24 C
Karnataka
Friday, November 15, 2024

ಡಿ.1 ರಂದು *”ರಾಪಾಟ” ಬಿಡುಗಡೆ

ಮ೦ಗಳೂರು : ಬೊಳ್ಳಿ ಮೂವೀಸ್ ಹಾಗೂ ಅವಿಕಾ ಪ್ರೊಡಕ್ಷನ್ಸ್ ನಿರ್ಮಾಣದ ತೆಲಿಕೆದ ಬೊಳ್ಳಿ ಡಾ. ದೇವದಾಸ್ ಕಾಪಿಕಾಡ್ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು, ಅರ್ಜುನ್ ಕಾಪಿಕಾಡ್ ನಿರ್ದೇಶನದ ಚೊಚ್ಚಲ ಸಿನಿಮಾ ರಾಪಟ ಡಿ.1 ರಂದು ಅದ್ದೂರಿಯಾಗಿ ಕರಾವಳಿಯಾದ್ಯಂತ ತೆರೆಕಾಣಲಿದೆ.

ಸಿನಿಮಾದ ಬಗ್ಗೆ ಗುರುವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ ನಿರ್ದೇಶಕ ಅರ್ಜುನ್ ಕಾಪಿಕಾಡ್ ಅವರು ತುಳುನಾಡಿನ ಹಾಸ್ಯ ದಿಗ್ಗಜರು ಚಿತ್ರದಲ್ಲಿ ನಟಿಸಿದ್ದು, ತಾಂತ್ರಿಕ ವಿಭಾಗದಲ್ಲೂ ಅನುಭವಿ ತಂಡ ಕೆಲಸ ಮಾಡಿದೆ. ಸಂಪೂರ್ಣ ಹಾಸ್ಯ ಮನರಂಜನೆಯ ರಾಪಟ ಸಿನಿಮಾದಲ್ಲಿ ಉತ್ತಮ ಕತೆ ಇದೆ. ಸಿನಿಮಾದಲ್ಲಿ ಖ್ಯಾತ ಕಲಾವಿದರು ಅಭಿನಯಿಸಿದ್ದಾರೆ. ಅನೂಪ್ ಸಾಗರ್ ನಾಯಕ ನಟನಾಗಿ ಹಾಗೂ ನಿರೀಕ್ಷ ಶೆಟ್ಟಿ ನಾಯಕಿಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ತುಳು ಚಿತ್ರ ರಂಗದ ದಿಗ್ಗಜರಾದ ದೇವದಾಸ್ ಕಾಪಿಕಾಡ್, ಅರವಿಂದ ಬೋಳಾರ್, ಭೋಜರಾಜ್ ವಾಮಂಜೂರು, ಸಾಯಿ ಕೃಷ್ಣ ಕುಡ್ಲ, ದೀಪಕ್ ರೈ ಪಾಣಾಜೆ, ರೂಪಶ್ರೀ ವರ್ಕಾಡಿ , ಪ್ರಕಾಶ್ ತೂಮಿನಾಡು, ವಿಕೀಶಾ, ರವಿರಾಮ ಕುಂಜ ಮುಂತಾದವರು ನಟಿಸಿದ್ದಾರೆ ಎ೦ದರು.


ರಾಪಟ ಹಾಸ್ಯ ಮಿಶ್ರಿತ ಮನರಂಜನೆಯನ್ನು ಒಳಗೊಂಡಿದೆ. ಪ್ರೇಕ್ಷಕರ ಅಭಿರುಚಿಗೆ ತಕ್ಕಂತೆ ಸಿನಿಮಾ ಮೂಡಿಬಂದಿದೆ. ಸಿನಿಮಾ ಪ್ರೇಕ್ಷಕರಿಗೆ ಇಷ್ಟವಾಗುತ್ತದೆ ಎನ್ನುವ ನಂಬಿಕೆ ಇದೆ. ಸಮಸ್ತ ತುಳುವರು ಸಿನಿಮಾ ನೋಡಿ ಪ್ರೋತ್ಸಾಹಿಸಿ ಎಂದು ನಿರ್ದೇಶಕ ಅರ್ಜುನ್ ಕಾಪಿಕಾಡ್ ವಿನಂತಿಸಿದರು.
ಸಹ ನಿರ್ದೇಶಕರಾಗಿ ಶನಿಲ್ ಗುರು, ಸಿನಿಮಾಟೋಗ್ರಾಫರ್ ರಾಗಿ ಸಚಿನ್ ಎಸ್.ಶೆಟ್ಟಿ, ಎಕ್ಸಿಕ್ಯೂಟಿವ್ ಪ್ರೊಡ್ಯೂಸರ್ ಸಂದೀಪ್ ಶೆಟ್ಟಿ, ಎಡಿಟರ್ ಯಶ್ವಿನ್.ಕೆ. ಶೆಟ್ಟಿಗಾರ್, ಸಂಗೀತ ಪ್ರಸಾದ್.ಕೆ. ಶೆಟ್ಟಿ, ನಿರ್ಮಾಪಕರಾಗಿ ಸಂತೋಷ್ ಸುವರ್ಣ, ಸೂರ್ಯಕಾಂತ್ ಸುವರ್ಣ, ರಾಜನ್ ರಾಕೇಶ್ ಶೆಟ್ಟಿ, ಆಶಿಕಾ ಸುವರ್ಣ, ದೇವಿಕಾ ಆಚಾರ್ಯ, ಶೈಲರಾಜ್ ಪೂಜಾರಿ, ಅಭಿಶೆಟ್ಟಿ, ಮನೋಜ್‌ಶೆಟ್ಟಿ, ಯಕ್ಷಿತ್ ಶೆಟ್ಟಿ, ಮಧು ಕುಮಾರ್ ಕಾರ್ಯನಿರ್ವಹಿಸಿದ್ದಾರೆ. ರಾಪಟ ತುಳು ಸಿನಿಮಾ ಸೆಪ್ಟೆಂಬರ್ 9 ಮತ್ತು 10ರಂದು ಯುಎಇ, ಸೆ. 15ರಂದು ಬಹರೈನ್, ಸೆ.22ರಂದು ಮಸ್ಕತ್, ಸೆ.29ರಂದು ಕತಾರ್‌ನಲ್ಲಿ ಪ್ರೀಮಿಯರ್ ಶೋ ನಡೆದಿದ್ದು, ಸಿನಿಪ್ರೇಕ್ಷಕರಿಂದ ಮೆಚ್ಚುಗೆ ಪಡೆದುಕೊಂಡಿದೆ ಎ೦ದವರು ವಿವರಿಸಿದರು.
ಡಾ. ದೇವದಾಸ್ ಕಾಪಿಕಾಡ್ ಅವರು ಮಾತನಾಡಿ ರಾಪಟ ನಿಮಾ ವಿಭಿನ್ನವಾಗಿ ಮೂಡಿಬ೦ದಿದೆ. ಈಗಾಗಲೇ ವಿದೇಶದಲ್ಲಿ ಪ್ರೀಮಿಯರ್ ಶೋ ಮೂಲಕ ಬಾರೀ ಜನಮನ್ನಣೆಗೆ ಪಾತ್ರವಾಗಿದೆ. ಸಿನಿಮಾ ವೀಕ್ಷಿಸಿದ ಪ್ರೇಕ್ಷಕರು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ ಎ೦ದರು.
ನಾಯಕ ನಟ ಅನೂಪ್ ಸಾಗರ್ ,ನಾಯಕಿ ನಿರೀಕ್ಷ ಶೆಟ್ಟಿ ಶರ್ಮಿಳಾ ಕಾಪಿಕಾಡ್ , ಸಚಿನ್, ಸಚಿನ್ ಎಸ್.ಶೆಟ್ಟಿ, ಜಗನ್ನಾಥ ಶೆಟ್ಟಿ ಬಾಳ ಮತ್ತಿತರರು ಉಪಸ್ಥಿತರಿದ್ದರು.

,

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles