21.2 C
Karnataka
Saturday, November 16, 2024

ಮರಣದ ದೃಢೀಕರಣ ಪತ್ರ ನೀಡಲು ಲಂಚ : ಚೇಳ್ಯಾರು ಗ್ರಾಮ ಆಡಳಿತ ಅಧಿಕಾರಿ ಬಂಧನ

ಮಂಗಳೂರು: ಮರಣ ಪ್ರಮಾಣ ಪತ್ರ ನೀಡಲು ಲಂಚ ಸ್ವೀಕರಿಸುತ್ತಿದ್ದ ಚೇಳ್ಯಾರು ಗ್ರಾಮ ಆಡಳಿತ ಅಧಿಕಾರಿಯನ್ನು ಲೋಕಾಯುಕ್ತ ಪೊಲೀಸರು ಸ್ಥಳದಲ್ಲಿಯೇ ಬಂಧಿಸಿದ್ದಾರೆ.
ಇಲ್ಲಿನ ನಿವಾಸಿಯೊಬ್ಬರು, ತನ್ನ ತಾಯಿಯ ಹೆಸರಿನಲ್ಲಿ ಮಂಗಳೂರು ತಾಲೂಕಿನ ಚೇಳ್ಯಾರು ಗ್ರಾಮದ ಚೇಳ್ಯಾರು ಎಂಬಲ್ಲಿ ಒಟ್ಟು 42 ಸೆಂಟ್ಸ್ ಜಮೀನು ಇದ್ದು, ಸದ್ರಿ ಜಮೀನಿನಲ್ಲಿ 5 ಸೆಂಟ್ಸ್ ಜಮೀನನ್ನು ತನ್ನ ನೆರೆ ಮನೆಯವರಿಗೆ ಮಾರಾಟ ಮಾಡಲು ತೀರ್ಮಾನಿಸಿದ್ದು, ಈ ಬಗ್ಗೆ ದಾಖಲಾತಿಗಳನ್ನು ತಯಾರು ಮಾಡಿ ಸದ್ರಿ ಜಮೀನನ್ನು ಮಾರಾಟ ಮಾಡಲು ಜಿಲ್ಲಾಧಿಕಾರಿರವರ ಕಚೇರಿಯಲ್ಲಿ ವಿಚಾರಿಸಿದಾಗ ಫಿರ್ಯಾದಿದಾರರ ಅಜ್ಜನ ಮರಣ ಪ್ರಮಾಣ ಪತ್ರ ಮತ್ತು ಸಂತತಿ ನಕ್ಷೆ ತರಲು ತಿಳಿಸಿರುತ್ತಾರೆ. ಅದರಂತೆ ಅವರು ಸೆಪ್ಟೆಂಬರ್ ತಿಂಗಳಿನಲ್ಲಿ ಚೇಳ್ಯಾರು ಗ್ರಾಮಕರಣಿಕರ ಕಚೇರಿಗೆ ಹೋಗಿ ತನ್ನ ಅಜ್ಜನ ಮರಣದ ದೃಢಪತ್ರಕ್ಕೆ ಅರ್ಜಿ ಸಲ್ಲಿಸಿರುತ್ತಾರೆ.

   ನಂತರ ಎರಡು ಮೂರು ಸಲ ಚೇಳ್ಯಾರು ಗ್ರಾಮಕರಣಿಕರ ಕಚೇರಿಗೆ ಹೋಗಿ ದೃಢೀಕರಣ ಪತ್ರದ ಬಗ್ಗೆ ವಿಜಿತ್ ಅವರಲ್ಲಿ ವಿಚಾರಿಸಿದ್ದು, ಯಾವುದೇ ಉತ್ತರ ನೀಡಿರುವುದಿಲ್ಲ. ನಂತರ ನವೆಂಬರ್ 20 ರಂದು ಗ್ರಾಮ ಆಡಳಿತ ಅಧಿಕಾರಿಯವರ ಮೊಬೈಲ್ ಗೆ ಕಾಲ್ ಮಾಡಿ ಮಾತನಾಡಿದಾಗ ಮರಣ ದೃಢೀಕರಣ ಪತ್ರ ರೆಡಿ ಇದ್ದು, ಚೇಳ್ಯಾರು ಗ್ರಾಮಕರಣಿಕರ ಕಚೇರಿಗೆ ಬರಲು ಹಾಗೂ ರೂ. 15,000 ತೆಗೆದುಕೊಂಡು ಬರಲು ತಿಳಿಸಿರುತ್ತಾರೆ. ಆದರೆ ಅಷ್ಟು ಹಣ ತನ್ನಲ್ಲ್ಲಿ ಇಲ್ಲ ಎಂದಾಗ ನಾಳೆ ಕೊಡಲು ತಿಳಿಸಿರುತ್ತಾರೆ. 
    ನ.22ರಂದು ಮತ್ತೆ ಚೇಳ್ಯಾರು ಗ್ರಾಮಕರಣಿಕರ ಕಚೇರಿಗೆ ಹೋಗಿ ಗ್ರಾಮ ಆಡಳಿತ ಅಧಿಕಾರಿ ವಿಜಿತ್ ಜತೆ ಮಾತನಾಡಿದಾಗ, ಅಜ್ಜನ ಮರಣದ ದೃಢೀಕರಣ ಪತ್ರವನ್ನು ನೀಡಿ, ದಾಖಲೆ ಮಾಡಿ ಕೊಟ್ಟದ್ದಕ್ಕಾಗಿ ರೂ. 15,000 ಸುರತ್ಕಲ್ ನಾಡಕಛೇರಿಗೆ ಬಂದು ಕೊಡಲು ಲಂಚದ ಹಣಕ್ಕೆ ಬೇಡಿಕೆ ಇಟ್ಟಿರುತ್ತಾರೆ. ಆಗ ದೂರುದಾರರ ಸ್ವಲ್ಪ ಕಮ್ಮಿ ಮಾಡಿ ಎಂದಾಗ  ಆಯಿತು ಅದರಲ್ಲಿ ಎರಡು ಸಾವಿರ ಕಮ್ಮಿ ಮಾಡಿ ಕೊಡಲು ಕೋರಿದ್ದು, ರೂ.13,000 ಬೇಡಿಕೆ ಇಟ್ಟಿರುತ್ತಾರೆ.

    ಅದರಂತೆ, ಶುಕ್ರವಾರ ಚೇಳ್ಯಾರು ಗ್ರಾಮ ಆಡಳಿತ ಅಧಿಕಾರಿ ವಿಜಿತ್ ರೂ.13,000 ಲಂಚದ ಹಣವನ್ನು ಸ್ವೀಕರಿಸುವಾಗ ಸ್ಥಳದಲ್ಲಿಯೇ ಸಿಕ್ಕಿಬಿದ್ದಿರುತ್ತಾರೆ. ಆರೋಪಿಯನ್ನು ದಸ್ತಗಿರಿ ಮಾಡಿ ಲಂಚದ ಹಣವನ್ನು ವಶಪಡಿಸಿಕೊಂಡು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದೆ.ಲೋಕಾಯುಕ್ತ ಪೊಲೀಸ್ ಅಧೀಕ್ಷಕ ಸಿ.ಎ. ಸೈಮನ್ ಅವರ ಮಾರ್ಗದರ್ಶನದಲ್ಲಿ ಲೋಕಾಯುಕ್ತ ಪೊಲೀಸ್ ಉಪಾಧೀಕ್ಷಕ ಚಲುವರಾಜು. ಬಿ, ಹಾಗೂ ನಿರೀಕ್ಷಕರಾದ ಅಮಾನುಲ್ಲಾ ಎ., ಸುರೇಶ್ ಕುಮಾರ್ ಪಿ. ಇವರು ಸಿಬ್ಬಂದಿಗಳ ಜೊತೆ ಕಾರ್ಯಾಚರಣೆ ಕೈಗೊಂಡಿರುತ್ತಾರೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles