26.6 C
Karnataka
Thursday, November 21, 2024

‘‘ಬಂಧುತ್ವ’’ ಸರಕಾರದ ಕಾರ್ಯಕ್ರಮವಾಗಲಿ: ಸ್ಪೀಕರ್ ಯು.ಟಿ. ಖಾದರ್

ಮಂಗಳೂರು:‘‘ಬಿಷಪರ ಕ್ರಿಸಮಸ್ ‘‘ಬಂಧುತ್ವ’’ ಕಾರ್ಯಕ್ರಮವು ನಾಡಿನ ಶಾಂತಿ-ಏಕತೆಗೆ ಪ್ರೋತ್ಸಾಹ. ಅದು ನಮ್ಮೋಳಗೆ ಬಲವಾದ ಬಾಂಧವ್ಯವನ್ನು ಬೆಳೆಸುವಲ್ಲಿ ಸಹಕಾರಿಯಾಗಿದೆ ಮತ್ತು ಸಮುದಾಯದ ಶಕ್ತಿಯ ಆಧಾರಸ್ತಂಭವಾಗಿದೆ .ಇಂತಹ ಬಂಧುತ್ವ ಕಾರ್ಯಕ್ರಮವನ್ನು ಜಿಲ್ಲೆಯಾದ್ಯಂತ ಆಚರಿಸಬೇಕು ಮತ್ತು ಸಮುದಾಯದ ಬಾಂಧವ್ಯವನ್ನು ಬಲವಾಗಿ ಬೆಳೆಸಲು ಪ್ರತಿ ಗ್ರಾಮ ಪಂಚಾಯತಿಯ ಮಟ್ಟಕ್ಕೆ ವಿಸ್ತರಿಸಬೇಕು. ಬಂಧುತ್ವವು ಸರ್ಕಾರಿ ಕಾರ್ಯಕ್ರಮವಾಗಿ ಹೊರಹೊಮ್ಮಬೇಕೆಂದು ಕರ್ನಾಟಕ ವಿಧಾನಸಭೆಯ ಸ್ಪೀಕರ್ ಯು.ಟಿ.ಖಾದರ್‌ ಅವರು ಹೇಳಿದರು.
ಮಂಗಳೂರು ಧರ್ಮಕ್ಷೇತ್ರದ ಬಿಷಪ್ ಆತೀ ವಂದನೀಯ ಡಾ.ಪೀಟರ್ ಪಾವ್ಲ್‌ ಸಲ್ಡಾನ್ಹಾ ಅವರ ನೇತೃತ್ವದಲ್ಲಿ ಡಿಸೆಂಬರ್ 30 ರಂದು ನಗರದ ಕೊಡಿಯಾಲ್‌ಬೈಲ್‌ಬಿಷಪ್ ಹೌಸ್‌ನಲ್ಲಿ ಆಯೋಜಿಸಿದ‘‘ಬಂಧುತ್ವ’’ ಕ್ರಿಸ್‌ಮಸ್ ಆಚರಣೆಯಲ್ಲಿ ಮಾತನಾಡಿದ ಅವರು. ‘‘ಸಮಾಜಕ್ಕೆ ಕ್ರಿಶ್ಚಿಯನ್ ಸಮುದಾಯದ ಕೊಡುಗೆ ಅಪಾರವಾಗಿದೆ ಎಂದು ಶ್ಲಾಘಿಸಿದರು
ಬಿಷಪ್ ಪೀಟರ್ ಪಾವ್ಲ್‌ ತಮ್ಮ ಸ್ವಾಗತ ಭಾಷಣದಲ್ಲಿ ಮಾತನಾಡುತ್ತಾ ಸಂಘರ್ಷದಿಂದ ನಲುಗಿರುವ ಜಗತ್ತಿನಲ್ಲಿ, ಯೇಸುವಿನ ಜನನವು ಶಾಂತಿಗೆ ನಾಂದಿ ಹಾಡಿತು, ಅವರ ಜೀವನ, ಬೋಧನೆಗಳು ಮತ್ತು ಅವರು ಬಿಟ್ಟುಹೋದ ಕ್ಷಮೆಯ ಪರಂಪರೆ ಶಾಂತಿಯ ಸಾರವಾಗಿದೆ. ಯೇಸುವಿನಿಂದ ಪ್ರೇರಿತಗೋಂಡ ಮಹಾತ್ಮ ಗಾಂಧಿಯವರು ಕ್ಷಮೆ ಮತ್ತು ಶಾಂತಿಯ ಜೀವನವನ್ನು ನಡೆಸಿದರು. ನಮ್ಮ ಹೃದಯದಿಂದ ಕ್ಷಮೆಯು ಹೊರಹೊಮ್ಮಿದಾಗ, ನಾವು ಶಾಂತಿಯ ದೂತರಾಗುತ್ತೇವೆ,’’ ಎಂದು ಹೇಳಿದರು.
ಜಿಲ್ಲಾಧಿಕಾರಿ ಮುಲ್ಲೈ ಮುಹಿಲನ್‌ ,ಪೊಲೀಸ್ ಕಮಿಷನರ್‌ ಅನುಪಮ್ ಅಗರ್ವಾಲ್,ಕಸ್ಟಮ್ಸ್‌ ಕಮಿಷನರ್‌ ವಿನಿತಾಶೇಖರ್, ಕಮಿಷನರ್ ಆಫ್ ಸೆಂಟ್ರಲ್ ಟ್ಯಾಕ್ಸ್‌-(ಜಿಎಸ್‌ಟಿ) ಕೇಶವ ನಾರಾಯಣ ರೆಡ್ಡಿ, ಆದಾಯ ತೆರಿಗೆಯ ಆಯುಕ್ತ ಎಸ್ ರಂಗರಾಜನ್, ಮತ್ತು ರಾಮಕೃಷ್ಣ ಮಿಷನ್ನ ರಘುರಾಮಾನಂದ ಅವರು ಅತಿಥಿಗಳಾಗಿದ್ದರು.
ಸಿಎಸ್‌ಐ ಚರ್ಚಿನ ಬಿಷಪ್ ಅತೀ ವಂದನೀಯ ಹೇಮಚಂದ್ರ ಕುಮಾರ್ ಅವರು ಪ್ರಾರ್ಥನೆಯೊಂದಿಗೆ ಸಂಭ್ರಮಾಚರಣೆಗೆ ಚಾಲನೆ ನೀಡಿದರು. ಗಣ್ಯರು ಕ್ರಿಸ್‌ಮಸ್ಆ ಚರಿಸಿ ಕೇಕ್ ಕತ್ತರಿಸುವ ಮಾಡುವ ಮೂಲಕ ಸಂತಸ ಹಂಚಿಕೊಂಡರು.
ವಿಧಾನ ಪರಿಷತ್ ಸದಸ್ಯರಾದ ಬೋಜೇಗೌಡ,ಹರೀಶ್ ಕುಮಾರ್, ಮಂಜೇಶ್ವರ ಶಾಸಕ ಎ ಕೆ ಅಶ್ರಫ್, ಮಾಜಿ ಶಾಸಕ ಜೆ. ಆರ್. ಲೋಬೋ, ಮಾಜಿ ಎಂಎಲ್‌ಸಿ ಐವನ್ ಡಿ ಸೋಜಾ, ಮಿಥುನ್‌ ರೈ ಸೇರಿದಂತೆ ರಾಜಕೀಯ ಮುಖಂಡರು; ಸಾರ್ವಜನಿಕ ಆಡಳಿತದ ಗಣ್ಯರು, ನಗರದ ಕಾರ್ಪೊರೇಟರ್‌ಗಳು,ವಿವಿಧ ಇಲಾಖೆಗಳ ಅಧಿಕಾರಿಗಳು, ಧಾರ್ಮಿಕ ಮುಖಂಡರು ಮತ್ತು ಧಾರ್ಮಿಕ ಸಂಸ್ಥೆಗಳ ಮುಖ್ಯಸ್ಥರು ಉಪಸ್ಥಿತರಿದ್ದರು.
ಫಾದರ್ ಮುಲ್ಲರ್ ಸಂಸ್ಥೆಯ ಸಿಬ್ಬಂದಿ ಮತ್ತು ನರ್ಸಿಂಗ್ ವಿದ್ಯಾರ್ಥಿಗಳಿಂದ ಬಹುಭಾಷಾ ಕ್ರಿಸ್‌ಮಸ್ ಹಾಡುಗಳು ಮತು ಕ್ರಿಸ್‌ಮಸ್ ನೃತ್ಯ ಪ್ರದರ್ಶನ ಕಾರ್ಯಕ್ರಮಕ್ಕೆ ಸಾಂಸ್ಕೃತಿಕ ಮೆರುಗು ನೀಡಿತು. ಸಾಮಾಜಿಕ ಸಂಪರ್ಕಾಧಿಕಾರಿ ವಂದನೀಯ ಡಾ.ಜೆ.ಬಿ.ಸಲ್ಡಾನ್ಹಾ, ರಾಕ್ಣೊವಾರಪತ್ರಿಕೆಯ ಸಂಪಾದಕರಾದ ಫಾ.ರೂಪೇಶ್ ಮಾಡ್ತಾ ಉಪಸ್ಥಿರಿದ್ದರು.
ವಿವಿದ್ ಡಿಸೋಜಾ ಕಾರ್ಯಕ್ರಮ ನಿರೂಪಿಸಿದರು. ಸಾರ್ವಜನಿಕ ಸಂಪರ್ಕಾಧಿಕಾರಿ ರೊಯ್ ಕಾಸ್ತೆಲಿನೊ ಮತ್ತು ತಂಡ ಕಾರ್ಯಕ್ರಮ ಸಂಯೋಜಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles