ಮ೦ಗಳೂರು: ದಕ್ಷಿಣ ಕನ್ನಡ ಉಡುಪಿ, ಜಿಲ್ಲೆ ಹಾಗೂ ಬೆಂಗಳೂರು ಸೇರಿದಂತೆ ಒಟ್ಟು 33 ಘಟಕಗಳನ್ನು ಹೊಂದಿರುವ ಬಿಲ್ಲವ ಸಮಾಜದ ಬಲಿಷ್ಠ ಯುವ ಸಂಘಟನೆ ಯುವವಾಹಿನಿ(ರಿ) ಕೇಂದ್ರ ಸಮಿತಿಯ 36 ನೇ ವಾರ್ಷಿಕ ಸಮಾವೇಶ ಬಂಟ್ವಾಳ ತಾಲೂಕಿನ ಬೆಂಜನಪದವು ಶುಭಲಕ್ಷ್ಮೀ ಸಭಾಂಗಣದಲ್ಲಿ ಡಿ. 24 ರಂದು ಬೆಳಗ್ಗೆ9.30 ರಿಂದ ನಡೆಯಲಿದೆ
ಕುದ್ರೋಳಿ ಗೋಕರ್ಣನಾಥ ಕ್ಷೇತ್ರದ ಕೋಶಾಧಿಕಾರಿ, ಗುರುಬೆಳದಿಂಗಳು ಫೌಂಡೇಶನ್ ಅಧ್ಯಕ್ಷ ಪದ್ಮರಾಜ್ ಆರ್ ಸಮಾವೇಶ ಉದ್ಘಾಟಿಸಲಿದ್ದಾರೆ.ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷರಾದ ರಾಜೇಶ್ ಬಿ ಸಮಾರಂಭದ ಅಧ್ಯಕ್ಷತೆಯನ್ನು ವಹಿಸಲಿದ್ದಾರೆ.ರಾಣಿ ಅಬ್ಬಕ್ಕ ತುಳು ಅಧ್ಯಯನ ಕೇಂದ್ರದ ಅಧ್ಯಕ್ಷ ಡಾ.ತುಕರಾಮ ಪೂಜಾರಿ ಪ್ರಧಾನ ಭಾಷಣಲಿದ್ದಾರೆ.ಅಸಿಸ್ಟೆಂಟ್ ಕಮಿಷನರ್ ಅಫ್ ಪೋಲಿಸ್ ರೀನಾ ಸುವರ್ಣ, ಮುಖ್ಯಮಂತ್ರಿಗಳ ಮಾಜಿ ಆಪ್ತ ಸಹಾಯಕ ನಿರ್ಮಲ್ ಜಗನ್ನಾಥ ಬಂಗೇರ, ಉದ್ಯಮಿಗಳಾದ ನಟೇಶ್ ಪೂಜಾರಿ ಬೆಂಗಳೂರು, ಲೋಕೇಶ್ ಪೂಜಾರಿ ಕಲ್ಲಡ್ಕ ಮುಖ್ಯ ಅತಿಥಿಗಳಾಗಿ ಭಾಗವಹಿಸಲಿದ್ದಾರೆನಾರ್ದನ್ ಸ್ಕೈ ಪ್ರಾಪರ್ಟೀಸ್ ನಿರ್ದೇಶಕರಾದ ಕೃತಿನ್ ಅಮೀನ್ ಯುವಸಿಂಚನ ವಾರ್ಷಿಕ ವಿಶೇಷಾಂಕ ಬಿಡುಗಡೆಗೊಳಿಸಲಿದ್ದಾರೆ.ಯುವವಾಹಿನಿ ಕೇಂದ್ರ ಸಮಿತಿಯ ನೂತನ ಕಾರ್ಯಕಾರಿ ಸಮಿತಿಯ ಪದಗ್ರಹಣ ನಡೆಯಲಿದೆ.
ಕೆ.ಚಿತ್ತರಂಜನ್ ಗರೋಡಿ ಇವರಿಗೆ ಯುವವಾಹಿನಿ ಸಾಧನಾ ಶ್ರೀ ಪ್ರಶಸ್ತಿ, ಸಜಿಪ ಮುನ್ನೂರು ಮೂರ್ತೆದಾರರ ಸೇವಾ ಸಹಕಾರಿ ಸಂಘಕ್ಕೆ ಯುವವಾಹಿನಿ ಸಾಧನಾ ಶ್ರೇಷ್ಠ ಪ್ರಶಸ್ತಿ ಪ್ರದಾನ ಮಾಡಲಾಗುವುದು ಎ೦ದು ಪ್ರಕಟನೆ ತಿಳಿಸಿದೆ.