24 C
Karnataka
Friday, November 15, 2024

ಖ್ಯಾತ ಜಾನಪದ ತಜ್ಞ,ಸಾಹಿತಿ ಅಮೃತ ಸೋಮೇಶ್ವರ ವಿಧಿವಶ

ಮ೦ಗಳೂರು:ಖ್ಯಾತ ಜಾನಪದ ತಜ್ಞ,ಯಕ್ಷಗಾನ ಪ್ರಸಂಗಕರ್ತ, ಸಂಶೋಧಕ,ಕವಿ, ಕಥೆಗಾರ, ವಿಮರ್ಶಕ ,ಅನುವಾದಕ ಹೀಗೆ
ಹಲವು ಕ್ಷೇತ್ರಗಳಲ್ಲಿ ಅನನ್ಯ ಕೊಡುಗೆಯೊಂದಿಗೆಸಾಹಿತ್ಯಲೋಕದಲ್ಲಿ ತನ್ನದೆ ಛಾಪು ಮೂಡಿಸಿರುವ ಅಮೃತ ಸೋಮೇಶ್ವರ( ೮೮) ಅವರು ಶನಿವಾರ ಬೆಳಗ್ಗೆ ನಿಧನ ಹೊ೦ದಿದ್ದಾರೆ. ಅವರು ಹಾಗೂ ಇಬ್ಬರು ಪುತ್ರರನ್ನು ಅಗಲಿದ್ದಾರೆ.

ಮಂಗಳೂರು ತಾಲೂಕಿನ ಕೋಟೆಕಾರು ಅಡ್ಕದಲ್ಲಿ 1935ರ ಸೆ. 27 ರಂದು ಜನಿಸಿದರು. ತಂದೆ ಚಿರಿಯಂಡ. ತಾಯಿ ಅಮುಣಿ.ಮಾತೃಭಾಷೆ ಮಲೆಯಾಳಂ. ಆದರೆ ಅವರ ಸಾಹಿತ್ಯಕೃಷಿ ನಡೆದದ್ದು ಕನ್ನಡ ಹಾಗೂ ತುಳುಭಾಷೆಯಲ್ಲಿ.ಕೋಟೆಕಾರಿನ ಸ್ಟೆಲ್ಲಾ ಮೇರಿ ಕಾನ್ವೆಂಟ್‌ ಹಾಗೂ ಆನಂದಾಶ್ರಮ ಪ್ರೌಢಶಾಲೆಯಲ್ಲಿ ಪ್ರಾಥಮಿಕ ಶಿಕ್ಷಣ ಮುಗಿಸಿ ಮಂಗಳೂರಿನ ಸೈಂಟ್‌ ಅಲೋಶಿಯಸ್‌ ಕಾಲೇಜಿನಲ್ಲಿ ಕಲಾವಿಭಾಗದಲ್ಲಿ ಪದವಿ ಪಡೆದು ಬಳಿಕ ಅದೇ ಕಾಲೇಜಿನಲ್ಲಿ ಅಧ್ಯಾಪಕರಾಗಿ ಕೆಲವು ಕಾಲ ಸೇವೆ ಸಲ್ಲಿಸಿದರು.
ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಎಂ.ಎ. ಪದವಿ ಪಡೆದು ನಂತರ ಪುತ್ತೂರಿನ ಸೈಂಟ್ ಫಿಲೋಮಿನಾ ಕಾಲೇಜಿನಲ್ಲಿ
ಉಪನ್ಯಾಸಕನಾಗಿ, ವಿವೇಕಾನಂದ ಕಾಲೇಜಿನಲ್ಲಿ ಕನ್ನಡ ವಿಭಾಗದ ಮುಖ್ಯಸ್ಥರಾಗಿ ಸೇವೆ ಸಲ್ಲಿಸಿ 1993 ರಲ್ಲಿ ನಿವೃತ್ತಿ
ಹೊಂದಿದರು. ನಿವೃತ್ತಿಯ ಬಳಿಕ ಮಂಗಳೂರು ವಿಶ್ವವಿ ದ್ಯಾನಿಲಯದ ಯಕ್ಷಗಾನ ಕೇಂ ದ್ರದಲ್ಲಿ ಸಂದರ್ಶನ ಪ್ರಾಧ್ಯಾಪಕರಾಗಿ
ಕೆಲಕಾಲ ಕಾಲ ನಿರ್ವಹಿಸಿದರು.
ಸಾಹಿತ್ಯಲೋಕ ದ ಹಿರಿಮೆ
ಅಭಿಮಾನಿ ಬಳಗದಲ್ಲಿ ಅಮೃತರು ಎಂದೇ ಗುರುತಿಸಿಕೊಂಡಿದ್ದ ಸವ್ಯಸಾಚಿ ವಿದ್ಯಾರ್ಥಿ ದೆಸೆಯಿಂದಲೇ ಸಾಹಿತ್ಯಾಸಕ್ತಿಯನ್ನು ಮೈಗೂಡಿಸಿಕೊಂಡಿದ್ದ ಅಮೃತರು ಎಲೆಗಿಳಿ ಎಂಬ ಕಥಾಸಂಕಲನವನ್ನು ಹೊರತಂದಿದ್ದರು. ನವೋದಯ, ನವ್ಯ,ಬಂಡಾಯ,ಪ್ರಗತಿಪರ ಹೀಗೆಸಾಹಿತ್ಯದ ಯಾವ ಬಣದಲ್ಲೂ ಗುರುತಿಸಿಕೊಳ್ಳದೆ ತನ್ನದೇ ಆದ ಹಾದಿಯಲ್ಲಿ ಸಾಗಿದ ಅವರು ಸುಮಾರು 70 ಕ್ಕೂ ಅಧಿಕ
ಕೃತಿಗಳನ್ನು ರಚಿಸಿದ್ದಾರೆ.

ತುಳುವಿನಲ್ಲೂ ಸಾಹಿತ್ಯಕೃಷಿಯನ್ನು ಮಾಡಿರುವಅಮೃತರು ತುಳುಕವನಸಂಕಲನಗಳನ್ನು, ತುಳು ಪಾಡ್ಡನ ಕತೆಗಳು, ಮುಂತಾ ದ ಕೃತಿಗಳನ್ನು ರಚಿಸಿ ದಾರೆ. ಫಿನ್ಲೆಂಡಿನ ಜಾನಪ ದಮಹಾಕಾವ್ಯವಾ ದ ಕಾಲೇವಾಲವನ್ನು ತುಳುಭಾಷೆಗೆಅನುವಾದಿಸಿ ದಾರೆ. ಚಂದ್ರಶೇಖರ ಕಂಬಾರ ಅವರ ಜೋಕುಮಾರ ಸ್ವಾಮಿ ನಾಟಕವನ್ನು ತುಳು ಭಾಷೆಗೆಅನುವಾದಿಸಿದ್ದು ರಂಗದ ಮೇಲೆ ಆನೇಕ
ಪ್ರ ದರ್ಶನಗಳನ್ನು ಕಂಡಿದೆ.ತುಳುಭಾಷೆಯಲ್ಲಿ ಆನೇಕರೇಡಿಯೋ ನಾಟಕಗಳನ್ನು, ನೃತ್ಯರೂಪಕಗಳನ್ನು ,
ಗಾದೆಗಳನ್ನು ರಚಿಸಿದ್ದಾರೆ.. ಸುಮಾರು ಮೂವತ್ತಕ್ಕೂಅಧಿಕ ಭಕ್ತಿಗೀತೆ,ಭಾವಗೀತೆಗಳ ಧ್ವ ನಿಸುರುಳಿಗಳನ್ನು ತುಳು ಹಾಗೂ ಕನ್ನಡ ಭಾಷೆಗಳಲ್ಲಿ ಹೊರತಂದಿದ್ದಾರೆ.
ಯಕ್ಷಗಾನ ಕ್ಷೇತ್ರಕ್ಕೆ ಕೊಡುಗೆ
ಪ್ರಸಂಗಕರ್ತರಾಗಿ ಯಕ್ಷಗಾನ ಕ್ಷೇತ್ರಕ್ಕೆ ಅಮೃತರುಪ್ರಮುಖ ಕೊಡುಗೆಯನ್ನು ನೀಡಿದಾರೆ. ಅಮರಶಿಲ್ಪಿ ವೀರಕಲ್ಕುಡ, ಘೋರ ಮಾರಕ, ಸಹಸ್ರ ಕವಚಮೋಕ್ಷ, ಕಾಯಕಲ3, ಅಮರವಾಹಿನಿ, ತ್ರಿಪುರ ಮಥನ, ಆದಿಕವಿವಾಲ್ಮಿಕಿ,ಚಾಲುಕ್ಯ ಚಕ್ರೇಶ್ವರ ಸೇರಿ ಮೂವತ್ತಕ್ಕೂ ಅ ಧಿಕಪ್ರಸಂಗಗಳನ್ನು ರಚಿಸಿದ್ದಾರೆ.ಸಾಹಿತ್ಯ ಸೇವೆಗಾಗಿ ಅಮೃತರಿಗೆ ಸಂದ ಪ್ರಶಸ್ತಿಗಳು,ಪುರಸ್ಕಾರಗಳು ಕರ್ನಾಟಕ ನಾಟಕ ಅಕಾಡೆಮಿ ಪ್ರಶಸ್ತಿ, ಯಕ್ಷಗಾನಕೃತಿ ಸಂಪುಟಕ್ಕೆ ಜಾನಪ ದ ಮತ್ತು ಯಕ್ಷಗಾನ ಅಕಾಡೆಮಿಪ್ರಶಸ್ತಿ, ತುಳುಪಾಡ್ಡನ ಕಥೆಗಳು ಕೃತಿಗೆ ಕೇಂದ್ರ ವಿದ್ಯಾ ಇಲಾಖೆಯ ಪ್ರಶಸ್ತಿ, ತುಳುನಾಡು ಸಂಪುಟಕ್ಕೆಕು.ಶಿ.ಹರಿ ದಾಸ ಭಟ್ಟ ಪ್ರಶಸ್ತಿ, ಅಪಾರ್ಥಿನಿ ಕುಚೋದ್ಯ ಶಬ್ಧಕೋಶಕ್ಕೆ ಆರ್ಯಭಟ ಪ್ರಶಸ್ತಿ, ಯಕ್ಷಗಾನಕ್ಕೆನೀಡಿರುವ ಕೊಡುಗೆಗಾಗಿ ಪಾರ್ತಿಸುಬ್ಬ ಪ್ರಶಸ್ತಿ,ಆಕಾಶವಾಣಿ ಪುರಸ್ಕಾರ , ತುಳು ಸಾಹಿತ್ಯ ಅಕಾಡೆಮಿ ಪ್ರಶಸ್ತಿ, ಆಳ್ವಾಸ್‌ .ನುಡಿಸಿರಿ ಪ್ರಶಸ್ತಿ, ಜಿಲ್ಲಾ ಹಾಗೂ ಕರ್ನಾಟಕ ರಾಜ್ಯೋತ್ಸವಪ್ರಶಸ್ತಿ ,ಮಂಗಳೂರು ವಿಶ್ವವಿದ್ಯಾ ನಿಲಯದಿಂದ ಗೌರವಡಾಕ್ಟರೇಟ್‌ ಪ್ರಮುಖವಾದುದು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles