ಮಂಗಳೂರು: ಪ್ರಧಾನ ಮಂತ್ರಿ ಜನಾರೋಗ್ಯ ಯೋಜನೆ ಮುಖ್ಯಮಂತ್ರಿ ಆರೋಗ್ಯ ಕರ್ನಾಟಕ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಬಿಪಿಎಲ್ ಕುಟುಂಬಗಳಿಗೆ ವರ್ಷಕ್ಕೆ ರೂ.5 ಲಕ್ಷ ಹಾಗೂ ಎಪಿಎಲ್ ಕುಟುಂಬಗಳಿಗೆ ರೂ.1.5 ಲಕ್ಷದವರೆಗಿನ ಚಿಕಿತ್ಸೆಯನ್ನು ಉಚಿತವಾಗಿ ಸರ್ಕಾರಿ ಆಸ್ಪತ್ರೆಗಳಲ್ಲಿ ಹಾಗೂ ಹೆಚ್ಚುವರಿ ಚಿಕಿತ್ಸೆಗಾಗಿ ಮೇಲ್ದರ್ಜೆ ನೋಂದಾಯಿತ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆಯನ್ನು ಪಡೆಯುವ ಸಲುವಾಗಿ ಫಲಾನುಭವಿ ಗುರುತಿನ ಚೀಟಿ ಸ್ವಯಂ ನೋಂದಾವಣೆ ಪ್ರಕ್ರಿಯೆ ಚಾಲನೆಗೊಂಡಿದೆ.
ಈಗಾಗಲೇ (ಕಾರ್ಡ್) ಗುರುತಿನ ಚೀಟಿಗೆ ನೋಂದಾವಣೆ ಮಾಡಿಕೊಂಡ ಫಲಾನುಭವಿಗಳು BIS (Beneficiary IdentificationSystem) https://beneficiary.nha.gov.in/ತೆರೆದು ದೂರವಾಣಿ/ ಆಧಾರ್ ಸಂಖ್ಯೆ ನಮೂದಿಸಿದಾಗ ಆರೋಗ್ಯ ಕಾರ್ಡ್ ಸಿಗುತ್ತದೆ. ಇಲ್ಲಿಯವರೆಗೆ ಕಾರ್ಡ್‍ಗೆ ನೋಂದಾವಣೆ ಮಾಡಿಕೊಳ್ಳದ ಫಲಾನುಭವಿಗಳು ಸ್ವತಃ ಸೃಜನೆ ಮಾಡಿಕೊಳ್ಳುವುದರ ಮೂಲಕ ಕಾರ್ಡ್ ಪಡೆದು ಆರೋಗ್ಯ ಸೇವೆಯ ಸೌಲಭ್ಯವನ್ನು ಪಡೆಯಬಹುದು. ಹೆಚ್ಚಿನ ಮಾಹಿತಿಗೆ ಹತ್ತಿರದ ಆರೋಗ್ಯ ಕೇಂದ್ರ ಸಂಪರ್ಕಿಸುವಂತೆ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಅಧಿಕಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ