22.2 C
Karnataka
Thursday, November 21, 2024

ವಿಶ್ವ ಮಾನವ ಸಂದೇಶ ನೀಡಿದ ಮಹಾನ್ ಚೇತನ ಕುವೆಂಪು

ಮಂಗಳೂರು: ವಿಶ್ವ ಮಾನವರಾಗಲು ವಿದ್ಯೆಯ ಕೇಂದ್ರೀಕರಣ ಮಾತ್ರವಲ್ಲ ಸಮಗ್ರವಾದ ಜ್ಞಾನವನ್ನು ಗ್ರಹಿಸುವುದು ಮುಖ್ಯ ಎಂದು ಕಾಸರಗೋಡು ಪೆರಿಯ ಕೇರಳ ಕೇಂದ್ರೀಯ ವಿಶ್ವವಿದ್ಯಾನಿಲಯದ ಸಹಾಯಕ ಪ್ರಾಧ್ಯಾಪಕ ಪ್ರೋ.ಚೇತನ್ ಮುಂಡಾಜೆ ಹೇಳಿದರು.
ಅವರು ಶುಕ್ರವಾರ ನಗರದ ರಥಬೀದಿಯ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ವಿಶ್ವ ಮಾನವ ದಿನಾಚರಣೆಯನ್ನು ಉದ್ಘಾಟಿಸಿ ಮಾತನಾಡಿದರು.ಕುವೆಂಪು ಅವರು ಕವಿತೆ, ವೈಚಾರಿಕ ಕಾದಂಬರಿ, ಮಹಾಕಾವ್ಯದಲ್ಲಿ ಸ್ಥಾಪಿತವಾದ ಚಿಂತನೆಗೆ ಹೊಸ ರೂಪವನ್ನು ನೀಡಿದರು. ಕೃಷಿ ಸದೃಶವಾದ ಬರವಣಿಗೆಯಲ್ಲಿ ಕುವೆಂಪು ಅನ್ನು ರಸ ಋಷಿ ಕವಿ ಎಂದು ಕರೆಯಲಾಗುತ್ತದೆ. ಕುವೆಂಪು ಅವರು ಮಾನವ ಕುಲಕ್ಕೆ ನೀಡಿದ ಮಾರ್ಗದರ್ಶನ ಸಾರ್ವಕಾಲಿಕವಾಗಿದೆ ಎಂದು ಹೇಳಿದರು.
ನಾವು ವಿಶಾಲ ಮನಸ್ಸಿನವರಾಗಬೇಕು. ತಮ್ಮ ಬದುಕಿನಲ್ಲಿ ಕುವೆಂಪು ಅವರ ಜೀವನ ಚರಿತ್ರೆ ಆದರ್ಶನಗಳನ್ನು ನಾವು ಪ್ರೇರಣೆಯಾಗಿ ತೆಗೆದುಕೊಳ್ಳಬೇಕು. ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ಶಿವಮೊಗ್ಗದ ಸೂಕ್ಷ್ಮ ಚಿತ್ರಣವನ್ನು ಚಿತ್ರಸಿದ್ದಾರೆ. ಸಾಹಿತ್ಯದ ಮೂಲಕ ಮನಸ್ಸು ಗೆಲ್ಲುವ ಕೆಲಸ ಮಾಡಿದ್ದಾರೆ. ಸಾಹಿತ್ಯದ ಓದುವಿಕೆ ಮನಸ್ಸನ್ನು ಬೆಳೆಸುತ್ತದೆ ವೈಚಾರಿಕ ಲೇಖನಗಳ ವಿಷಯ ನಮ್ಮ ಚಿಂತನಾ ಶೀಲತೆಯನ್ನು ಬೆಳೆಸುತ್ತದೆ ಎಂದು ರಥಬೀದಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಭಾರತಿ ಭಾಯಿ.ಕೆ ಹೇಳಿದರು
.ವೇದಿಕೆಯಲ್ಲಿ ಮಂಗಳೂರು ತಹಶೀಲ್ದಾರ್ ಪ್ರಶಾಂತ್ ಪಾಟೀಲ್, ರಥಬೀದಿಯ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲರಾದ ಭಾರತಿ ಭಾಯಿ. ಕೆ ಉಪಸ್ಥಿತರಿದ್ದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಮತ್ತು ಉಪನ್ಯಾಸಕರು ಭಾಗವಹಿಸಿದ್ದರು. ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಾಯಕ ನಿರ್ದೇಶಕ ರಾಜೇಶ್. ಜಿ ಸ್ವಾಗತಿಸಿದರು. ಪ್ರದೀಪ್. ಡಿ. ಹಾವಂಜೆ ನಿರೂಪಿಸಿದರು.ಕಾರ್ಯಕ್ರಮದ ನಂತರ ಸಂಸ್ಕೃತಿಕ ಕಾರ್ಯಕ್ರಮ ನಡೆಯಿತು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles