24.9 C
Karnataka
Friday, November 15, 2024

ವಿದ್ಯಾರ್ಥಿಗಳ ಪ್ರತಿಭೆಗೆ ಲಲಿತಾ ಕಲಾ ವೇದಿಕೆ ಸಾಕ್ಷಿಯಾಗಲಿ: ಡಾ. ಅನಸೂಯ ರೈ

ಮಂಗಳೂರು: ವಿದ್ಯಾರ್ಥಿಗಳು ಉತ್ತಮ ಪ್ರತಿಭಾ ಪ್ರದರ್ಶನ ನೀಡುವ ಮೂಲಕ ಲಲಿತಾ ಕಲಾ ವೇದಿಕೆಯನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ. ಅನಸೂಯ ರೈ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನಲ್ಲಿ ರವೀಂದ್ರ ಕಲಾ ಭವನದಲ್ಲಿ ಲಲಿತ ಕಲಾ ಸಂಘದ ವತಿಯಿಂದ ನಡೆದಪ್ರತಿಭಾ ಆಯ್ಕೆ ಕಾರ್ಯಕ್ರಮದಲ್ಲಿ ಮಾತನಾಡಿದರು.ರಾಷ್ಟ್ರೀಯ ಶಿಕ್ಷಣ ನೀತಿಯಡಿ ಪಠ್ಯ ಹಾಗೂ ಪತ್ಯೇತರ ಚಟುವಟಿಕೆಗೆ ಹೆಚ್ಚಿನ ಒತ್ತು ನೀಡಲಾಗುತ್ತದೆ. ಪರೀಕ್ಷಾ ತಯಾರಿಒತ್ತಡದ ನಡುವೆಯೂ ಶಿಕ್ಷಕರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.


ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ವೈಯಕ್ತಿಕ ಶಾಸ್ತ್ರೀಯ ನೃತ್ಯ ಪ್ರೇಕ್ಷಕರ ಗಮನ ಸೆಳೆಯಿತು. ದೇಶೀಯ ನೃತ್ಯ ಪ್ರೇಕ್ಷಕರಗದ್ದಲ ಚುರುಕುಗೊಳಿಸಿತು. ಇಡೀ ಸಭಾಂಗಣ ಪ್ರೇಕ್ಷಕರ ವೇದಿಕೆಯಾಯಿತು. ಸಾಂಪ್ರದಾಯಿಕ ಉಡುಗೆ, ಕೃಷಿ ಪರಿಕರ
ಬಳಕೆ ಮಾಡುವ ಮೂಲಕ ಜಾನಪದ ನೃತ್ಯ ನೆರದಿದ್ದವರ ಮೈಮನ ಅರಳಿಸಿತು.ದೇಶೀಯ ಸಾಮೂಹ ನೃತ್ಯ, ದೇಶೀಯ ಸಾಮೂಹಿಕ ಗೀತೆ ಮತ್ತು ಕಿರು ಪ್ರಹಸನಕ್ಕೆ ರವೀಂದ್ರ ಕಲಾ ಭವನ ವೇದಿಕೆ ಸಾಕ್ಷಿಯಾಯಿತು. ಪೌರಾಣಿಕ ಮತ್ತು ಸಾಮಾಜಿಕ ಸಂದೇಶ ನೀಡುವ ಅನೇಕ ದೇಶೀಯ ನೃತ್ಯ ಮೂಡಿಬಂದವು.
ಶಾಸ್ತ್ರೀಯ ಸಂಗೀತ, ವಾದ್ಯ ಮತ್ತು ತಾಳವಾದ್ಯ ಸ್ಪರ್ಧೆ, ಕರಾವಳಿಯ ಗಂಡುಕಲೆ ಯಕ್ಷಗಾನ ಭಾಗವತಿಕೆ, ಭಾವಗೀತೆ,ಜಾನಪದ ಗೀತೆ, ದೇಶೀಯ ಸಂಗೀತ, ಪಾಶ್ಚಾತ್ಯ ದೇಶೀಯ ಸಂಗೀತ ಸ್ಪರ್ಧೆಗಳನ್ನು ವಿದ್ಯಾರ್ಥಿಗಳು ಶಿವರಾಮ ಕಾರಂತಸಭಾ ಭವನದಲ್ಲಿ ಪ್ರಸ್ತುತಪಡಿಸಿದರು. ಕಾಲೇಜಿನ ವಿವಿಧ ವಿಭಾಗಗಳ ಅಧ್ಯಾಪಕರು ಸ್ಪರ್ಧೆಗಳ ತೀರ್ಪುಗಾರರಾಗಿ ಉಪಸ್ಥಿತರಿದ್ದರು. ಉದ್ಘಾಟನಾಸಮಾರಂಭದಲ್ಲಿ ವಿದ್ಯಾರ್ಥಿ ಸಂಘದ ಉಪನಿರ್ದೇಶಕಿ ಪ್ರೊ. ಲತಾ ಎ. ಪಂಡಿತ್‌, ಲಲಿತ ಕಲಾ ಸಂಘ ಸಹನಿರ್ದೇಶಕಿ ಡಾ.
ಮೀನಾಕ್ಷಿ ಎಂ. ಎಂ., ವಿದ್ಯಾರ್ಥಿ ಸಂಘದ ಪದಾಧಿಕಾರಿಗಳು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles