ಉಳ್ಳಾಲ: ಮಾದಕ ದ್ರವ್ಯ ಮಾರಾಟ ಮಾಡಲು ಬ೦ದಿದ್ದ ಇಬ್ಬರು ಆರೋಪಿಗಳನ್ನು ಬ೦ಧಿಸಿರುವ ಉಳ್ಳಾಲ ಪೊಲೀಸರು ಇಬ್ಬರು ಆರೋಪಿಗಳನ್ನು ಬ೦ಧಿಸಿದ್ದಾರೆ.ಶಿಶಿರ್ ದೇವಾಡಿಗ ಮತ್ತು ಶುಶಾನ್.ಎಲ್ ಬ೦ಧಿತ ಆರೋಪಿಗಳು.
4-12-2023 ರಂದು ಉಳ್ಳಾಲ ತಾಲೂಕು ಪೆರ್ಮನ್ನೂರು ಗ್ರಾಮದ ಸಂತೋಷನಗರ ಸಾರ್ವಜನಿಕ ರಸ್ತೆ ಬದಿಯಲ್ಲಿ ಬಿಳಿ ಬಣ್ಣದ ಸ್ವಿಪ್ಟ್ ಕಾರಿನಲ್ಲಿ ಬಂದಿರುವ ಆರೋಪಿಗಳಾದ ಶಿಶಿರ್ ದೇವಾಡಿಗ ಮತ್ತು ಶುಶಾನ್.ಎಲ್.ನಿಷೇದಿತ ಮಾದಕ ವಸ್ತು ಸುಮಾರು 132 ಗ್ರಾಂ ತೂಕದ Methamphetamine ಮತ್ತು 250LSD ಸ್ಟ್ಯಾಂಪ್ ಡ್ರಗ್‍ನ್ನು, ಅಕ್ರಮವಾಗಿ ಸಾಗಾಟ ಮಾಡಿ ಮಾರಾಟ ಮಾಡಲು ಬಂದಿರುವವರನ್ನು ಪತ್ತೆಮಾಡಿ ಇವರುಗಳ ವಶದಿಂದ ಮೇಲೆ ವಿವರಿಸಿದ ಮಾದಕ ವಸ್ತು, ನಗದು ಹಣ ರೂ.3,70,050/- ಹಾಗೂಸ್ವಿಪ್ಟ್ ಕಾರು ಹೀಗೇ ಒಟ್ಟು ರೂ.14,01,050-00 ಸೊತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ.
ಈದಾಳಿಯಲ್ಲಿ ಮಂಗಳೂರು ದಕ್ಷಿಣಉಪವಿಭಾಗ ಸಹಾಯಕ ಪೊಲೀಸ್ ಆಯುಕ್ತರಾದ ಧನ್ಯ.ಎನ್.ನಾಯಕ ರವರ ನೇತೃತ್ವದಲ್ಲಿ Anti-Drug Team ಪಿಎಸ್‍ಐ ಪುನಿತ್ ಗಾಂವ್‍ಕರ್, ಉಳ್ಳಾಲ ಠಾಣಾಪಿಎಸ್‍ಐ, ಸಂತೋಷಕುಮಾರ್.ಡಿ. ಹಾಗೂ ಸಿಬ್ಬಂದಿಗಳಾದ ಸಾಜು ನಾಯರ್, ಮಹೇಶ್, ಶಿವಕುಮಾರ್,ಅಕ್ಬರ್ ಯಡ್ರಾಮಿ ರವರು ಭಾಗವಹಿಸಿರುತ್ತಾರೆ.