ಮಂಗಳೂರು:ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಜನೋಪಯೋಗಿ ಯೋಜನೆಗಳನ್ನು ಗ್ರಾಮೀಣ ಪ್ರದೇಶದ ಜನರಿಗೂ ತಲುಪಿಸುವಲ್ಲಿ ನೆರವಾಗಿರುವ ವಿಕಸಿತ್ ಭಾರತ್ ಸಂಕಲ್ಪ ಯಾತ್ರೆ ಕಾರ್ಯಕ್ರಮಕ್ಕೆ
ಶುಕ್ರವಾರ ದ.ಕ ಜಿಲ್ಲೆಯ ಮಂಗಳೂರು ಗ್ರಾಮಾಂತರ ವಲಯ ಉಲಾಯಿಬೆಟ್ಟು ಗ್ರಾಮ ಪಂಚಾಯತಿ ನಲ್ಲಿ ಚಾಲನೆ ನೀಡಲಾಯಿತು. ಸಂಸದ ನಳಿನ್ ಕುಮಾರ್ ಕಟೀಲು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಕೆನರಾ ಬ್ಯಾಂಕಿನ ಜನರಲ್ ಮೇನೆಜರ್ ಸುಧಾಕರ ಕೊಟ್ಟಾರಿ ,ಯುನಿಯನ್ ಬ್ಯಾಂಕ್ ಡಿಜಿಎಂ ಮಹಮ್ಮದ್ ಸಯ್ಯದ್ , ಉಲಾಯಿಬೆಟ್ಟು ಗ್ರಾಮಪಂಚಾಯತಿ ಆಧ್ಯಕ್ಷ ಹರಿಕೇಶ್ ಶೆಟ್ಟಿ, ಉಪಾಧ್ಯಕ್ಷ ದಿನೇಶ್ ,ಕೃಷಿ ಇಲಾಖೆ ಜಂಟಿ ನಿರ್ದೇಶಕ ಕೆಂಪೇಗೌಡ ಸೇರಿದಂತೆ ಹಲವಾರು ಮಂದಿ ಉಪಸ್ಥಿತರಿದ್ದರು.
ಕೆನರಾ ಬ್ಯಾಂಕಿನ ಜನರಲ್ ಮೇನೆಜರ್ ಸುಧಾಕರ ಕೊಟ್ಟಾರಿ , ಮಾತನಾಡಿ ಕೇಂದ್ರ ಸರಕಾರದ ಬಹಳಷ್ಟು ಯೋಜನೆಗಳು ಜಾಲ್ತಿಯಲ್ಲಿದೆ. ವಿಕಸಿತ ಭಾರತ ಸಂಕಲ್ಪಯಾತ್ರೆಯ ಮೂಲಕ ಸರಕಾರದ ಸವಲತ್ತು ನಿಮ್ಮಮುಂದೇ ಬರುತ್ತಾ ಇದ್ದಾರೆ. ಮುದ್ರಾ ಯೋಜನೆ ,ಸ್ವನಿಧಿ ಯೋಜನೆಗಳಿಂದ ಹಲವಾರುಮಂದಿ ಸ್ವಾವಲಂಬಿ ಬದುಕು ರೂಪಿಸಿದ್ದಾರೆ. ನೀವು ಕೂಡಾ ಕೇಂದ್ರ ಸರಕಾರದ ಯೋಜನೆಯನ್ನು ಪಡೆದುಕೊಂಡು ಬ್ಯಾಂಕಿನಿಂದ ಸಾಲ ಸೌಲಭ್ಯ ಪಡೆದುಕೊಳ್ಳಬಹುದಾಗಿದೆ ಎ೦ದರು. ಲ್ಲಾ ಲೀಡ್ ಬ್ಯಾಂಕ್ ಮುಖ್ಯ ವ್ಯವಸ್ಥಾಪಕಿ ಕವಿತಾ ಶೆಟ್ಟಿ ಮಾತನಾಡಿ ಅವರು, ಜಿಲ್ಲೆಯ 223 ಗ್ರಾಮಗಳಲ್ಲಿ ಜನೆವರಿ 18 ರವರೆಗೆ ನಡೆಯಲಿದ್ದು, ಸಾರ್ವಜನಿಕರು ಇದರ ಲಾಭ ಪಡೆದುಕೊಳ್ಳಬೇಕೆಂದರು
ಕೇಂದ್ರ ಸರ್ಕಾರದ ಯೋಜನೆಗಳು ಸಾರ್ವಜನಿಕರಿಗೆ ತಲುಪಿ ಅವರ ಬದುಕಿನಲ್ಲಿ ಗುಣಾತ್ಮಕ ಬದಲಾವಣೆ ಬಂದಿರುವುದನ್ನು ತಿಳಿಸುವುದರೊಂದಿಗೆ, ಕೇಂದ್ರ ಸರ್ಕಾರದ ಯೋಜನೆಗಳಿಂದ ವಂಚಿತರಾಗಿರುವ ಜನರಿಗೆ ಅರಿವು ಮೂಡಿಸುವ ಕಾರ್ಯಕ್ರಮ 2024 ರ ಜನವರಿ 18 ರ ವರೆಗೆ ಜಿಲ್ಲೆಯಲ್ಲಿ ಸಮರ್ಪಕವಾಗಿ ಕೈಗೊಳ್ಳಲಾಗುತ್ತದೆ. ಯಾತ್ರೆಯು ಜಿಲ್ಲೆಯ ಗ್ರಾಮ ಪಂಚಾಯತಗಳ ಮಟ್ಟದಲ್ಲಿ ಕೇಂದ್ರ ಸರ್ಕಾರದ ಯೋಜನೆಗಳ ಕುರಿತು ಸೂಕ್ತ ಮಾಹಿತಿ ನೀಡಲಾಗುತ್ತಿದೆ. .