24 C
Karnataka
Friday, November 15, 2024

ಸಿಎಚ್‌ಡಿ ಗ್ರೂಪ್‌ನಿಂದ ಯುಎಇಯ ಸಿಒಪಿ28 ಸಭೆಯಲ್ಲ್ಲಿಜಾಗತಿಕ ನಿಯೋಗದ ಮುನ್ನಡೆಸುವಿಕೆ

ಮಂಗಳೂರು :ಯುನೈಟೆಡ್ ಅರಬ್ ಎಮಿರೇಟ್ಸ್‌ನಲ್ಲಿ ಯುಎನ್‌ಎಫ್‌ಸಿಸಿಯ ಸಿಒಪಿ28 ಸಭೆಯಲ್ಲಿ ಮಂಗಳೂರು ಪ್ರಧಾನ ಕಚೇರಿಯ ಜಾಗತಿಕ ಆರೋಗ್ಯ ಸಂಸ್ಥೆಯಾದ ಸಿಎಚ್‌ಡಿ ಗ್ರೂಪ್ ಸಂಸ್ಥೆಯು ಅಂತರರಾಷ್ಟ್ರೀಯ ನಿಯೋಗವನ್ನುಮುನ್ನಡೆಸಲಿದೆ. ಸಿಒಪಿ28 ಸಭೆಯು 2023, ನವೆಂಬರ್ 30ರಿಂದ ಡಿಸೆಂಬರ್ 12ರವರೆಗೆ ಜರುಗಲಿದೆ.
ಸಿಎಚ್‌ಡಿ ಗ್ರೂಪ್ ಸಂಸ್ಥೆಯು ದಕ್ಷಿಣ ಏಷ್ಯಾ, ಆಫ್ರಿಕಾ ಮತ್ತು ಇರಾನ್‌ನಿಂದ 7 ಸದಸ್ಯರನ್ನೊಳಗೊಂಡ ತಜ್ಞರ ನಿಯೋಗವನ್ನು ಮುನ್ನಡೆಸುತ್ತದೆ.ಹಾಗೂ, ಹವಾಮಾನ ಬದಲಾವಣೆಯ ಸಾರ್ವಜನಿಕ ಆರೋಗ್ಯ ಪರಿಣಾಮಗಳು, ಶಕ್ತಿ ಪರಿವರ್ತನೆ, ಜೈವಿಕ ಇಂಧನ ಕಡಿತ ಮತ್ತು ಆಹಾರ ಸುರಕ್ಷತೆಯಕಾಳಜಿಗಳಿಗೆ ಸಂಬಂಧಿಸಿದ ಚರ್ಚೆಗಳಲ್ಲಿ ವಿಶ್ವದಾದ್ಯಂತ ವಿವಿಧಪಾಲುದಾರರೊಂದಿಗೆ ತನ್ನನ್ನು ತೊಡಗಿಸಿಕೊಳ್ಳುತ್ತದೆ.ಯುಎನ್‌ಎಫ್‌ಸಿಸಿ ಮತ್ತು ಸಿಒಪಿ ಸಭೆಗಳ ಇತಿಹಾಸದಲ್ಲಿ ಸಿಒಪಿ28 ಮೊದಲ ಬಾರಿಗೆಆರೋಗ್ಯವನ್ನು ಕಾರ್ಯಸೂಚಿಯಾಗಿ ಚರ್ಚಿಸಲಾಗುತ್ತಿದೆ ಮತ್ತು ಮಂಡಿಸಲಾಗುತ್ತಿದೆ. ಸಿಎಚ್‌ಡಿ ಗ್ರೂಪ್ ಸಂಸ್ಥೆಯು ಜೊತೆಜೊತೆಗೆ ಕ್ಲೈಮೇಟ್ ಆಕ್ಷನ್ ನೆಟ್‌ವರ್ಕ್ -ಸೌತ್ ಏಷ್ಯಾದೊಂದಿಗೆ ಜಂಟಿಯಾಗಿ ಸಭೆಯನ್ನು ನಡೆಸಲಿದ್ದು, ಇದು ದಕ್ಷಿಣ ಏಷ್ಯಾದಲ್ಲಿ ಶಕ್ತಿಯ ಪರಿವರ್ತನೆಯತ್ತ ಗಮನ ಹರಿಸಲಿದೆ.
ಸಿಎಚ್‌ಡಿ ಗ್ರೂಪ್ ಸ್ಥಾಪಕ ಮತ್ತು ಸಿಇಒ ಆಗಿರುವ ಡಾ. ಎಡ್ಮಂಡ್ ಫೆನಾರ್ಂಡಿಸ್ ಅವರು ಹೊರಸೂಸುವಿಕೆಯನ್ನು ಕಡಿಮೆ ಮಾಡುವ ಮತ್ತು ಸಮಾನ ಆಹಾರ ವಿತರಣೆಯನ್ನು ಉತ್ತೇಜಿಸುವಕುರಿತು ವಿಶ್ವಸಂಸ್ಥೆಯ ಫೌಂಡೇಶನ್ ವೇದಿಕೆಯಲ್ಲಿ ಮಾತನಾಡಲಿದ್ದಾರೆ, ಜೊತೆಗೆ ಆಹಾರ ವ್ಯವಸ್ಥೆಗಳು, ಸಾರ್ವಜನಿಕ ಪೋಷಣೆಯ ಹವಾಮಾನ ಸಂವೇದನೆ ಕುರಿತು ಮತ್ತು ಯುದ್ಧವು ಆಹಾರ ಸುರಕ್ಷತೆ ಮತ್ತು ಆರೋಗ್ಯ ವ್ಯವಸ್ಥೆಗಳ ಮೇಲೆ ಹೇಗೆ ಪರಿಣಾಮಬೀರುತ್ತದೆ ಮುಂತಾದುವುಗಳ ಬಗ್ಗೆ ಉಕ್ರೇನ್ ರಾಷ್ಟ್ರದ ವೇದಿಕೆಯಲ್ಲಿ ಅವರು ಮಾತನಾಡಲಿದ್ದಾರೆ. ಈ ಸಂದರ್ಭದಲ್ಲಿ ಡಾ. ಫೆನಾರ್ಂಡಿಸ್ ಹಲವಾರು ಪ್ರಮುಖ ವಿಶ್ವ ನಾಯಕರನ್ನು ಭೇಟಿ ಮಾಡುವ ನಿರೀಕ್ಷೆಯಿದೆ.
ಡಾ. ಎಡ್ಮಂಡ್ ಫೆನಾರ್ಂಡಿಸ್ ಈ ಹಿಂದೆ ಯುಎನ್‌ಎಫ್‌ಸಿಸಿಯನ್ನು ಹವಾಮಾನ ಸುರಕ್ಷಿತ ಭವಿಷ್ಯಕ್ಕಾಗಿ ಎಲ್ಲಾ ನೀತಿಗಳಲ್ಲಿ ಸಾರ್ವಜನಿಕ ಆರೋಗ್ಯವನ್ನು ಮುಖ್ಯವಾಹಿನಿಗೆ ತರಲು ಒತ್ತಾಯಿಸಿದ್ದರು. ಸಿಒಪಿ28ನಲ್ಲಿ ಅವರು ಆಹಾರದ ಭವಿಷ್ಯದ ಕುರಿತಾದಜಾಗತಿಕ ಒಕ್ಕೂಟದ ಸಮೂಹದ ಭಾಗವಾಗಿದ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles