21.4 C
Karnataka
Tuesday, December 3, 2024

ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿದ್ದ ವ್ಯಕ್ತಿಯ ಬಂಧನ

ಮಂಗಳೂರು: ಅಂಗಡಿಯಲ್ಲಿ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ವ್ಯಕ್ತಿಯನ್ನುಬಜಪೆ ಪೊಲೀಸರು ಬ೦ಧಿಸಿದ್ದಾರೆ.ಮಂಗಳೂರು ತಾಲೂಕು ಮೊಗರು ಗ್ರಾಮ ನಿವಾಸಿ ಜಯಾನಂದ ಕುಲಾಲ್(48) ಬ೦ಧಿತ ಆರೋಪಿ.ಟೆಟ್ರಾ ಪ್ಯಾಕೇಟ್ ಗಳನ್ನು ಮತ್ತು ಮದ್ಯ ಮಾರಾಟ ಮಾಡಿ 550 ರೂಪಾಯಿ ಹಣವನ್ನು ಸ್ವಾಧೀನಪಡಿಸಿಕೊಳ್ಳಲಾಗಿದೆ.
ಬಜಪೆ ಪೊಲೀಸ್ ಠಾಣೆಯ PSI ಕುಮಾರೇಶನ್ ರವರುದಿನಾಂಕ 27-12-2023 ರಂದು ಸ೦ಜೆ 5-45 ಗಂಟೆಗೆ ರೌಂಡ್ಸ್ ಮಾಡುತ್ತಾ ಮಂಗಳೂರು ತಾಲೂಕು ಮೊಗರು ಗ್ರಾಮದ ತಾರೆಮಾರ್ ಎಂಬಲ್ಲಿ ಗಂಜಿಮಠ ಕಡೆಯಿಂದ ಮುತ್ತೂರು ಕಡೆಗೆ ಹಾದು ಹೋಗಿರುವ ರಸ್ತೆಯ ಬದಿಯಲ್ಲಿರುವ ಜಯಾನಂದ ಕುಲಾಲ್ ರವರ ಅಂಗಡಿಯ ಬಳಿ ಬಂದಾಗ ಸಮವಸ್ತ್ರದಲ್ಲಿದ್ದ PSI ರವರನ್ನು ನೋಡಿ ಅಂಗಡಿಯ ಬಳಿಯಿದ್ದ ಗಿರಾಕಿಗಳು ಓಡಿ ಹೋಗಿದ್ದರು. ಅನುಮಾನಗೊಂಡ ಪಿ.ಎಸ್.ಐ ರವರು ಜಯಾನಂದ್ ಕುಲಾಲ್ ರವರ ಅಂಗಡಿಯ ಒಳಗಡೆ ಹೋಗಿ ನೋಡಿದಾಗ ಶೋಕೇಸ್ ನ ಅಡಿಯಲ್ಲಿ ಒಂದು ಪ್ಲಾಸ್ಟಿಕ್ ಕವರಿನಲ್ಲಿ 90 ML ನ ಒಟ್ಟು 24 ಮದ್ಯದ ಟೆಟ್ರಾ ಪ್ಯಾಕೇಟ್ ಗಳಿರುವುದು ಕಂಡು ಬಂದಿರುತ್ತದೆ. ಮದ್ಯ ಮಾರಾಟದ ಬಗ್ಗೆ ಕೇಳಿದಾಗ ಪರವಾಣಿಗೆ ಇಲ್ಲ ಎಂದು ತಿಳಿಸಿರುತ್ತಾರೆ. ಅದರಂತೆ ಪಿ.ಎಸ್.ಐ ರವರು ಪರವಾಣಿಗೆ ಇಲ್ಲದೆ ಅಕ್ರಮವಾಗಿ ಮದ್ಯವನ್ನು ಮಾರಾಟ ಮಾಡುತ್ತಿದ್ದ ಜಯಾನಂದ ಕುಲಾಲ್ ರವರನ್ನು ದಸ್ತಗಿರಿ ಮಾಡಿ, 24 ಮದ್ಯದ ಟೆಟ್ರಾ ಪ್ಯಾಕೇಟ್ ಗಳನ್ನು ಮತ್ತು ಮದ್ಯ ಮಾರಾಟ ಮಾಡಿ 550 ರೂಪಾಯಿ ಹಣವನ್ನು ಸ್ವಾಧೀನಪಡಿಸಿಕೊಂಡು ಆರೋಪಿ ವಿರುದ್ದ ಕಾನೂನು ಕ್ರಮ ಜರುಗಿಸಿದ್ದಾರೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles