19 C
Karnataka
Wednesday, November 27, 2024

ಮೂಡುಬಿದಿರೆಯಲ್ಲಿ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಸ೦ಭ್ರಮ

ಮೂಡುಬಿದಿರೆ: ಕಳೆದ 28 ವರ್ಷಗಳಿಂದ ರಾಷ್ಟ್ರ- ಅಂತರಾಷ್ಟ್ರಮಟ್ಟದ ಕಲಾವಿದರನ್ನು ಮೂಡುಬಿದಿರೆಯ ಎಂಬ ಗ್ರಾಮೀಣ ಪ್ರದೇಶಕ್ಕೆ ಕರೆಸಿ ವಿವಿಧ ರೀತಿಯ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಸಾದರಪಡಿಸುವ ಮೂಲಕ ಮೂಡುಬಿದಿರೆಯ ಹೆಸರನ್ನು ಅಂತರಾಷ್ಟ್ರೀಯ ಮಟ್ಟದಲ್ಲಿ ಪರಿಚಯಿಸಿದ ರಾಷ್ಟ್ರೀಯ ಸಾಂಸ್ಕೃತಿಕ ಉತ್ಸವ ಆಳ್ವಾಸ್ ವಿರಾಸತ್ ಇದೀಗ 29 ನೇ ವರ್ಷದ ಸಡಗರಕ್ಕೆ ಸಜ್ಜಾಗಿದ್ದು ಇಂದಿನಿಂದ ನಾಲ್ಕು ದಿನಗಳ ಕಾಲ ಸಾಂಸ್ಕೃತಿಕ ಕಾರ್ಯಕ್ರಮಗಳೊಂದಿಗೆ ಕಲಾಸಕ್ತರಿಗೆ ರಸದೌತಣ ನೀಡಲಿದೆ.
ಕಲಾ ರಸಿಕ, ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ ಆಳ್ವರ ಸಾರಥ್ಯದಲ್ಲಿ ಸ್ಥಳೀಯರಿಗೆ ಮಾತ್ರ ಸೀಮಿತಗೊಳಿಸಿ ಜೈನ ಕಾಶಿ ಮೂಡುಬಿದಿರೆಯ ಸಾವಿರ ಕಂಬದ ಬಯಲು ರಂಗ ಮಂದಿರದಲ್ಲಿ ‘ಸ್ಪಿಕ್ ಮೆಕೆ ವಿರಾಸತ್’ ಎಂಬ ಹೆಸರಿನೊಂದಿಗೆ ಆರಂಭಗೊಂಡಿರುವ ಸಾಂಸ್ಕೃತಿಕ ಉತ್ಸವ ನಂತರ 2000 ಇಸವಿಯಲ್ಲಿ ಮಿಜಾರಿನ ಶೋಭಾವನಕ್ಕೆ ಸ್ಥಳಾಂತರಗೊಂಡು ವೈಭವಯುತವಾಗಿ ನಡೆಯಲು ಆರಂಭಿಸಿತು. ಆನಂತರ ಎರಡು ವರ್ಷಗಳ ಕಾಲ ವಿದ್ಯಾಗಿರಿಯ ಪ್ಯಾಲೇಸ್ ಗ್ರೌಂಡ್ ನಲ್ಲಿ ನಡೆಯಿತು. ಇದೀಗ ಪುತ್ತಿಗೆಯ ವಿವೇಕಾನಂದ ನಗರದ ಶ್ರೀಮತಿ ಕೆ.ವನಜಾಕ್ಷಿ ಶ್ರೀಪತಿ ಭಟ್ ಬಯಲು ರಂಗಮಂದಿರಲ್ಲಿ ಮೇಳೈಸುತ್ತಿದ್ದು, ಬಸದಿಯಿಂದ ಬಯಲು ರಂಗಮಂದಿರದವರೆಗೆ ಸಾಗಿದೆ.
ಪ್ರತಿ ವರ್ಷ ರಾಷ್ಟ್ರಮಟ್ಟದ ಕಲಾವಿದರೊಬ್ಬರಿಗೆ ‘ಆಳ್ವಾಸ್ ವಿರಾಸತ್ ” ಪ್ರಶಸ್ತಿಯನ್ನು ನೀಡಲು ಆರಂಭಿಸಿ ಇದೀಗ ಮೂರು ಜನ ಕಲಾವಿದರಿಗೆ ನೀಡುವಷ್ಟರ ಮಟ್ಟಿಗೆ ಬೆಳೆದು ಬಂದಿದೆ.

ಈ ಬಾರಿಯ ವಿರಾಸತನ್ನು ದೇಶಕ್ಕಾಗಿ ದೇಹತ್ಯಾಗ ಮಾಡಿದ ವೀರಯೋಧ ಕ್ಯಾಪ್ಟನ್ ಎಂ.ವಿ. ಪ್ರಾಂಜಲ್ ಅವರಿಗೆ ಅರ್ಪಿಸಲಾಗುತ್ತಿದ್ದು ಗುರುವಾರ ಸಂಜೆ 5.30ಕ್ಕೆ ಆಳ್ವಾಸ್ ವಿರಾಸತ್ ಆರಂಭಗೊಳ್ಳಲಿದೆ. ಕರ್ನಾಟಕದ ರಾಜ್ಯಪಾಲರಾದ ಡಾ. ಥಾವರ್ ಚಂದ್ ಗೆಹ್ಲೋಟ್ ವಿರಾಸತ್ ನ್ನು ಉದ್ಘಾಟಿಸಲಿದ್ದು ಶ್ರೀ ಕ್ಷೇತ್ರ ಧರ್ಮಸ್ಥಳದ ಧರ್ಮಾಧಿಕಾರಿ ರಾಜರ್ಷಿ ಡಾ. ಡಿ. ವೀರೇಂದ್ರ ಹೆಗ್ಗಡೆ ಅವರು ಅಧ್ಯಕ್ಷತೆ ವಹಿಸಲಿದ್ದಾರೆ. ಶಾಸಕ ಉಮಾನಾಥ ಕೋಟ್ಯಾನ್, ದ.ಕ.ಜಿಲ್ಲಾಧಿಕಾರಿ ಮುಲ್ಲೈ ಮುಗಿಲನ್, ಮಾಜಿ ಸಚಿವ ಕೆ.ಅಭಯಚಂದ್ರ ಜೈನ್, ಭಾರತ್ ಸ್ಕೌಟ್ ಗೈಡ್ಸ್ ನ ರಾಜ್ಯ ಅಧ್ಯಕ್ಷ ಪಿ.ಜಿ.ಆರ್.ಸಿಂಧ್ಯಾ, ರಾಜ್ಯ ಚಿತ್ರಕಲಾ ಪರಿಷತ್ ನ ಅಧ್ಯಕ್ಷ ಡಾ.ಬಿ.ಎಲ್.ಶಂಕರ್, ಉಡುಪಿ ಜಿ.ಶಂಕರ್ ಫ್ಯಾಮಿಲಿ ಟ್ರಸ್ಟ್ ನ ಅಧ್ಯಕ್ಷ ನಾಡೋಜ ಡಾ.ಜಿ.ಶಂಕರ್, ಎಸ್.ಸಿ.ಡಿ.ಸಿ.ಸಿ.ಬ್ಯಾಂಕ್ ನ ಅಧ್ಯಕ್ಷ ಡಾ.ಎಂ.ಎನ್.ರಾಜೇಂದ್ರ ಕುಮಾರ್, ಮಂಗಳೂರು ಎಂಆರ್ ಜಿ ಗ್ರೂಫ್ ನ ಅಧ್ಯಕ್ಷ ಪ್ರಕಾಶ್ ಶೆಟ್ಟಿ, ಅದಾನಿ ಗ್ರೂಪ್ ನ ಕಾರ್ಯನಿರ್ವಾಹಕ ಕಿಶೋರ್ ಆಳ್ವ, ಪುತ್ತಿಗೆ ಗ್ರಾ.ಪಂ.ಅಧ್ಯಕ್ಷ ರಾಧ ಸಹಿತ ಉದ್ಯಮಿಗಳು ಗೌರವ ಉಪಸ್ಥಿತರಿರುವರು.

೧೦೦ ಕ್ಕಿಂತಲೂ ಅಧಿಕ ದೇಶೀಯ ಜಾನಪದ ಕಲಾತಂಡಗಳ ೩೦೦೦ಕ್ಕೂ ಮಿಕ್ಕಿದ ಕಲಾವಿದರಿಂದ ವೈವಿಧ್ಯಮಯ ಭವ್ಯ ಸಾಂಸ್ಕೃತಿಕ ಮೆರವಣಿಗೆ ನಡೆಯಲಿದೆ.
ವೇದಘೋಷಗಳು, ಭಜನ್ ಗಳು, ಪುಷ್ಪಪಲ್ಲಕ್ಕಿಗಳು ಮಂಗಳವಾದ್ಯಗಳೊಂದಿಗೆ ವಿಘ್ನನಿವಾರಕ ವಿನಾಯಕ, ಸರಸ್ವತಿ, ಶ್ರೀಲಕ್ಷ್ಮೀ, ಹನುಮಂತ, ಶ್ರೀರಾಮ ಶ್ರೀ ಕೃಷ್ಣಾದಿ ಆರೂಢ ದೇವರ ಸಾಂಸ್ಕೃತಿಕ ರಥ ಸಂಚಲನ ಮತ್ತು ರಥಾರತಿ ವಿಶೇಷ ಆಕರ್ಷಣೆಯಾಗಲಿದೆ.

ಸಾಂಸ್ಕೃತಿಕ ಕಾರ್ಯಕ್ರಮಗಳು
೧೫.೧೨.೨೦೨೩ ಶುಕ್ರವಾರ
ಸಂಜೆ ೫.೪೫ :ದೀಪ ಪ್ರಜ್ವಲನ (ಸಭಾ ಕಾರ್ಯಕ್ರಮ ಇರುವುದಿಲ್ಲ)೫.೫೫: ಕಲಾವಿದರಿಗೆ ಸಾಂಪ್ರದಾಯಿಕ ಸ್ವಾಗತ.
೬:೦೦-೮:೦೦: ಗಾನ ವೈಭವಬೆನ್ನಿ ದಯಾಲ್, ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕರುರಾತ್ರಿ ೮:೦೦-೯:೦೦ :ಆಳ್ವಾಸ್ ಸಾಂಸ್ಕೃತಿಕ ವೈಭವ

೧೬.೧೨.೨೦೨೩ ಶನಿವಾರಸಂಜೆ ೫.೪೫: ದೀಪ ಪ್ರಜ್ವಲನ (ಸಭಾ ಕಾರ್ಯಕ್ರಮ ಇರುವುದಿಲ್ಲ)೫.೫೫ : ಕಲಾವಿದರಿಗೆ ಸಾಂಪ್ರದಾಯಿಕ ಸ್ವಾಗತ
೬:೦೦-೮:೦೦ :ಭಾವ ಲಹರಿಶ್ರೇಯಾ ಘೋಷಾಲ್, ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕರುರಾತ್ರಿ :೮:೦೦-೯:೦೦ : ಆಳ್ವಾಸ್ ಸಾಂಸ್ಕೃತಿಕ ವೈಭವ

ಆಳ್ವಾಸ್ ವಿರಾಸತ್ ಪ್ರಶಸ್ತಿ ಪ್ರದಾನ
: ೧೭.೧೨.೨೦೨೩ ರವಿವಾರಸಂಜೆ ೫:೧೫-೦೬:೧೫ :ಆಳ್ವಾಸ್ ವಿರಾಸತ್ -೨೦೨೩ ಪ್ರಶಸ್ತಿ ಪ್ರದಾನ ನಡೆಯಲಿದ್ದು ಕಲಾವಿದರಾದ ಡಾ. ಮೈಸೂರು ಮಂಜುನಾಥ್, ಡಾ. ಪ್ರವೀಣ್ ಗೋಡ್ಖಿಂಡಿ,
ವಿಜಯ ಪ್ರಕಾಶ್ ಅವರಿಗೆ ಆಳ್ವಾಸ್ ವಿರಾಸತ್ -2023 ಪ್ರಶಸ್ತಿ ಪ್ರದಾನ ನಡೆಯಲಿದೆ.೬.೩೦-೦೭.೧೫ :ತಾಳ-ವಾದ್ಯ-ಸಂಗೀತ ಕಾರ್ಯಕ್ರಮ ಡಾ. ಮೈಸೂರು ಮಂಜುನಾಥ್
ಡಾ. ಪ್ರವೀಣ್ ಗೋಡ್ಡಿಂಡಿ, ವಿಜಯ ಪ್ರಕಾಶ್ ಮತ್ತು ಬಳಗ.ರಾತ್ರಿ ೭:೩೦-೯:೩೦ :ಸಂಗೀತ ರಸಸಂಜೆ
ವಿಜಯ ಪ್ರಕಾಶ್, ಖ್ಯಾತ ಚಲನಚಿತ್ರ ಹಿನ್ನಲೆ ಗಾಯಕರು೯:೩೦-೧೦:೧೫ : ಆಳ್ವಾಸ್ ಸಾಂಸ್ಕೃತಿಕ ವೈಭವ

ಆಳ್ವಾಸ್ ವಿರಾಸತ್ ೨೦೨೩ರ ವಿಶೇಷ ಆಕರ್ಷಣೆ
ಪೂರ್ವಾಹ್ನ ೦೯:೦೦ರಿಂದ ರಾತ್ರಿ ೧೦:೦೦ರ ವರೆಗೆ ೦೭ ಮೇಳಗಳ, ೭೫೦ಕ್ಕೂ ಮಿಕ್ಕಿದ ಮಳಿಗೆಗಳೊಂದಿಗೆ ಅನ್ವೇಷಣಾತ್ಮಕ ಕೃಷಿಕ, ಶತಾಯುಷಿ ಮಿಜಾರುಗುತ್ತು ಆನಂದ ಆಳ್ವ ಸ್ಮರಣಾರ್ಥ
ಪ್ರದರ್ಶನ ಮತ್ತು ಮಾರಾಟ ಮಹಾಮೇಳ.ಸ್ಥಳ: ಮುಂಡ್ರುದೆಗುತ್ತು ಕೆ. ಅಮರನಾಥ ಶೆಟ್ಟಿ (ಕೃಷಿಸಿರಿ ವೇದಿಕೆ) ಆವರಣ, ವಿದ್ಯಾಗಿರಿ, ಮೂಡುಬಿದಿರೆ

ಸಪ್ತಮೇಳಗಳ ಮೆರಗು :
ಕೃಷಿ ಮೇಳ : ಹಣ್ಣು-ತರಕಾರಿ-ಹೂವಿನ ಬೀಜಗಳು, ನರ್ಸರಿಗಳು, ಸಾವಯವ-ರಾಸಾಯನಿಕ ಗೊಬ್ಬರಗಳು, ನೀರು- ನೆಲಗಳಲ್ಲಿ ಬೆಳೆಯುವ ವಿವಿಧ ಹೂಗಿಡಗಳು, ಕೃಷಿ ಉಪಕರಣ-ಯಂತ್ರಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು.
ಆಹಾರ ಮೇಳ: ಸಸ್ಯಾಹಾರ-ಮಾಂಸಾಹಾರಗಳ ವೈವಿಧ್ಯಮಯ ತಿನಿಸುಗಳ ಹಾಗೂ ವಿವಿಧ ಪಾನೀಯಗಳ ಸಿದ್ಧ ಮತ್ತು ಸ್ಥಳದಲ್ಲೇ ತಯಾರಿಸುವ ಆಹಾರ ಮಳಿಗೆಗಳು.
ಫಲಪುಷ್ಪ ಮೇಳ :ದೇಶ ವಿದೇಶಗಳ ೨ಲಕ್ಷಕ್ಕೂ ಮಿಕ್ಕಿದ ಫಲ-ಪುಷ್ಪ ಗಿಡಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು.
ಕರಕುಶಲ ಮತ್ತು ಪ್ರಾಚ್ಯವಸ್ತು ಪ್ರದರ್ಶನ ಮೇಳ : ವಸ್ತ್ರಗಳು, ಸಾಂಪ್ರದಾಯಿಕ ಆಭರಣಗಳು, ವಿವಿಧ ಕೆತ್ತನೆಯ ಮೂರ್ತಿಗಳು, ಆಟಿಕೆಗಳೇ ಮೊದಲಾದ ಕರಕುಶಲ ವಸ್ತುಗಳು ಹಾಗೂ ವೈವಿಧ್ಯಮಯ ಪ್ರಾಚ್ಯವಸ್ತುಗಳ ಪ್ರದರ್ಶನ ಮತ್ತು ಮಾರಾಟ ಮಳಿಗೆಗಳು.

ಚಿತ್ರಕಲಾ ಮೇಳ: ದೇಶದ ಖ್ಯಾತ ಚಿತ್ರಕಲಾವಿದರ ಪ್ರಸಿದ್ಧ ಕಲಾಕೃತಿಗಳ ಪ್ರದರ್ಶನ ಮತ್ತು ಮಾರಾಟ ವ್ಯವಸ್ಥೆ.
ಕಲಾಕೃತಿಗಳ ಪ್ರದರ್ಶನ : ಆವರಣದ ತುಂಬಾ ಮಕ್ಕಳಿಂದ ವಯೋವೃದ್ಧರವರೆಗೆ ಎಲ್ಲರನ್ನೂ ಆಕರ್ಷಿಸುವ ವಿಶೇಷ ಕಲಾಕೃತಿಗಳ ಬೃಹತ್ ಪ್ರದರ್ಶನ.ಛಾಯಾಚಿತ್ರಗಳ ಪ್ರದರ್ಶನ : ವಿಶ್ವಮಾನ್ಯ ಪರಿಸರ ಮತ್ತು ವನ್ಯಜೀವಿಗಳ ೨೦೦೦ಕ್ಕೂ ಮಿಕ್ಕಿದ ಛಾಯಾಚಿತ್ರಗಳ ಪ್ರದರ್ಶನ. ಹೀಗೆ ಒಟ್ಟು ಸಪ್ತ ಮೇಳಗಳು ಈ ಬಾರಿಯ ವಿರಾಸತ್ ಗೆ ಮೆರಗು ನೀಡಲಿವೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles