ಮಂಗಳೂರು : ಮಂಗಳೂರಿನ ಲೂರ್ಡ್ಸ್ ಸೆಂಟ್ರಲ್ ಸ್ಕೂಲ್‌ನ 8ನೇ ತರಗತಿಯ ವಿದ್ಯಾರ್ಥಿ, ಬಾಲನಟತನ್ಮಯ್‌ಆರ್. ಶೆಟ್ಟಿಅವರುಕರ್ನಾಟಕರಾಜ್ಯೋತ್ಸವ ಬಾಲ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ತನ್ಮಯ್‌ಆರ್. ಶೆಟ್ಟಿ ಸಿನಿಮಾಕ್ಷೇತ್ರದಲ್ಲಿ ಬಾಲ ನಟನಾಗಿ ಮಾಡಿದ ಸಾಧನೆಗಾಗಿ ಈ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ತನ್ಮಯ್ ಶೆಟ್ಟಿಅವರು ಮಗನೇ ಮಹಿಷ (ತುಳು), ಅಪರಾಧಿ ನಾನಲ್ಲ (ತುಳು), ಅಬತರ (ತುಳು), ಬನ್-ಟೀ (ಕನ್ನಡ), ಕರಿ ಹೈದಕರಿಅಜ್ಜ (ಕನ್ನಡ, ತುಳು, ಮಲಯಾಳಂ), ಸ್ಕೂಲ್ ಲೀಡರ್ (ಕನ್ನಡ) ಸೇರಿದಂತೆ ನಾನಾ ಸಿನಿಮಾಗಳಲ್ಲಿ ನಟಿಸಿ ಗಮನ ಸೆಳೆದಿದ್ದಾನೆ. ಬನ್-ಟೀ ಎಂಬ ಸಿನಿಮಾದಲ್ಲಿ ಲೀಡ್‌ರೋಲ್‌ನಲ್ಲಿ ಕಾಣಿಸಿಕೊಂಡು, ಪ್ರೇಕ್ಷಕರ ಗಮನ ಸೆಳೆಯುವ ಮೂಲಕ ತನ್ನ ನಟನಾ ಸಾಮರ್ಥ್ಯವನ್ನು ಸಾಬೀತು ಪಡಿಸಿದ್ದಾನೆ. ದೇವ್‌ದಾಸ್ ಕಾಪಿಕ್ಕಾಡ್‌ಅವರ ಪುದರ್ ದೀತಿಜಿ ನಾಟದಲ್ಲಿಯೂ ನಟಿಸಿ, ರಂಗ ಭೂಮಿಯಲ್ಲೂ ಸೈ ಅನಿಸಿಕೊಂಡಿದ್ದಾನೆ. ಜತೆಗೆಯಕ್ಷಗಾನ, ಚೆಸ್, ಸ್ಕೇಟಿಂಗ್, ಸ್ವಿಮ್ಮಿಂಗ್, ಚಿತ್ರಕಲೆ ಇತ್ಯಾದಿಗಳಲ್ಲೂ ತನ್ನನ್ನು ತೊಡಗಿಸಿಕೊಂಡಿದ್ದು, ಬಹುಮುಖ ಪ್ರತಿಭೆಯಾಗಿ ಗುರುತಿಸಿಕೊಂಡಿದ್ದಾನೆ. ಇದೀಗ ಈತನ ಸರ್ವತೋಮುಖ ಸಾಧನೆಯನ್ನು ಗುರುತಿಸಿ ಕರ್ನಾಟಕರಾಜ್ಯೋತ್ಸವ ಬಾಲ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.
ಮಂಗಳೂರಿನ ಇನ್ವೆಂಜರ್ ಫೌಂಡೇಶನ್, ಕಟಪಾಡಿ ಪ್ರಥಮ್ ಮ್ಯಾಜಿಕ್ ವರ್ಲ್ಡ್ ಸಂಯುಕ್ತಆಶ್ರಯದಲ್ಲಿಕನ್ನಡ ಮತ್ತು ಸಂಸ್ಕೃತಿ ಇಲಾಖೆ ಉಡುಪಿ ಜಿಲ್ಲೆ ಸಹಯೋಗದಲ್ಲಿಕರ್ನಾಟಕ ಸುವರ್ಣ ಮಹೋತ್ಸವದ ಅಂಗವಾಗಿ ನಡೆಯುವರಾಜ್ಯೋತ್ಸವ ಬಾಲ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಿಗೌರವಿಸಲಾಗುತ್ತದೆ.