ಮ೦ಗಳೂರು: ಆನ್ಲೈನ್ ಪಾಟ್‌೯ ಟೈಮ್ ಜಾಬ್ ನೀಡುವುದಾಗಿ ನ೦ಬಿಸಿ 16 ಲಕ್ಷ ರೂ.ವ೦ಚನೆ ಮಾಡಿರುವ ಬಗ್ಗೆ ಮ೦ಗಳೂರು ಸಿಇಎನ್ ಅಪರಾಧ ಪೊಲೀಸು ಠಾಣೆಯಲ್ಲಿ ದೂರು ದಾಖಲಾಗಿದೆ.
ದೂರುದಾರರು ಪುತ್ತೂರಿನಲ್ಲಿರುವ ಸಹಕಾರಿ ಸಂಘವೊ೦ದರಲ್ಲಿ ಶಾಖಾಧಿಕಾರಿಯಾಗಿ ಆಗಿ ಕೆಲಸ ಮಾಡುತ್ತಿದ್ದು, ದಿನಾಂಕ:8-11-2023 ರಂದು Telegram ನಲ್ಲಿ DABS INDIA ಎಂಬವರು ಪಾಟ್‌೯ ಟೈಮ್ ಜಾಬ್‌ನೀಡುವುದಾಗಿ ಹೇಳಿ ಅ೦ಕಿತಾ ಶಮಾ೯ ಎ೦ಬವರು ಸ೦ಪಕಿ೯ಸುತ್ತಾರೆ ಎಂದು ಹೇಳಿದ್ದರು. ಅದರಂತೆ ಅ೦ಕಿತಾ ಶಮಾ೯ರವರ ಟೆಲಿಗ್ರಾಂ ನಿಂದ ಸಂಪರ್ಕ ಮಾಡಿ ಪಾಟ್‌೯ ಟೈಮ್ ಜಾಬ್ ಕೊಡುವುದಾಗಿ ಲಿಂಕ್ ಕಳುಹಿಸಿ ಸದ್ರಿ ಲಿಂಕ್ನಲ್ಲಿ ಆನ್ಲೈನ್ ಐಡಿಯನ್ನು ನೀಡಿದ್ದರು. . ಅದರಂತೆ ಟಾಸ್ಕ್ ಮಾಹಿತಿ ನೀಡುತ್ತಿದ್ದರು. ವಿಮಾನ ಟಿಕೇಟು ಬುಕ್ ಮಾಡುವ ಟಾಸ್ಕ್ನ Demo ಮಾಡಿಸಿ 900 ರೂ.ನ್ನು ದೂರುದಾರರ ಬ್ಯಾಂಕ್ ಖಾತೆಗೆ ಹಾಕಿರುತ್ತಾರೆ. ದಿನಾಂಕ: 5-12-2023 ರಂದು 8,000 ರೂ. ಹಣ ಹಾಕಿ ಟಿಕೇಟು ಬುಕ್ ಮಾಡುವ ಟಾಸ್ಕ್ನ ಮಾಡಿದ್ದಕ್ಕೆ 14,062ರೂ. ಮತ್ತು ದಿನಾಂಕ:6-12-2023 ರಂದು 11,000/- ಹಾಕಿದಾಗ enquiry Flight Booking Task ಗಾಗಿ 12,630ರೂ. ಹಣ ಹಾಕಲು ತಿಳಿಸಿದ್ದರು. . ದೂರುದಾರರು ಪಾವತಿಸಿದ್ದಕ್ಕೆ ಅವರ ಬ್ಯಾಂಕ್ ಖಾತೆಗೆ 31,644ರೂ. ಹಣ ಕಳುಹಿಸಿರುತ್ತಾರೆ. ನಂತರ ಅವರು 90 ವಿಮಾನ ಟಿಕೇಟು ಬುಕ್ ಮಾಡುವ ಸಲುವಾಗಿ ಹಣ ಪಾವತಿಸುವಂತೆ ತಿಳಿಸಿದ್ದಕ್ಕೆ ದೂರುದಾರರು ತನ್ನ ಬ್ಯಾಂಕ್ ಖಾತೆಗಳಿಂದ ಹಂತಹಂತವಾಗಿ ಅಪರಿಚಿತ ವ್ಯಕ್ತಿಗಳು ಕಳುಹಿಸಿದ ಐದು ಬ್ಯಾಂಕ್ ಖಾತೆಗಳಿಗೆ ಒಟ್ಟು 16,11,239.80ರೂ.ಹಣ ಕಳುಹಿಸಿದ್ದರು. ಈ ರೀತಿಯಾಗಿ Telegram ನಲ್ಲಿ ಪರಿಚಯವಾಗಿ ಆನ್ಲೈನ್ ಪಾಟ್‌೯ ಟೈಮ್ ಜಾಬ್ ನೀಡುವುದಾಗಿ ಹೇಳಿ 16,11,239.80ರೂ. ಹಣ ಪಡೆದು ವಂಚಿಸಿದ್ದಾರೆ ಎ೦ದು ದೂರಿನಲ್ಲಿ ತಿಳಿಸಲಾಗಿದೆ.