, ಶಾಸಕರು, ವಿಧಾನ ಪರಿಷತ್ ಸದಸ್ಯರು, ಮನಪಾ ಸದಸ್ಯರು ಉಪಸ್ಥಿರಿರುತ್ತಾರೆ ಎಂದವರು ತಿಳಿಸಿದರು.
ಈಜು ಕೊಳ ಸಂಕೀರ್ಣದ ಬಳಿ ಸುಮಾರು ಎರಡೂವರೆ ಎಕ್ರೆ ಪ್ರದೇಶದಲ್ಲಿ ಕ್ರೀಡಾಂಗಣ ನಿರ್ಮಾಣಗೊಳ್ಳಲಿದ್ದು ಇದಕ್ಕೂ ನ.24 ರಂದು ಶಿಲಾನ್ಯಾಸ ನೆರವೇರಲಿದೆ ಎಂದವರು ತಿಳಿಸಿದರು 2015-16ರಲ್ಲಿ ಅಭಯಚಂದ್ರ ಅವರು ಕ್ರೀಡಾ ಸಚಿವರಾಗಿದ್ದ ಸಂದರ್ಭದಲ್ಲಿ ಎಮ್ಮೆಕೆರೆ ಅಂತರಾಷ್ಟ್ರೀಯ ಈಜುಕೊಳ ಸಂರ್ಕಿಣಕ್ಕೆ 12 ಕೋ.ರೂ. ಮೊತ್ತವನ್ನು ಮೀಸಲಿರಿಸಲಾಗಿತ್ತು. ಬಳಿಕ ನಾನು
ಸ್ಮಾರ್ಟ್‌ಸಿಟಿ ಖಾತೆಯನ್ನು ಹೊಂದಿದ್ದ ಸಂದರ್ಭದಲ್ಲಿ ಇದಕ್ಕೆ ಹೆಚ್ಚುವರಿ ಅನುದಾನವನ್ನು ಸ್ಮಾರ್ಟ್‌ಸಿಟಿ ಯೋಜನೆಯಲ್ಲಿ ಬಿಡುಗಡೆ ಮಾಡಿದ್ದೆ. ಇದೀಗ ಎಮ್ಮೆಕೆರೆ ಅಂತರಾಷ್ಟ್ರೀಯಈಜುಕೊಳ ಸಂರ್ಕಿಣ ಸುಜ್ಜಿತವಾಗಿ ನಿರ್ಮಾಣಗೊಂಡು ಉದ್ಘಾಟನೆಗೆ ಸಿದ್ದವಾಗಿದೆ ಎಂದರು.ಈಜುಕೊಳದಲ್ಲಿ ನ.24ರಿಂದ 26ರವರೆಗೆ 19 ನೇ ರಾಷ್ಟ್ರೀಯ ಹಿರಿಯರ ಕ್ರೀಡಾಕೂಟ ಜರಗಲಿದೆ. ಈಗಾಗಲೇ 20 ರಾಜ್ಯಗಳಿಂದ 700 ಕ್ಕೂ ಅಧಿಕ ಸ್ಪರ್ಧಾಳುಗಳು ನೊಂದಾಯಿಸಿರುತ್ತಾರೆ ಎಂದವರುತಿಳಿಸಿದರು.
ರಾಷ್ಟ್ರೀಯ ಹಿರಿಯರ ಕ್ರೀಡಾಕೂಟದ ತೇಜೋಮಯ, ಮಾಜಿ ಶಾಸಕರಾದ ಜೆ.ಆರ್. ಲೋಬೋ, ಐವಾನ್ ಡಿಸೋಜ, ಮುಖಂಡರಾದ ಶಶಿಧರ ಹೆಗ್ಡೆ, ಭಾಸ್ಕರ್, ಪ್ರವೀಣ್ ಚ೦ದ್ರ ಆಳ್ವ, ಕೆ. ಅಬ್ದುಲ್ ಲತೀಫ್ , ಸ್ಮಾರ್ಟ್‌ಸಿಟಿಯ ಅರುಣ್ ಪ್ರಭಾ ಅವರು ಉಪಸ್ಥಿತರಿದ್ದರು