ಮ೦ಗಳೂರು: ಮಂಗಳೂರು ನಗರ ಬ್ಲಾಕ್ ಕಾಂಗ್ರೆಸ್ ಸಮಿತಿ ಹಾಗೂ ಬ್ಲಾಕ್ ನ ಪರಿಶಿಷ್ಟ ಘಟಕದ ವತಿ ವಿಶ್ವದ ಜ್ಞಾನಿ ಸಂವಿಧಾನ ಶಿಲ್ಪಿ ಡಾ. ಬಿ.ಆರ್ ಅಂಬೇಡ್ಕರ್ ರವರ 67 ನೇ ಪರಿನಿರ್ವಾಣ ದಿನ ಇತ್ತೀಚಿಗೆ ಆಚರಿಸಲಾಯಿತು. ಬ್ಲಾಕ್ ಅಧ್ಯಕ್ಷ ಪ್ರಕಾಶ್ ಬಿ ಸಾಲ್ಯಾನ್ ರವರು ಅಂಬೇಡ್ಕರ್ ಭವನದಲ್ಲಿರುವ ಪುತ್ಥಳಿಗೆ ಮಾಲಾರ್ಪಣೆ ಮಾಡಿದರು.
ವಿಧಾನ ಪರಿಷತ್ ಮಾಜಿ ಸದಸ್ಯರಾದ ಐವನ್ ಡಿಸೋಜರವರು ಮಾತನಾಡಿ, ದೇಶದ ಹಿಂದುಳಿದ ವರ್ಗಕ್ಕೆ ನ್ಯಾಯ ಒದಗಿಸಿ ಕೊಟ್ಟ ಜಗತ್ತಿನ ಶ್ರೇಷ್ಠ ಜ್ಞಾನಿ ಅಂಬೇಡ್ಕರ್ ರವರ ಸ್ಮರಣೆ ನಿರಂತರವಾಗಿ ನಮ್ಮ ಮನದಾಳದಲ್ಲಿರ ಬೇಕು ಎಂದರು.ಮಾಜಿ ಉಪಮಹಾಪೌರರಾದ ಮಹಮ್ಮದ್ ಕುಂಜತ್ತಬೈಲ್ ಮಾತನಾಡಿ, ಎಲ್ಲಾ ವರ್ಗದ ಜನರಿಗೆ ಮೀಸಲಾತಿಯನ್ನು ತಂದು ಆ ಮೂಲಕ ಸಮಾಜದಲ್ಲಿ ಸ್ವತಂತ್ರ ಬದುಕನ್ನು ನಮ್ಮದಾಗಿಸಲು ಸಂವಿಧಾನ ಮೂಲ ಕಾರಣ. ನಾನಾ ಧರ್ಮಕ್ಕೊಂದು ಗ್ರಂಥವಿದೆ ಆದರೆ ದೇಶಕ್ಕೊಂದು ಗ್ರಂಥ ಅದು ಭಾರತದ ಸಂವಿಧಾನ. ಇದೇ ಡಾ.ಬಿ.ಆರ್.ಅಂಬೇಡ್ಕರ್ ರವರ ದೊಡ್ಡ ಕೊಡುಗೆ ಎಂದು ಸ್ಮರಿಸಿದರು.
ಕಾರ್ಯಕ್ರಮದಲ್ಲಿ ಬ್ಲಾಕ್ ಪರಿಶಿಷ್ಟ ಘಟಕದ ಅಧ್ಯಕ್ಷ ದಿನೇಶ್ ಬಿಜೈ ಬಲಿಪತೋಟ, ಮಾಜಿ ಮೇಯರ್ ಶಶಿಧರ್ ಹೆಗ್ಡೆ, ಮಹಿಳಾ ಕಾಂಗ್ರೆಸ್ ಅಧ್ಯಕ್ಷಶಾಂತಲಾ ಗಟ್ಟಿ, ಮೋಹನಂಗಯ್ಯ ಸ್ವಾಮಿ, ಬ್ಲಾಕ್ ಪ್ರಧಾನ ಕಾರ್ಯದರ್ಶಿ ಚೇತನ್ , ಪದ್ಮನಾಭ ಅಮಿನ್, ಕಿರಣ್ ಕುಮಾರ್ ಕೊಡಿಯಾಲ್ ಬೈಲ್, ಟಿ.ಸಿ ಗಣೇಶ್, ರಾಜೇಂದ್ರ ಚಿಲಿಂಬಿ , ರವಿರಾಜ್ ಪೂಜಾರಿ, ವಸಂತಿ ಬಲಿಪತೋಟ, ಪ್ರತಾಪ್ ಸಾಲ್ಯಾನ್ ಕದ್ರಿ, ಪ್ರಕಾಶ್ ಕೋಡಿಕಲ್, ರೂಪಾ ಚೇತನ್, ರವಿಂದ್ರ ಬಲಿಪತೋಟ, ವಸಂತಿ ಮೋಹನಂಗಯ್ಯ ಸ್ವಾಮಿ, ಪ್ರಜ್ವಲ್ ಮತ್ತಿತರರು ಉಪಸ್ಥಿತರಿದ್ದರು.