26.5 C
Karnataka
Saturday, November 23, 2024

ಮಾತೃ ಭಾಷೆಯ ಜತೆಗೆ ಇತರ ಭಾಷೆಯನ್ನೂ ಕಲಿಯುವುದು ಉತ್ತಮ : ಕುಲದೀಪ್ ಸಿಂಗ್

ಮಂಗಳೂರು,:ಹಿಂದಿ ಭಾಷೆ ಕೇವಲ ಭಾರತಕ್ಕಷ್ಟೇ ಸೀಮಿತವಾಗಿಲ್ಲ. ವಿಶ್ವ ಮಾನ್ಯಭಾಷೆಯಾಗಿದೆ. ಯಾವುದೇ ಭಾಷೆ ಕಲಿಯುತ್ತಿದ್ದೇವೆ ಎಂದಾದರೆ ಅದರ ಸಂಸ್ಕೃತಿಯನ್ನೂ ಕೂಡ ಕಲಿತಂತೆ ಆಗುತ್ತದೆ. ಆದರೆ ಮಾತೃಭಾಷೆಗೆ ಮೊದಲ ಆದ್ಯತೆ ಇರಲಿ. ಅದರ ಜೊತೆಗೆ ಹಿಂದಿ ಭಾಷೆಯನ್ನೂ ಕಲಿಯುವಲ್ಲಿ ಒಲವು ತೋರಿಸಿದರೆ ಉತ್ತಮ ಎಂದು ಎನ್. ಎಂ. ಪಿ. ಟಿ.ಯ ಹಿಂದಿ ಅಧಿಕಾರಿ ಕುಲದೀಪ್ ಸಿಂಗ್ ಹೇಳಿದರು.
ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಶಿವರಾಮ ಕಾರಂತ ಸಭಾಭವನದಲ್ಲಿ ಸ್ನಾತಕೋತ್ತರ ಹಿಂದಿ ವಿಭಾಗ, ಹಿಂದಿ ಸಂಘ, ಸ್ನಾತಕ ಹಿಂದಿ ವಿಭಾಗ ಮತ್ತು ಆಂತರಿಕ ಗುಣಮಟ್ಟ ಖಾತರಿಕೋಶ ಇದರ ಸಹಭಾಗಿತ್ವದಲ್ಲಿ ಹಿಂದಿ ದಿವಸ ಸಮಾರೋಪ ಸಮಾರಂಭ ಆಯೋಜಿಸಲಾಗಿತ್ತು.ಭಾಷಾಂತರ, ಮಾಧ್ಯಮ, ಬ್ಯಾಂಕಿಂಗ್, ಕೇಂದ್ರ ಸರ್ಕಾರದ ಅಧೀನ ಸಂಸ್ಥೆಗಳ ರಾಜ್ಯ ಭಾಷಾ
ವಿಭಾಗಳಲ್ಲಿ ಸೇರಿದಂತೆ ನಾನಾ ವಲಯಗಳಲ್ಲಿ ಹಿಂದಿ ಭಾಷೆಯಲ್ಲಿ ವಿಫಲವಾದ ಉದ್ಯೋಗಾವಕಾಶಗಳಿವೆ ಎಂದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಭಾರ ಪ್ರಾಂಶುಪಾಲೆ ಪ್ರೊ. ಲತಾ ಎ. ಪಂಡಿತ್ ಮಾತನಾಡಿ,ಹಿಂದಿ ಅತ್ಯಂತ ಸುಂದರವಾದ ಭಾಷೆ. ಇತ್ತೀಚಿನ ದಿನಗಳಲ್ಲಿ ಯುವ ಪೀಳಿಗೆಗೆ ಯಾವ ಭಾಷೆಯೂ ಸ್ಪಷ್ಟವಾಗಿ ಮಾತನಾಡಲು ಬರುವುದಿಲ್ಲ ಎಂಬುದು ಅತ್ಯಂತ ಖೇದಕರ. ಹಾಗಾಗಿ ವಿದ್ಯಾರ್ಥಿಗಳುಕನಿಷ್ಠ ಎರಡು ಭಾಷೆಗಳಲ್ಲಿ ಪ್ರಾವೀಣ್ಯತೆ ಪಡೆದುಕೊಳ್ಳುವುದು ಅಗತ್ಯ ಎಂದು ಹೇಳಿದರು.
ಹಿಂದಿ ವಿಭಾಗದ ಮುಖ್ಯಸ್ಥೆ ಡಾ. ಸುಮ ಟಿ. ಅರ್. ಪ್ರಾಸ್ತಾವಿಕವಾಗಿ ಮಾತನಾಡಿದರು. ಐ.ಕ್ಯೂ.ಎ.ಸಿ.ಸಂಯೋಜಕ ಡಾ. ಸಿದ್ದರಾಜು ಎಂ. ಎನ್., ಹಿಂದಿ ಸ್ನಾತಕೋತ್ತರ ವಿಭಾಗದ ಸಂಯೋಜಕಿ ಡಾ. ನಾಗರತ್ನ ರಾವ್, ಗ್ರಂಥಪಾಲಕಿ ಡಾ. ವನಜಾ ಸೇರಿದಂತೆ ನಾನಾ ವಿಭಾಗಗಳ ಉಪನ್ಯಾಸಕರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles