21.4 C
Karnataka
Tuesday, December 3, 2024

ಕೆರೆಕಟ್ಟೆ ಹನುಮಂತ ದೇವಸ್ಥಾನದ ಅಭಿವೃದ್ಧಿಯ ಕಾಮಗಾರಿಗೆ ಭೂಮಿ ಪೂಜೆ

ಮಂಗಳೂರು: ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಯ 41ನೇ ಸೆಂಟ್ರಲ್ ವಾರ್ಡಿನ ಜೋಡುಮಠ ರಸ್ತೆಯಲ್ಲಿರುವ ಕೆರೆಕಟ್ಟೆ ಹನುಮಂತ ದೇವಸ್ಥಾನದ ಅಭಿವೃದ್ಧಿಯ ಕಾಮಗಾರಿಗಾಗಿ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯರ ಮನವಿ ಮೇರೆಗೆ ಮಂಗಳೂರು ನಗರ ದಕ್ಷಿಣ ಕ್ಷೇತ್ರದ ಜನಪ್ರಿಯ ಶಾಸಕರಾದ ಶ್ರೀ ಡಿ.ವೇದವ್ಯಾಸ್ ಕಾಮತ್ ಅವರು ವಿಶೇಷ ಅನುದಾನ ಒದಗಿಸಿದ್ದು ಇದರ ಭೂಮಿ ಪೂಜೆಯು ದೇವಸ್ಥಾನದ ಆವರಣದಲ್ಲಿ ನಡೆಯಿತು.

ಇದೇ ವೇಳೆ ದೇವಸ್ಥಾನದ ಅಭಿವೃದ್ಧಿಗೆ ವಿಶೇಷ ಅನುದಾನ ಒದಗಿಸಿದ ಶಾಸಕರಿಗೆ ಹಾಗೂ ಸಹಕರಿಸಿದ ಸ್ಥಳೀಯ ಮಹಾನಗರ ಪಾಲಿಕೆ ಸದಸ್ಯೆ ಪೂರ್ಣಿಮಾ ಅವರಿಗೆ ಆಡಳಿತ ಮಂಡಳಿಯವರು ಧನ್ಯವಾದಗಳನ್ನು ಸಲ್ಲಿಸಿದರು.
ಮೇಯರ್ ಸುದೀರ್ ಶೆಟ್ಟಿ ಕಣ್ಣೂರು, ಸ್ಥಳೀಯ ಮ.ನ.ಪಾ ಸದಸ್ಯೆಪೂರ್ಣಿಮಾ, ಮಂಡಲದ ಉಪಾಧ್ಯಕ್ಷ ರಮೇಶ್ ಹೆಗ್ಡೆ, ಶಕ್ತಿಕೇಂದ್ರ ಅಧ್ಯಕ್ಷ ಮುರಳಿಧರ್ ನಾಯಕ್, ಪಕ್ಷದ ಪ್ರಮುಖರಾದ ನಾರಾಯಣಗಟ್ಟಿ, ಮೋಹನ್ ಪೂಜಾರಿ, ಉರ್ವ ಮಹಾಗಣಪತಿ ದೇವಸ್ಥಾನದ ಅಧ್ಯಕ್ಷ ಸುರೇಂದ್ರ ರಾವ್, ಸ್ಥಳೀಯರಾದ ರಾಜ ಹೊಳ್ಳ, ವಿನೋದ್ ಶೇಟ್, ದೇವಸ್ಥಾನದ ಅರ್ಚಕರು, ಆಡಳಿತ ಮಂಡಳಿಯವರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles