ಇರಾ: ಯುವಕ ಮಂಡಲ ಇರಾ ಇದರ ಸುವರ್ಣ ಮಹೋತ್ಸವ ಕಾರ್ಯಕ್ರಮ ಡಿ.23 ಹಾಗೂ ಡಿ.24ರಂದು ಇರಾ ಯುವಕ ಮಂಡಲದ ಬಯಲು ರಂಗಮಂದಿರದಲ್ಲಿ ನಡೆಯಲಿದೆ.
ಬೆಳಗ್ಗೆ 10ರಿಂದ ಶ್ರೀ ವಿನಾಯಕ ಶಂಕರನಾರಾಯಣ ದುರ್ಗಾಂಬಾ ಭಜನಾ ಮಂಡಳಿ ನಂದಾವರ ಇವರಿಂದ ಭಜನಾ ಸಂಕೀರ್ತನೆ, ಇರಾ ಶಾಲೆಗೆ ಕೊಡುಗೆಯಾಗಿ ನೀಡಿದ ನೂತನ ಪ್ರವೇಶದ್ವಾರದ ಉದ್ಘಾಟನೆ-ಸಭಾ ಕಾರ್ಯಕ್ರಮ, ಮಧ್ಯಾಹ್ನ 1ರಿಂದ ಸಂತೋಷ್ ಶೆಟ್ಟಿ ಹಳೆಮನೆ ಮತ್ತು ತಂಡದವರಿಂದ ಸಂಗೀತ ರಸಮಂಜರಿ, 3ರಿಂದ ಕುದ್ರೋಳಿ ಗಣೇಶ್ ತಂಡದಿಂದ ಜಾದೂ ಪ್ರದರ್ಶನ, ಸಂಜೆ 5ರಿಂದ ನಿತಿನ್ ಕುಂಡಡ್ಕ ತಂಡದಿಂದ ಸ್ಯಾಕೋ್ರೆನ್ ವಾದನ, 5.30ರಿಂದ ಸಭಾ ಕಾರ್ಯಕ್ರಮ, ಸಾಧಕರಿಗೆ ಗೌರವಾರ್ಪಣೆ, ಪ್ರತಿಭಾ ಪುರಸ್ಕಾರ ನಡೆಯಲಿದೆ. ರಾತ್ರಿ 7.30ರಿಂದ ಆಳ್ವಾಸ್ ಸಾಂಸ್ಕೃತಿಕ ವೈಭವ, 9ರಿಂದ ಯುವಕ ಮಂಡಲದ ಸದಸ್ಯರಿಂದ ತುಳು ಸಾಮಾಜಿಕ ನಾಟಕ ‘ಬಯ್ಯಮಲ್ಲಿಗೆ’ ಪ್ರದರ್ಶನವಾಗಲಿದೆ.
ಡಿ.24ರಿಂದ ಬೆಳಗ್ಗೆ 10ರಿಂದ ಸಾನಿಧ್ಯ ವಿಶೇಷ ಸಾಮರ್ಥ್ಯ ಶಾಲೆಯ ವಿದ್ಯಾರ್ಥಿಗಳಿಂದ ಭಕ್ತಿಪ್ರಧಾನ ನಾಟಕ ‘ಕಲ್ಲುರ್ಟಿ ಕಲ್ಕುಡ’, 11ರಿಂದ ಜಿಲ್ಲೆಯ ಪ್ರಸಿದ್ದ ಕಲಾವಿದರಿಂದ ಯಕ್ಷಗಾನ ‘ಶಶಿಪ್ರಭಾ ಪರಿಣಯ’, 3ರಿಂದ ಮುಸ್ಲಿಂ ಬಾಂಧವರಿಂದ ದ್ ಕಾರ್ಯಕ್ರಮ, ಸಂಜೆ 4.30ರಿಂದ ಇರಾ ಶ್ರೀ ಸೋಮನಾಥೇಶ್ವರ ದೇವಸ್ಥಾನದ ವಠಾರದಿಂದ ಯುವಕ ಮಂಡಲದ ವಠಾರದವರೆಗೆ ಭವ್ಯ ಮೆರವಣಿಗೆ, 5.30 ರಿಂದ ಸಮಾರೋಪ-ಸಮ್ಮಾನ ಕಾರ್ಯಕ್ರಮ, ರಾತ್ರಿ 9ರಿಂದ ಯುವಕ ಮಂಡಲದ ಸದಸ್ಯರಿಂದ ಸಾಂಸ್ಕೃತಿಕ ಕಾರ್ಯಕ್ರಮ ಹಾಗೂ 9.30ರಿಂದ ಲಕುಮಿ ತಂಡದ ಕುಸಾಲ್ದ ಕಲಾವಿದೆರ್ ತಂಡದಿಂದ ‘ಮಗಲ್’ ನಾಟಕ ಪ್ರದರ್ಶನವಾಗಲಿದೆ ಎಂದು ಪ್ರಕಟನೆ ತಿಳಿಸಿದೆ.