ಮ೦ಗಳೂರು:ಜಗತ್ತಿನಲ್ಲಿ ದ್ವೇಷ,ಧಮ೯ ಹಾಗೂ ಜಾತಿ ಆಧಾರಿತ ತಾರತಮ್ಯ ಮತ್ತು ಹಿ೦ಸೆ ತಾ೦ಡವಾಡುತ್ತಿರುವುದನ್ನು ದಿನನಿತ್ಯವೂ ಕಾಣುತ್ತೇವೆ. ಯುದ್ಧ, ಸಾವು ನೋವು ಹಾಗೂ ವಿನಾಶದ ದುರ್ಘಟನೆಗಳು ಪ್ರಮುಖ ವಾರ್ತೆಗಳಾಗಿ ಹೊರಹೊಮ್ಮುತ್ತಿವೆ. ಪೋಪ್ ಪ್ರಾನ್ಸಿಸ್ ಅವರ ಮಾತುಗಳಲ್ಲಿ ಹೇಳುದಾದರೆ ನಾವು ಮೂರನೇ ಜಾಗತಿಕ ಮಹಾಯುದ್ಧದಲ್ಲಿ ಸದ್ದಿಲ್ಲದೆ ಮುನ್ನಡೆಯುತ್ತಿದ್ದೇವೆ. ಹತಾಶೆ ಹಾಗೂ ಆತ್ಮಹತ್ಯೆಗಳು ಏರಿಕೆಯಾಗುತ್ತಿವೆ. ನಾವೆಲ್ಲರೂ ನಿರಾಶಾದಾಯಕ ವಿಶ್ವದೆಡೆಗೆ ಮುಖ ಮಾಡಿದಂತೆ ಭಾಸವಾಗುತ್ತದೆ .ಇಂಥಹ ಸಂಧಿಗ್ಧ ಪರಿಸ್ಥಿತಿಯಲ್ಲಿನಾವು ಜನರ ಹೃನ್ಮನಗಳನ್ನು ಉತ್ತುಂಗಕ್ಕೇರಿಸುವ ವ್ಯಕ್ತಿಗಳಾಗೋಣ. ಹತಾಶ ಜಗತ್ತಿನಲ್ಲಿ ಭರವಸೆಯನ್ನು ಬಿತ್ತೋಣ ಎ೦ದು ಮ೦ಗಳೂರು ಧಮ೯ಪ್ರಾ೦ತ್ಯದ ಬಿಷಪ್ ಡಾ.ಪೀಟರ್ ಪಾವ್ಲ್ ಸಲ್ದಾನ ಅವರು ಹೇಳಿದ್ದಾರೆ.
ನಗರದ ಬಿಷಪ್ ಹೌಸ್ ನಲ್ಲಿ ಕ್ರಿಸ್ಮಸ್ ಹಬ್ಬದ ಸ೦ದೇಶ ನೀಡಿದ ಅವರು ಕ್ರಿಸ್ಮಸ್ ಅಂದರೆ ಯೇಸು ಕ್ರಿಸ್ತರ ಹುಟ್ಟುಹಬ್ಬವನ್ನು ಆಚರಿಸುತ್ತಿರುವ ಹಬ್ಬವು. “ದೇವರು ನಮ್ಮೊಂದಿಗೆ” ಎಂಬ ಅನುಭವವನ್ನು ನಮಗೆ ನೀಡುತ್ತದೆ. ಕ್ಷಮೆ ಹಾಗೂ ಪ್ರೀತಿ ಇಲ್ಲದೆ, ಶಾಂತಿಯು ಅಸಾಧ್ಯಾವೆಂದು ತೋರಿಸುತ್ತಾ ಜಗವನ್ನು ಸರ್ವ ಜನರ ಶಾಂತಿಯ ತೋಟವನ್ನಾಗಿ ಮಾಡಬೇಕಾದರೆ, ನಾವು ನಿರ್ಲಕ್ಷ ಹಾಗೂ ನಿರಾಸೆ ತೋರಿಸದೆ ಪ್ರೀತಿ ಹಾಗೂ ಕ್ಷಮೆಯನ್ನು ಹೊಂದಿದವರಾಗಿ ಇತರರ ಜೀವನದಲ್ಲಿ ಹೊಸ ದೀಪವನ್ನು ಹಚ್ಚೋಣ. ಇವುಗಳಿಂದ ಆಂತರಿಕ ಆನಂದದ ಚಿಲುಮೆಯು ಹರಿಯಲು ಸಾಧ್ಯ. ಜೀವನದಲ್ಲಿ ನಿರಾಶರಾದವರಲ್ಲಿ ಪುನಶ್ಚೇತನ ಮೂಡಿಸಲು ಯೇಸುವು ನಮಗೆ ಕರೆ ಕೊಡುತ್ತಾರೆ. ಕೇವಲ ಒಬ್ಬರಲ್ಲದಾರೂ ಇಂಥಹ ಭರವಸೆ ಮೂಡಿಸುವುದರಲ್ಲಿ ನಾವು ಯಶ್ವಸಿಯಾದರೆ, ಅದು ದೊಡ್ಡ ಸಾಧನೆಯೇ ಸರಿ. ಎಲ್ಲರಿಗು ಕ್ರಿಸ್ಮಸ್ ಹಬ್ಬದ,ಹೊಸ ವರುಷದ ಹಾರ್ಧಿಕ ಶುಭಾಶಯಗಳು ಎ೦ದರು. ಧಮ೯ಪ್ರಾ೦ತ್ಯದ ಪ್ರಧಾನ ಧಮ೯ಗುರು ಫಾ.ಮ್ಯಾಕ್ಷಿಮ್ ನೊರೊನ್ನಾ, ಪಿಆರ್ ಒ ಫಾ.ಜೆ.ಬಿ. ಸಲ್ದಾನ, ರಾಯ್ ಕ್ಯಾಸ್ತಲಿನೊ, ಡಾ.ಜಾನ್ ಡಿಸಿಲ್ವ, ಫಾ. ರೂಪೇಶ್ ಫೋರ್ ವಿ೦ಡ್ಸ್ ಜಾಹೀರಾತು ಸ೦ಸ್ಥೆಯ ಮುಖ್ಯಸ್ಥರಾದ ಎಲಿಯಾಸ್ ಫೆನಾ೯೦ಡೀಸ್, ಉಪಸ್ಥಿತರಿದ್ದರು.