17.5 C
Karnataka
Friday, November 22, 2024

ಮಾದಕ ವ್ಯಸನ ಜಾಗತಿಕ ಸವಾಲುಗಳಲ್ಲಿ ಒಂದು: ದಿನೇಶ್ ಕುಮಾರ್

ಮಂಗಳೂರು: ಮಾದಕ ವ್ಯಸನದ ಜಾಲ ವ್ಯವಸ್ಥಿತವಾಗಿ ದೇಶದಾದ್ಯಂತ ಹರಡಿಕೊಂಡಿದೆ. ಯುವ ಜನತೆ ಮೋಜು ಮಸ್ತಿಗಾಗಿ ಆರಂಭಿಸುವ ಮಾದಕ ಪದಾರ್ಥಗಳ ಸೇವನೆ ನಂತರ ವ್ಯವಸ್ಥಿತರೀತಿಯಲ್ಲಿ ವ್ಯಸನವಾಗಿ ಬದಲಾಗುತ್ತದೆ. ಹಾಗಾಗಿ ಮಾದಕ ವ್ಯಸನ ಜಾಗತಿಕ ಸವಾಲುಗಳಲ್ಲಿ ಒಂದಾಗಿದೆ ಎಂದು ದ. ಕ. ಜಿಲ್ಲಾ ಉಪಪೊಲೀಸ್ ಆಯುಕ್ತ ಬಿ. ಪಿ. ದಿನೇಶ್ ಕುಮಾರ್ ಆತಂಕ
ವ್ಯಕ್ತಪಡಿಸಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ದಕ್ಷಿಣ ಕನ್ನಡ ಜಿಲ್ಲಾಮಾನವ ಹಕ್ಕುಗಳ ಭಾರತೀಯ ಮಹಾ ಮೈತ್ರಿ, ರಾಷ್ಟ್ರೀಯ ಸೇವಾ ಯೋಜನೆ, ವಿಶ್ವವಿದ್ಯಾನಿಲಯ ಕಾಲೇಜು ಮಂಗಳೂರು ಇವರ ಜಂಟಿ ಆಶ್ರಯದಲ್ಲಿ ಜರುಗಿದ ಮಾನವ ಹಕ್ಕುಗಳ ಬಗ್ಗೆ ಮಾಹಿತಿ, ಮಾದಕ ವಸ್ತು ಸೇವನೆ ಪರಿಣಾಮ ಹಾಗೂ ಅಪರಾಧ, ಸಂಚಾರಿ ನಿಯಮಗಳ ಅರಿವು ಕಾರ್ಯಕ್ರಮ
ಉದ್ಘಾಟಿಸಿ ಮಾತನಾಡಿದರು.
ಹವ್ಯಾಸ ವ್ಯಸನವಾಗದಿರಲಿ: ಯುವಕರು ವಿಶೇಷವಾಗಿ ಕಾಲೇಜು ವಿದ್ಯಾರ್ಥಿಗಳು ಮೋಜು-ಮಸ್ತಿಗಾಗಿಮಾದಕ ದ್ರವ್ಯ ಸೇವನೆಗೆ ತೊಡಗುತ್ತಾರೆ. ಆನಂತರ ಅದೇ ವ್ಯಸನವಾಗಿ ಬದಲಾಗುತ್ತದೆ. ದೇಶದಲ್ಲಿ ಮಾದಕ ವ್ಯಸನ ಮಿತಿಮೀರಿ ಬೆಳೆಯಲು ಕಾನೂನು ಸುವ್ಯವಸ್ಥೆ ಜಾರಿಯಾಗುವಲ್ಲಿ ತೊಡಕಾಗುತ್ತಿದೆ. ಮಾದಕ ದ್ರವ್ಯ ಸೇವನೆಯಲ್ಲಿ ಕಾನೂನು ರೀತಿಯ ಹಾಗೂ ಕಾನೂನು ಬಾಹಿರವಾದ ವ್ಯಸನ ಎಂದು
ಎರಡು ವಿಧಗಳನ್ನು ಗುರುತಿಸಬಹುದು. ಯಾವುದೇ ವೈದ್ಯಕೀಯ ತಜ್ಞರ ಔಷದೀಕರಣದಲ್ಲಿ ಯಾವುದೇ ಕಾನೂನು ತೊಡಕಿರುವುದಿಲ್ಲ. ಆದರೆ ಯಾವುದೇ ವೈದ್ಯರ ಮೇಲ್ವಿಚಾರಣೆ ಇಲ್ಲದೇ, ಸ್ವಯಂ ಔಷದೀಕರಣ ಮಾಡುವುದು ದೀರ್ಘ ಸಮಯಕ್ಕೆ ಅದು ವ್ಯಸನವಾಗಿ ಬದಲಾಗುತ್ತದೆ ಎಂದುಎಚ್ಚರಿಕೆ ನೀಡಿದರು.
ರಸ್ತೆ ಸುರಕ್ಷತೆ ಮತ್ತು ಸಂಚಾರಿ ನಿಯಮ: ಪ್ರಸ್ತುತ ಸಂಚಾರಿ ನಿಯಮಗಳ ಉಲ್ಲಂಘನೆ ಪ್ರಕರಣಹೆಚ್ಚಾಗುತ್ತಿದೆ. ಯಾವುದೇ ರೀತಿಯ ವಾಹನ ಸವಾರ ಸಂಚಾರಿ ನಿಯಮಗಳನ್ನು ಉಲ್ಲಂಘಿಸಿದರೆಆತನ ವಾಹನ ಚಾಲನಾ ಪರವಾನಗಿಯನ್ನು ರದ್ದುಗೊಳಿಸುವ ಸಾಧ್ಯತೆ ಇರುತ್ತದೆ. ಹಾಗಾಗಿ ಯುವ ಜನಾಂಗ ಎಚ್ಚರಿಕೆಯಿಂದ ವಾಹನ ಚಲಾವಣೆ ಮಾಡಬೇಕು. ಈ ನಿಟ್ಟಿನಲ್ಲಿ ಸಂಚಾರಿ ನಿಯಮ
ಕುರಿತಾದ ಶಿಕ್ಷಣ, ಕಾನೂನಿನ ಅರಿವು ಮತ್ತು ಉತ್ತಮ ರಸ್ತೆಗಳು, ರಸ್ತೆ ಸುರಕ್ಷತೆಗೆ ಇರುವಂತಹ ಮೂಲಭೂತ ಅವಶ್ಯಕತೆಗಳು ಎಂದು ಹೇಳಿದರು.ಕೇಂದ್ರ ವಿದ್ಯುತ್ ಮತ್ತು ನವೀಕರಿಸಬಹುದಾದ ಇಂಧನ ಸಚಿವಾಲಯ ಮತ್ತು ಡೆಕ್ಕನ್ ಹೆರಾಲ್ಡ್ ಚೇಂಜ್ ಮೇಕರ್ ರಾಷ್ಟ್ರೀಯ ಪ್ರಶಸ್ತಿಗೆ ಭಾಜನರಾದ ಸರ್ವಜ್ಞ ಎಜುಟೆಕ್ಪ್ರೈ ವೇಟ್ ಲಿಮಿಟೆಡ್‌ನ ಮುಖ್ಯ ಕಾರ್ಯನಿರ್ವಾಹಕ ಶ್ರೀನಿಧಿ ಆರ್. ಎಸ್. ಅವರನ್ನು
ಸನ್ಮಾನಿಸಲಾಯಿತು. ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಕಾರ್ಯಕ್ರಮದ ಅಧ್ಯಕ್ಷತೆವಹಿಸಿದ್ದರು. ದ. ಕ. ಜಿಲ್ಲಾ ವಿಭಾಗದ ಮಾನವ ಹಕ್ಕುಗಳ ಭಾರತೀಯ ಮಹಾ ಮೈತ್ರಿಯ ಅಧ್ಯಕ್ಷ ಬಿ.ಶೇಷಪ್ಪ ಬಂಬಿಲ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು. ವಿಶ್ವವಿದ್ಯಾನಿಲಯ ಕಾಲೇಜಿನರಾಷ್ಟ್ರೀಯ ಸೇವಾ ಯೋಜನಾಧಿಕಾರಿ ಡಾ. ಸುರೇಶ್, ಡಾ. ಗಾಯತ್ರಿ ಎನ್. ಸೇರಿದಂತೆ ನಾನಾವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles