19.9 C
Karnataka
Friday, November 15, 2024

ಸಾವಯವ ಕೃಷಿ ಬಗ್ಗೆ ಪ್ರಮಾಣೀಕೃತ ಸರಣಿ ತರಬೇತಿ

ಮಂಗಳೂರು:ಸಾವಯವ ಕೃಷಿಕ ಗ್ರಾಹಕ ಬಳಗ (ರಿ) ಮಂಗಳೂರು ಇವರ ಆಶ್ರಯದಲ್ಲಿ ,ವಿಜಯ ಗ್ರಾಮೀಣ ಅಭಿವೃದ್ದಿ ಪ್ರತಿಷ್ಟಾನ ಮತ್ತು ಭಾರತಿ ಶಿಕ್ಷಣ ಸಂಸ್ಥೆಗಳು ಇವರ ಸಹಯೋಗದೊಂದಿಗೆ ಸಾವಯವ ಕೃಷಿ ಬಗ್ಗೆ ಒಂದು ಪ್ರಮಾಣೀಕೃತ ಸರಣಿ ತರಬೇತಿ ( certificate course ) ಶ್ರೀ ಭಾರತಿ ವಿದ್ಯಾಸಂಸ್ಥೆ ಸಮುಚ್ಚಯದಲ್ಲಿ ಉದ್ಘಾಟನೆ ಗೊಂಡಿತು.
ತರಬೇತಿ ಉದ್ಘಾಟನೆ ಮಾಡಿದ ಪ್ರಗತಿ ಪರ ಸಾವಯವ ಕೃಷಿಕೆ , ಸಾಧಕಿ , ಜಿಲ್ಲಾ ಪ್ರಶಸ್ತಿ ವಿಜೇತೆ ಅನಿತಾ ಬೆಟ್ಟಂಪಾಡಿ ಯವರು ಸಾವಯವ ಕೃಷಿ ಬಗ್ಗೆ ತನ್ನ ಸ್ವ ಅನುಭವ ಗಳನ್ನು ವಿವರಿಸಿದರು . ಪ್ರಸ್ತುತ ವಾತಾವರಣ ದಲ್ಲಿ ವಿಷ ಮುಕ್ತ ಆಹಾರ ಸೇವನೆ ಯ ಅನಿವಾರ್ಯತೆ ನಿಟ್ಟಿನಲ್ಲಿ ಸಾವಯವ ಬಳಗ ಕೈ ಗೊಳ್ಳುತ್ತಿರುವ ಚಟುವಟಿಕೆಗಳ ಬಗ್ಗೆ ಶ್ಲಾಘಿಸಿದರು . ಸಾವಯವ ಕೃಷಿಕ ಗ್ರಾಹಕ ಬಳಗ ಪ್ರಕಟಿಸಿದ್ದ ಬಳಗದ ಸದಸ್ಯೆ ಸರೋಜಾ ಪ್ರಕಾಶ್ ಅವರ ಲೇಖನ ‘ ನಮ್ಮ ಕೈತೋಟ ನಮ್ಮ ಹೆಮ್ಮೆ’ ಮಾಹಿತಿ ಕೈಪಿಡಿ ಯನ್ನು ಮುಖ್ಯ ಅತಿಥಿಯಾಗಿ ಭಾಗವಹಿಸಿದ್ದ ಪೊಲೀಸ್‌ ಸಹಾಯಕ ಆಯುಕ್ತ ಗೀತಾ ಕುಲಕರ್ಣಿಯವರು ಬಿಡುಗಡೆ ಮಾಡಿದರು. ಸಾವಯವ , ಕಲಬೆರಕೆ ರಹಿತ ಆಹಾರ ಸೇವನೆಯ ಅವಶ್ಯಕತೆ ಬಗ್ಗೆ ಪುನರುಚ್ಚರಿಸಿದರು. ಸಂಚಾರಿ ನಿಯಮ ಪಾಲನೆ ನಮ್ಮ ಸಂಚಾರ ಸುರಕ್ಷತೆಗೆ ಹೇಗೆ ಅಗತ್ಯಯೋ ಅದೇ ರೀತಿ ನಮ್ಮ ಶಿಸ್ತು ಬದ್ದ ಜೀವನ ಶೈಲಿಯು ನಮ್ಮ ಆರೋಗ್ಯ ಪೂರ್ಣ ಜೀವನ ನಿರ್ವಹಣೆಗೆ ಪ್ರಾಮುಖ್ಯ ಎಂದರು .
ವಿಜಯ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನದ ಕಾರ್ಯದರ್ಶಿ ರಾಜೇಂದ್ರ ರೈ ಯವರು ತಮ್ಮ ಸಂಸ್ಥೆಯ ಕೃಷಿ ಪೂರಕ ಕಾರ್ಯ ಕ್ರಮಗಳ ಬಗ್ಗೆ ತಿಳಿಸಿದರು. ಸಾವಯವ ಬಳಗದ ಕಾರ್ಯಕ್ರಮವನ್ನು ಪ್ರಶಂಸಿಸಿ ಈ ಸರಣಿ ಪ್ರಮಾಣೀಕೃತ ತರಬೇತಿ ಪಡೆದ ವ್ಯಕ್ತಿಗಳನ್ನು ತಮ್ಮ ಸಂಸ್ಥೆಯಲ್ಲಿ ಕೃಷಿಕರ ತರಬೇತಿ ದಾರರಾಗಿ ನಿಯುಕ್ತಿ ಮಾಡುವಲ್ಲಿ ಯೋಜನೆ ಹಾಕಲಾಗುವುದು ಎಂದರು.
ಇನ್ನೋರ್ವ ಅತಿಥಿ ಸುಮಾ ರಮೇಶ್ ರವರು ಭಾರತಿ ವಿದ್ಯಾ ಸಂಸ್ಥೆ ಇಂತಹ ಸಮಾಜ ಮುಖಿ ಕಾರ್ಯಕ್ರಮಕ್ಕೆ ಸಹಯೋಗ, ಸಹಕಾರ ನೀಡುವುದಾಗಿ ಹೇಳಿದರು.
ಸಾವಯವ ಕೃಷಿಕ ಗ್ರಾಹಕ ಬಳಗ ಮಂಗಳೂರು ಜಿ .ಆರ್ ಪ್ರಸಾದ್ ಸ್ವಾಗತಿಸಿ ಪರಿಚಯಿಸಿದರು . ಕಾರ್ಯದರ್ಶಿ ರತ್ನಾಕರ್ ಕುಳಾಯಿ ಪ್ರಸ್ತಾವಿಸಿದರು. ವಿಜಯ ಗ್ರಾಮೀಣ ಅಭಿವೃದ್ದಿ ಪ್ರತಿಷ್ಠಾನದ ಮುಖ್ಯ ಕಾರ್ಯ ನಿರ್ವಹಣಾಧಿಕಾರಿ ಸಚಿನ್ ಹೆಗ್ಡೆ ಧನ್ಯವಾದ ಸಮರ್ಪಿಸಿದರು. ಬಳಗದ ಸದಸ್ಯೆ ಮಾಯ ಕಾರ್ಯಕ್ರಮ ನಿರ್ವಹಿಸಿದ್ದರು .

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles