17.9 C
Karnataka
Saturday, November 23, 2024

ಪಿರಾನಾ ಹಂಟರ್ಸ್‌ ತೆಕ್ಕೆಗೆ ಸಿಪಿಎಲ್ 2023 ಕ್ರಿಕೆಟ್ ಟ್ರೋಫಿ

ಮಂಗಳೂರು : ಮಂಗಳೂರು ಪ್ರಾಂತ್ಯದ ಕಥೊಲಿಕ್ ಕ್ರಿಶ್ಚಿಯನ್ನರ ಕ್ರಿಕೆಟ್ ಪ೦ದ್ಯಾಟ ನಗರದ ಉರ್ವಾ ಮುನ್ಸಿಪಲ್ ಕ್ರಿಡಾಂಗಣದಲ್ಲಿ ನವಂಬರ್ 11 ಮತ್ತು 12ರ೦ದು ನಡೆಯಿತು.
ನವಂಬರ್ 11 ಬೆಳಿಗ್ಗೆ ವಂದನೀಯ ಬೆಂಜಮಿನ್ ಪಿಂಟೋರವರು ಆಶೀರ್ವಚಿಸಿ ಎಲ್ಲಾ ಆಟಗಾರರಿಗೆ ಶುಭ ಹಾರೈಸಿದರು
ಮುಖ್ಯ ಅತಿಥಿಗಳಾದ ಉಮಾನಾಥ ಕೋಟ್ಯಾನ್ ರವರು ಮಾತನಾಡಿ ಇಂತಹ ಪಂದ್ಯಾಟದಿಂದ ಆಟಗಾರರ ದೈಹಿಕ, ಮಾನಸಿಕ ಸಾಮರ್ಥ್ಯವು ವೃದ್ಧಿಯಾಗಿ ಸಮಾಜದಲ್ಲಿ ಅನ್ಯೋನ್ಯತೆಯಿಂದ ಬಾಳಲು ಸಹಕಾರಿಯಾಗುತ್ತದೆ ಎಂದರು. ಸಂಪತ್ ಶೆಟ್ಟಿ, ಸಿಎ ಕೊಲಿನ್ ರೊಡ್ರಿಗಸ್ , ಫ್ರಾನ್ಸಿಸ್ ಡಿಸೋಜರವರು ಅಥಿತಿಗಳಾಗಿ ಆಗಮಿಸಿದ್ದರು.
ಅಧ್ಯಕ್ಷತೆ ವಹಿಸಿದ್ದ ರೋಹನ್‌ ಕಾಪೋ೯ರೇಶನ್‌ ನ ಎ೦ಡಿ ರೋಹನ್ ಮೊಂತೇರೋ ಅವರು ಮಾತನಾಡಿ ಸಮಾಜಕ್ಕೆ ಎಂದೆಂದಿಗೂ ನಮ್ಮ ಸಹಕಾರ ಇರುತ್ತದೆ ಅವರಲ್ಲೂ ಯುವ ಜನತೆ ಒಟ್ಟುಗೂಡಿ ನಡೆಸುವ ಇಂತಹ ಪಂದ್ಯಾಟಗಳಿಗೆ ನನ್ನ ಕೈಲಾದಷ್ಟು ಸಹಾಯವನ್ನು ತಾನು ಮಾಡುತ್ತೇನೆ ಎಂಬ ಭರವಸೆ ನೀಡಿದರು. ಕಥೊಲಿಕ್ ಸ್ಪೋರ್ಟ್ಸ್‌ ಅಸೋಸಿಯೇಶನ್ ಅಧ್ಯಕ್ಷ ವಿನೋದ್ ಪಿಂಟೋ
ತಾಕೋಡೆ ಸ್ವಾಗತಿಸಿ, ಜೇಸನ್ ಪಿರೇರಾ ಶಿರ್ತಾಡಿ ಕಾರ್ಯಕ್ರಮ ನಿರೂಪಿಸಿದರು.ಜೋನ್ ನೋರ್ಬಟ್ ಮಾಲಕತ್ವದ ಪಿರಾನಾ ಹಂಟರ್ಸ್‌ ತಂಡವು ಪ್ರಶಸ್ತಿ ಪಡೆದುಕ೦ಡಿತು. ಪ್ರವೀಣ್ ಸಿಕ್ವೇರಾ ಮೂಲಕತ್ವದ ಪ್ರಜ್ವಲ್ ಗ್ಲ್ಯಾಡಿಯೇಟರ್ಸ್ ತಂಡವು ರನ್ನರ್ಸ್ ಅಪ್ ಆಯಿತು.. ಮೊದಲ ಹಾಗೂ ದ್ವಿತೀಯ ರನ್ನರ್ಸ್ ಕ್ರಮವಾಗಿ ರಿಚರ್ಡ್ ಡಿಸೋಜ ಮಾಲಕತ್ವದ ನೈಟ್ ವಾರಿಯರ್ಸ್ ಹಾಗೂ ಜೊನ್ ಲ್ಯಾನ್ಸಿ ಮಾಲಕತ್ವದ ಲೈಟನ್ಶಿಪಿಂಗ್ ತಂಡಗಳು ಆಯ್ಕೆಯಾದವು.


ಕ್ರಿಕೆಟ್ ಪಂದ್ಯಾಟದ ಸಮಾರೋಪ ಕಾರ್ಯಕ್ರಮ ಜೋಯ್ಲಸ್ ಡಿಸೋಜರವರ ಅಧಕ್ಷತೆಯಲ್ಲಿ ನಡೆಯಿತು, ಗೆದ್ದ
ತಂಡಗಳನ್ನು ಅಭಿನಂದಿಸಿ ಸಿಪಿಎಲ್ ಅಧ್ಯಕ್ಷರಾದ ವಿನೋದ್ ಪಿಂಟೋ ರವರ ಅಧ್ಯಕ್ಷತೆಯಲ್ಲಿ ಇನ್ನಷ್ಟು ಇಂತಹ ಪಂದ್ಯಗಳು ನಡೆಯಲಿ ಎಂದು ಹಾರೈಸಿದರು ಮುಖ್ಯ ಅತಿಥಿಗಳಾಗಿ ವಂದನೀಯರೋಬರ್ಟ್‌ ಡಿಸೋಜರವರು ಮಾತನಾಡಿ ಎಲ್ಲಾ ಕ್ರಿಶ್ಚಿಯನ್ ಆಟಗಾರರನ್ನು ಒಟ್ಟುಗೂಡಿಸಿ ಇಂತಹ ಪಂದ್ಯಾಟ ನಡೆಸುವುದು ಅಭಿನಂದನೀಯ ಎಂದರು.
ಟೈಟಸ್ ನೊರೊನ್ಹಾ, ಎಚ್ಚೆಮ್ ಫೆರ್ನಾಲ್, ರೋಶನ್ ಮಾಡ್ತಾ ಮುಖ್ಯ ಅತಿಥಿಗಳಾಗಿದ್ದು ವಿಜೇತರಿಗೆ ಪ್ರಶಸ್ತಿಗಳನ್ನು ವಿತರಿಸಿದರು
.ದಿ ವೇಕೆಂಟ್ ಹೌಸ್ ಚಲನಚಿತ್ರ ನಿರ್ಮಾಪಕಿ ನಟಿ ಎಸ್ತೆರ್ ನೊರೊನ್ಹಾ, ವೊಡ್ತಾಂತ್ಲೆಂ ಫುಲ್ ಖ್ಯಾತಿಯ ನಟ ಓಸ್ಕರ್ ಪೆನಾರ್ಂಡಿಸ್ ಇವರು ಕ್ರಿಕೆಟ್ಪಂದ್ಯಾಟ ವೀಕ್ಷೀಸಲು ಆಗಮಿಸಿದ್ದು, ಎಲ್ಲಾ ಕ್ರಿಕೆಟ್ ಆಟಗಾರರಿಗೆ ಶುಭಹಾರೈಸಿದರು. ಸಿಪಿಎಲ್ ವತಿಯಿಂದ ಅವರನ್ನು ಸನ್ಮಾನಿಸಲಾಯಿತು

ವೈಯುಕ್ತಿಕ ಪ್ರಶಸ್ತಿ ಗೆದ್ದ ಆಟಗಾರರ ವಿವರಗಳು:
ಫೈನಲ್ ಮ್ಯಾನ್ ಆಫ್ ದಿ ಮ್ಯಾಚ್. ಸಚಿನ್ ಪಿರಾನಾ ಹಂಟರ್ಸ್.ಮ್ಯಾನ್ ಆಫ್ ದಿ ಸೀರೀಸ್ ನಿಥಿನ್ ಪ್ರಜ್ವಲ್ ಗ್ಲಾಡಿಯೇಟರ್ಸ್.ಬೆಸ್ಟ್‌ ಬ್ಯಾಟ್ಸಮನ್ . ಸಂಜಯ್ ಫಿರಾನಾ ಹಂಟರ್ಸ್. ಬೆಸ್ಟ್‌ ಬೌಲರ್ ಕೆವಿನ್ ಫಿರಾನಾ ಹಂಟರ್ಸ್ಬೆಸ್ಟ್‌ ಫಿಲ್ಡರ್ ರಾಕೇಶ್ ಫಿರಾನಾ ಹಂಟರ್ಸ್. ಬೆಸ್ಟ್‌ ಕ್ಯಾಚ್ ಆಫ್ ದ ಟೂರ್ನಾಮೆಂಟ್ : ಪ್ರಿತೇಶ್ ಪ್ರಜ್ವಲ್ ಗ್ಲ್ಯಾಡಿಯೇಟರ್ಸ್.ಬೆಸ್ಟ್‌ ಕೀಪರ್ ಸುನಿಲ್ ಪ್ರಜ್ವಲ್ ಗ್ಲ್ಯಾಡಿಯೇಟರ್ಸ್. ಬೆಸ್ಟ್‌ ಸೀನಿಯರ್ ಪ್ಲೇಯರ್ ಆರುಣ್ ಡಿಸೋಜಾ ಫಿರಾನಾ ಹಂಟರ್ಸ್.ಬೆಸ್ಟ್‌ ಜೂನಿಯರ್ ಪ್ಲೇಯರ್ : ಡಿಯೋನ್ ಲೈಟನ್ ಶಿಪ್ಪಿಂಗ್ ಏಬಿ.ಓರೆಂಜ್ ಕ್ಯಾಪ್ ಸಂಜಯ್ ಫಿರಾನಾ ಹಂಟರ್ಸ್.ಪರ್ಪಲ್ ಕ್ಯಾಪ್: ಕೆವಿನ್ ಫಿರಾನಾ ಹಂಟರ್ಸ್.
ಲೀಗ್ ನ ಎಲ್ಲಾ ಪಂದ್ಯಾಟಗಳಿಗೂ ಮ್ಯಾನ್ ಆಫ್ ದಿ ಮ್ಯಾಚ್ ನೀಡಿ ಗೌರವಿಸಲಾಯಿತು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles