ಮ೦ಗಳೂರು: ಬೇಕಲ ಅಂತರಾಷ್ಟ್ರೀಯ ಬೀಚ್ ಉತ್ಸವದ 2ನೇ ಆವೃತ್ತಿಯು ಡಿ. 22 ರಿಂದ ಡಿ.31 ರವರೆಗೆ ಕಾಸರಗೋಡಿನ
ಪಳ್ಳಿಕೆರೆ ಬೇಕಲ್ ಬೀಚ್ ಪಾರ್ಕ್‌ನಲ್ಲಿ ಬೇಕಲ್ ರೆಸಾರ್ಟ್ಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ಲಿಮಿಟೆಡ್ ಮತ್ತು ಉದುಮ ಶಾಸಕ ಸಿ.ಎಚ್.ಕುಂಞಂಬು ನೇತೃತ್ವದ ವಿಸ್ತೃತ ಸಂಘಟನಾ ಸಮಿತಿ ನೇತೃತ್ವದಲ್ಲಿ
ನಡೆಯಲಿದೆ.
ಬೇಕಲ ಅಂತರಾಷ್ಟ್ರೀಯ ಬೀಚ್ ಉತ್ಸವದ ಬಗ್ಗೆ ಮ೦ಗಳೂರಿನಲ್ಲಿ ಶನಿವಾರ ಪತ್ರಿಕಾಗೋಷ್ಠಿಯಲ್ಲಿ ವಿವರಿಸಿದ ಉದುಮ ಶಾಸಕ ಸಿ.ಎಚ್.ಕುಂಞಂಬು ಅವರು ಹತ್ತು ದಿನಗಳ ಕಾಲ ನಡೆಯುವ ಈ ಉತ್ಸವವು ಹಿಂದಿನ ಆವೃತ್ತಿಯಂತೆ ಕೇರಳದ ಪ್ರವಾಸೋದ್ಯಮ ಇತಿಹಾಸದಲ್ಲಿ ಒಂದು ಮೈಲಿಗಲ್ಲು ಆಗಲಿದೆ ಬೇಕಲ ಮತ್ತು ಕಾಸರಗೋಡಿನ ಇತಿಹಾಸ, ಸಂಸ್ಕೃತಿ, ಭಾಷಾ ವೈವಿಧ್ಯತೆ, ಕಲಾ ಪ್ರಕಾರಗಳು, ಅಭಿವೃದ್ಧಿ ಪರಿಕಲ್ಪನೆಗಳು ಮತ್ತುಪ್ರವಾಸೋದ್ಯಮದ ಪ್ರಗತಿಯನ್ನು ಒಳಗೊಂಡಂತೆ ಉತ್ಸವದ ಉದ್ದಕ್ಕೂ ವೈವಿಧ್ಯಮಯ ಕಾರ್ಯಕ್ರಮಗಳನ್ನು ಸಂಘಟನಾ ಸಮಿತಿಯು ಯೋಜಿಸಿದೆ.ಹತ್ತು ದಿನಗಳ ಈ ಉತ್ಸವದ ಔಪಚಾರಿಕ ಉದ್ಘಾಟನೆಯನ್ನು ಕೇರಳ ವಿಧಾನಸಭೆಯ ಎ.ಎನ್. ಶಂಸೀರ್ ಡಿ. 22 ರಂದು ಸಂಜೆ 5.30 ಕ್ಕೆ ಬೀಚ್ ಪಾರ್ಕ್‌ನಲ್ಲಿ ನೆರವೇರಿಸುವರು ಎ೦ದರು..
ಜಿಲ್ಲೆಯ ಪ್ರಮುಖ ನದಿಗಳಾದ ಚಂದ್ರಗಿರಿ, ತೇಜಸ್ವಿನಿ ಹೆಸರಿನ ಎರಡು ವೇದಿಕೆಗಳಲ್ಲಿ ಉತ್ಸವದ ಕಲಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಲಿದ್ದು, ಪ್ರತಿದಿನ ಬೆಳಗ್ಗೆ 11 ಗಂಟೆಯಿಂದ ಉತ್ಸವಕ್ಕೆ ಪ್ರವೇಶ ನಡೆಯಲಿದೆ. ಟಿಕೆಟ್‌ಗಳು ವಯಸ್ಕರಿಗೆ 10 0ರೂ ಮತ್ತು ಮಕ್ಕಳಿಗೆ 50 ರೂ. ಬೆಳಗ್ಗೆ ಬೇಕಲ ಬೀಚ್ ಪಾರ್ಕ್‌ಗೆ ಪ್ರವೇಶಿಸಿದವರು ರಾತ್ರಿಯವರೆಗೆ ವಿವಿಧ ಕಾರ್ಯಕ್ರಮಗಳನ್ನು ಆನಂದಿಸುವ ರೀತಿಯಲ್ಲಿ ಮೇಳವನ್ನು ಆಯೋಜಿಸಲಾಗಿದೆ. ಕಲಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲದೆ, ಬೀಚ್ ಪಾರ್ಕ್‌ನಲ್ಲಿ ಶೈಕ್ಷಣಿಕ, ಮನರಂಜನೆ ಮತ್ತು ಸಾಹಸ ಕಾರ್ಯಕ್ರಮಗಳು ಸಹ ಇರುತ್ತವೆ. ಉತ್ಸವವು ಆಹಾರ ಮಳಿಗೆಗಳು, ವ್ಯಾಪಾರ ಮತ್ತು ವಾಣಿಜ್ಯ ಮಳಿಗೆಗಳು ಮತ್ತು ಸಾಹಸ ಕ್ರೀಡೆಗಳನ್ನು ಒಳಗೊಂಡಿದೆ.
ಉತ್ಸವ ನಗರದ ಪ್ರಮುಖ ವೇದಿಕೆಯಾದ ಚಂದ್ರಗಿರಿಯಲ್ಲಿ ಪ್ರತೀದಿನ ರಾತ್ರಿ ಏಳು ಗಂಟೆಯಿಂದ ಕಣ್ಮನ ಸೆಳೆಯುವ ಕಾರ್ಯಕ್ರಮಗಳಿರುವುದು. ಡಿ. 22 ಶುಕ್ರವಾರದಂದು ತೈಕ್ಕುಡಂ ಬ್ರಿಡ್ಜ್‌ನಿಂದ ಮೆಗಾ ಲೈವ್ ಮ್ಯೂಸಿಕ್ ಬ್ಯಾಂಡ್, 23 ಶನಿವಾರ ಶಿವಮಣಿ, ಪ್ರಕಾಶ್, ಉಳ್ಳಿಯೇರಿ, ಶರತ್ ಬಳಗದವರಿಂದ ಮ್ಯೂಸಿಕಲ್ಫ್ಯೂ ಷನ್ ಟ್ರಯೋ ಪ್ರದರ್ಶನ , 24 ಆದಿತ್ಯವಾರದಂದು ಕೆ.ಎಸ್.ಚಿತ್ರ ಮತ್ತು ತಂಡದಿಂದ “ಚಿತ್ರ ವಸಂತಂ” ಸಂಗೀತ ಔತಣ , 25 ಸೋಮವಾರಎಂ.ಜಿ. ಶ್ರೀಕುಮಾರ್ ಮತ್ತು ತಂಡದ ಸಂಗೀತ ಕಾರ್ಯಕ್ರಮ, 26 ಮಂಗಳವಾರ ಶೋಭನಾ ಮತ್ತು ಬಳಗದವರಿಂದ ನೃತ್ಯ ಮೇಳ, 27ಬುಧವಾರ ಪದ್ಮಕುಮಾರ್ ಮತ್ತು ಬಳಗದವರಿಂದ ಓಲ್ಡ್ ಈಸ್ ಗೋಲ್ಡ್ ಸಂಗೀತ ಮಾಧುರ್ಯ ಕಾರ್ಯಕ್ರಮ, ಕಾರ್ಯಕ್ರಮದ ಏಳನೇ ದಿನವಾದ ಗುರುವಾರ ಡಿಸೆಂಬರ್ 28 ರಂದು ಅತುಲ್ ನರುಕರ ಅವರಿಂದ ಸೋಲ್ ಆಫ್ ಫೋಕ್, ಫೋಕ್ ಬ್ಯಾಂಡ್ 29 ಶುಕ್ರವಾರದಂದು ಖ್ಯಾತ ಮಾಪಿಳ್ಳೆಹಾಡುಗಾರ ಕಣ್ಣೂರ್ ಶರೀಫ್ ಮತ್ತು ಬಳಗದವರಿಂದ ಮಾಪ್ಪಿಳ್ಳ ಹಾಡುಗಳ ರಾತ್ರಿ, 30 ಶನಿವಾರ ಗೌರಿ ಲಕ್ಷ್ಮಿ ಅವರಿಂದ ಮ್ಯೂಸಿಕಲ್ಬ್ಯಾಂ ಡ್ ಕಾರ್ಯಕ್ರಮದ ಹತ್ತನೇ ಹಾಗು ಕೊನೆಯ ದಿನವಾದ 31 ರಂದು ಆದಿತ್ಯವಾರ ರಾಸ ಬೇಗಂ ಮತ್ತು ತಂಡದಿಂದ ಗಝಲ್ ಮತ್ತುಹೊಸವರ್ಷಾಚರಣೆಯ ಅಂಗವಾಗಿ ವಿಶೇಷ ಕಾರ್ಯಕ್ರಮ ಅಲ್ಲದೆ ಬೇಕಲ ಕಿನಾರೆಯಲ್ಲಿ ಸಿಡಿಮದ್ದು ಪ್ರದರ್ಶನ ಆಯೋಜಿಸಲಾಗಿದೆ.
.ಬೇಕಲ ಬೀಚ್‌ನ ಎರಡನೇ ವೇದಿಕೆಯಾದ ತೇಜಸ್ವಿನಿಯಲ್ಲಿ ಜಿಲ್ಲೆಯ ಕುಟುಂಬಶ್ರೀ ಕಾರ್ಯಕರ್ತೆಯರು ಮತ್ತು ಇತರ ಕಲಾವಿದರಿಂದ
ವಿವಿಧ ಕಲಾ ಕಾರ್ಯಕ್ರಮಗಳು ಪ್ರದರ್ಶನಗಳು ಎಲ್ಲಾ ಹತ್ತು ದಿನವೂ ನಡೆಯಲಿದೆ. ಮೋಹಿನಿಯಾಟ್ಟಂ, ಭರತನಾಟ್ಯ, ಕೂಚಿಪುಡಿ, ತಿರುವಾತಿರಕಳಿ,ಮಂಗಳಂಕಳಿ, ಒಪ್ಪನ, ಸಿನಿಮಾ ನೃತ್ಯ, ಜಾನಪದ ನೃತ್ಯ, ಸಮೂಹ ನೃತ್ಯ, ಯೋಗ ನೃತ್ಯ, ಅಸ್ಸಾಮಿ ನೃತ್ಯ, ಯಕ್ಷಗಾನ ಮತ್ತು ರಾಜಸ್ಥಾನಿ ನೃತ್ಯ ಗಳುಕುಟುಂಬಶ್ರೀ ಸಿಡಿಎಸ್ಎಸ್ ನೇತೃತ್ವದಲ್ಲಿ ನಡೆಯಲಿದೆ ಎ೦ದು ಶಾಸಕ ಸಿ.ಎಚ್.ಕುಂಞಂಬು ವಿವರಿಸಿದರು.
ಶಾಸಕ ಲತೀಫ್, ಕೇರಳ ತುಳು ಅಕಾಡೆಮಿಯ ಅಧ್ಯಕ್ಷ ಜಯಾನ೦ದ, ಬೇಕಲ್ ರೆಸಾರ್ಟ್ಸ್ ಡೆವಲಪ್‌ಮೆಂಟ್ ಕಾರ್ಪೊರೇಷನ್ ನ ಯು.ಎನ್. ಪ್ರಸಾದ್, ಬಿಆರ್‌ಡಿಸಿಯ ವ್ಯವಸ್ಥಾಪಕ ನಿರ್ದೇಶಕ .ಪಿ.ಶಿಜಿನ್ಮತ್ತಿತರು ಉಪಸ್ಥಿತರಿದ್ದರು.