ಮ೦ಗಳೂರು: ನಮಗೆ ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಬೆಳೆಯಲು ಕನಕದಾಸರ ಮಾರ್ಗದರ್ಶನ ಅಗತ್ಯ ಎಂದು ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್ . ಎಂ. ಪಿ ಹೇಳಿದರು.
ಅವರು ಗುರುವಾರ ನಗರದ ತುಳುಭವನದಲ್ಲಿ ನಡೆದ ಕನಕದಾಸ ಜಯಂತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.ಭಾರತದಲ್ಲಿ ನಾವು ಆರ್ಥಿಕ ಮತ್ತು ಸಾಮಾಜಿಕವಾಗಿ ಬೆಳೆದಿದ್ದೇವೆ. ಇದಕ್ಕೆ ಬುನಾದಿಯನ್ನುದಾಸರು ಹಾಕಿದ್ದಾರೆ. ಕನಕದಾಸರು ಭಕ್ತನಾಗಿ, ಪರಿಶುದ್ಧವಾದ ಯಾವುದೇ ಸ್ವಾರ್ಥವಿಲ್ಲದೆ ಬದುಕು ಕಟ್ಟುವುದರ ಜೊತೆಗೆ ಸಮಾಜದ ಮೇಲು ಕೀಳುಗಳನ್ನು ತೊಡೆದು ಹಾಕಲು ತತ್ವಗಳನ್ನು ನೀಡಿದ ಮಹಾನ್ ಚಿಂತಕರು ಎಂದು ಅವರು ಹೇಳಿದರು.
ಮುಂಡಾಜೆ ಮೊರಾರ್ಜಿ ವಸತಿ ಶಾಲೆಯ ಶಿಕ್ಷಕ ಹಾಗೂ ಚಿಂತಕ ಅರವಿಂದ ಚೊಕ್ಕಾಡಿ ಕನಕ ಜಯಂತಿ ಸಂದೇಶ ನೀಡಿದರು.
ವೇದಿಕೆಯಲ್ಲಿ ಮುಖ್ಯ ಅತಿಥಿಗಳಾಗಿ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಡಾ. ಆನಂದ್. ಕೆ, ಮಂಗಳೂರು ಹಾಲುಮತ ಮಹಾಸಭಾದ ಅಧ್ಯಕ್ಷ ಬಸವರಾಜ. ಬಿ, ಕರಾವಳಿ ಕುರುಬರ ಮಹಾಸಭಾದ ಅಧ್ಯಕ್ಷ ಕೆ. ಎನ್. ಬಸವರಾಜಪ್ಪ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಹಾಲುಮತ ಮತ್ತು ಕುರುಬ ಸಮುದಾಯದ ಸಂಘ ಸಂಸ್ಥೆಗಳ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕರು ರಾಜೇಶ್ ಜಿ ಸ್ವಾಗತಿಸಿ, ವಾರುಣಿ ನಾಗರಾಜ್ ನಿರೂಪಿಸಿದರು.