19.9 C
Karnataka
Saturday, November 16, 2024

“ಮಿಸ್ಟರ್ ಮದಿಮಯೆ” ಜ.12ರಂದು ಕರಾವಳಿಯಾದ್ಯಂತ ತೆರೆಗೆ

ಮಂಗಳೂರು: “ಎಮ್ ಎಮ್ ಎಮ್ ಗ್ರೂಫ್ಸ್ ಬ್ಯಾನರ್ ನಡಿಯಲ್ಲಿ ನಿರ್ಮಾಣವಾದ “ಮಿಸ್ಟರ್ ಮದಿಮಯೆ’’ ತುಳು ಚಿತ್ರ ಜ. 12ರಂದು ತೆರೆ ಕಾಣಲಿದೆ” ಎಂದು ನಟ ಸಾಯಿಕೃಷ್ಣ ಕುಡ್ಲ ಪತ್ರಿಕಾಗೋಷ್ಠಿಯಲ್ಲಿ ಮಾಹಿತಿ ನೀಡಿದರು.
“ಮಿಸ್ಟರ್ ಮದಿಮಯೆ ಸಿನಿಮಾ ಮಂಗಳೂರಿನಲ್ಲಿ ಬಿಗ್ ಸಿನಿಮಾಸ್, ಸಿನಿಪೊಲಿಸ್, ಪಿವಿಆರ್, ಸುರತ್ಕಲ್ ನಲ್ಲಿ ಸಿನಿಗ್ಯಾಲಕ್ಸಿ, ಪಡುಬಿದ್ರಿಯಲ್ಲಿ ಬಿಗ್ ಸಿನಿಮಾಸ್, ಪುತ್ತೂರಿನಲ್ಲಿ ಭಾರತ್ ಸಿನಿಮಾಸ್, ಬೆಳ್ತಂಗಡಿಯಲ್ಲಿ ಭಾರತ್, ಸುಳ್ಯದಲ್ಲಿ ಸಂತೋಷ್ ಚಿತ್ರಮಂದಿರದಲ್ಲಿ ಸಿನಿಮಾ ತೆರೆ ಕಾಣಲಿದೆ. ಉಡುಪಿಯ ಕಲ್ಪನಾ ಮತ್ತು ಮಂಗಳೂರಿನ ರೂಪವಾಣಿ ಥಿಯೇಟರ್ ನಲ್ಲಿ ಜ.19ರಂದು ಬಿಡುಗಡೆಯಾಗಲಿದೆ” ಎಂದರು.
ಪ್ರಕಾಶ್ ಪಾಂಡೇಶ್ವರ್ ಅವರು ಮಾತನಾಡಿ , “ಹೊಸಬರ ತಂಡ ಒಂದೊಳ್ಳೆಯ ಪ್ರಯತ್ನ ಮಾಡಿದ್ದಾರೆ. ಎಲ್ಲರೂ ಸಿನಿಮಾ ನೋಡುವ ಮೂಲಕ ಪ್ರೋತ್ಸಾಹಿಸಿದಲ್ಲಿ ನಿರ್ಮಾಪಕರು ಇನ್ನಷ್ಟು ಸಿನಿಮಾ ಮಾಡಬಹುದು” ಎಂದರು.
ಸಿನಿಮಾಕ್ಕೆ ಒಂದೇ ಹಂತದಲ್ಲಿ ಸುಮಾರು 20 ದಿನಗಳ ಕಾಲ ಚಿತ್ರೀಕರಣ ನಡೆದಿದ್ದು ಮುಖ್ಯವಾಗಿ ಸಿನಿಮಾದಲ್ಲಿ ಹೊಸ ಕಲಾವಿದರಿಗೆ ಅವಕಾಶ ನೀಡಲಾಗಿದೆ. ಪ್ರತಿಭಾವಂತರ ತಂಡ ಸೇರಿಕೊಂಡು ಕೆಲಸ ಮಾಡಿದೆ. ಸಾಯಿಕೃಷ್ಣ ಕುಡ್ಲರಂತಹ ಪ್ರಬುದ್ಧ ಕಲಾವಿದರೊಂದಿಗೆ ಹೊಸ ಹುಡುಗರು ಇಲ್ಲಿ ತೆರೆಯನ್ನು ಹಂಚಿಕೊಂಡಿದ್ದಾರೆ ಎ೦ದು ಚಿತ್ರ ನಿರ್ದೇಶಕ ನವೀನ್ ಜಿ. ಪೂಜಾರಿ ಹೇಳಿದರು.
ಮದುವೆ ಸಮಾರಂಭದ ಸುತ್ತ ನಡೆಯುವ ಕತೆಗೆ ಹಾಸ್ಯದ ಲೇಪನ ಹಚ್ಚಲಾಗಿದೆ. ಜೊತೆಗೆ ಸೆಂಟಿಮೆಂಟ್ ಎಲ್ಲವೂ ಇದೆ. ಪ್ರೇಕ್ಷಕರ ಅಭಿರುಚಿಯನ್ನು ಅರಿತು ಸಿನಿಮಾದ ಕತೆ ಹೆಣೆಯಲಾಗಿದೆ. ಕ್ಲೈಮಾಕ್ಸ್ ವಿಭಿನ್ನತೆಯಿಂದ ಹೊಂದಿದ್ದು, ಸಿನಿಮಾ ಪ್ರೇಕ್ಷಕರಿಗೆ ಸಂಪೂರ್ಣ ಮನರಂಜನೆ ಒದಗಿಸಿದೆ. ಈಗಾಗಲೇ ಪ್ರೀಮಿಯರ್ ಷೋ ಮೂಲಕ ಸಿನಿಮಾ ತೆರೆಕಂಡಿದ್ದು, ಪ್ರೇಕ್ಷಕರು ಸಿನಿಮಾವನ್ನು ನೋಡಿ ಮೆಚ್ಚಿಕೊಂಡಿದ್ದಾರೆ. ಸಿನಿಮಾವನ್ನು ಇಷ್ಟ ಪಟ್ಟಿದ್ದಾರೆ. ಈಗಾಗಲೇ ಚಿತ್ರದ 3 ಹಾಡುಗಳು ಮತ್ತು ಟ್ರೈಲರ್ ಬಿಡುಗಡೆ ಹೊಂದಿದ್ದು ಕಲಾಭಿಮಾನಿಗಳು ಹೊಸಬರ ಪ್ರಯತ್ನವನ್ನು ಕೊಂಡಾಡಿದ್ದಾರೆ ಎ೦ದು ಚಿತ್ರದ ನಾಯಕಿ ನಟಿ ಶ್ವೇತಾ ಸುವರ್ಣ ವಿವರಿಸಿದರು.
ನವೀನ್ ಜಿ ಪೂಜಾರಿ ಅವರ ನಿರ್ದೇಶನದ ಈ ಸಿನಿಮಾದ ನಾಯಕನಾಗಿ ಸಾಯಿಕೃಷ್ಣ ಕುಡ್ಲ ಅವರು ನಟಿಸುತ್ತಿದ್ದಾರೆ. ಉಳಿದಂತೆ ಪ್ರಮುಖ ಪಾತ್ರಗಳಲ್ಲಿ ಶ್ವೇತಾ ಸುವರ್ಣ, ರವಿಕಾಂತ್ ಪೂಜಾರಿ, ಜ್ಯೋತಿಷ್ ಶೆಟ್ಟಿ, ಸುನೀಲ್ ನೆಲ್ಲಿಗುಡ್ಡೆ, ಕಾಮಿಡಿ ಕಿಲಾಡಿಗಳು ಖ್ಯಾತಿಯ ಪಿಂಕಿ ರಾಣಿ, ರವಿ ರಾಮಕುಂಜ, ಪ್ರಕಾಶ್ ಪಾಂಡೇಶ್ವರ್, ಕಾಮಿಡಿ ಗ್ಯಾಂಗ್ ಖ್ಯಾತಿಯ ಮನೀಷ್ ಶೆಟ್ಟಿ ಉಪ್ಪಿರ, ಅಕ್ಷಯ್ ಸರಿಪಲ್ಲ, ಸಂದೀಪ್ ಶೆಟ್ಟಿ ರಾಯಿ, ಶರಣ್ ಕೈಕಂಬ, ಪ್ರವೀಣ್ ಮರ್ಕಮೆ, ಉತ್ಸವ್ ವಾಮಂಜೂರು, ಸವ್ಯರಾಜ್ ಕಲ್ಲಡ್ಕ, ಪ್ರಥ್ವಿನ್ ಪೊಳಲಿ ಮುಂತಾದವರು ಬಣ್ಣ ಹಚ್ಚಿದ್ದಾರೆ.ಮಿಥುನ್ ಕೆ.ಎಸ್. ನಿರ್ಮಾಪಕರಾಗಿರುವ ಈ ಚಿತ್ರಕ್ಕೆ ರಾಜೇಶ್ ಫೆರಾವೋ ಅವರು ಸಹ ನಿರ್ಮಾಪಕರಾಗಿ ಕೈ ಜೋಡಿಸಿದ್ದಾರೆ. ಚಿತ್ರಕ್ಕೆ ಕೆ.ಪಿ. ಮಿಲನ್ ಸಂಗೀತ ಹಾಗೂ ಪ್ರಶಾಂತ್ ಧರ್ಮಸ್ಥಳ ಅವರ ಛಾಯಾಗ್ರಹಣ ಇದೆ. ನವೀನ್ ಆರ್ಯನ್ ಮತ್ತು ವಿನೋದ್ ನೃತ್ಯ ಸಂಯೋಜಿಸಿದ್ದಾರೆ. ಕೌರವ್ ವೆಂಕಟೇಶ್ ರವರ ಸಾಹಸ, ಸುಕೇಶ್ ಶೆಟ್ಟಿ, ಜಿ.ಎಸ್ ಗುರುಪುರ ಅವರ ಸಾಹಿತ್ಯ, ಸುಜೀತ್ ನಾಯಕ್ ರವರ ಸಂಕಲನ ಇದೆ‌. ಚಿತ್ರವನ್ನು ಸಚಿನ್ ಎ.ಎಸ್. ಉಪ್ಪಿನಂಗಡಿ ಕರಾವಳಿದ್ಯಾದಂತ ವಿತರಿಸುತ್ತಿದ್ದಾರೆ. ವಸ್ತ್ರಾಲಂಕಾರ ನಿಖಿತಾ ಕೋಟ್ಯಾನ್, ನಿರ್ಮಾಣ ನಿರ್ವಾಹಕರಾಗಿ ಶ್ರೇಯಸ್ ಶೆಟ್ಟಿ, ಚಿತ್ರ ಮೇಲ್ವಿಚಾರಕರಾಗಿ ಹೆರಾಲ್ಡ್ ವಾಲ್ಡರ್, ಕಾರ್ಯಕಾರಿ ನಿರ್ಮಾಪಕರಾಗಿ ಸೌಮ್ಯ ಚೇತನ್ ಮತ್ತು ಸೌಜನ್ಯ ಶೆಟ್ಟಿ ಚಿತ್ರಕ್ಕೆ ಬೆನ್ನುಲುಬಾಗಿ ನಿಂತಿದ್ದಾರೆ. ಚಿತ್ರದ ಕ್ರಿಯೇಟಿವ್ ಹೆಡ್ ಬಚ್ಚನ್ ಚೇತುರವರು ಚಿತ್ರದ ಪ್ರತಿ ಹಂತದಲ್ಲೂ ಬೆನ್ನುಲುಬಾಗಿ ನಿಂತಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಸುನಿಲ್ ನೆಲ್ಲಿಗುಡ್ಡೆ, ನಿರ್ಮಾಪಕ ಮಿಥುನ್ ಕೆ.ಎಸ್, ಎಡಿಟರ್ ಸುಜಿತ್ ನಾಯಕ್, ಮೆನೇಜರ್ ಹೆರಾಲ್ಡ್, ಚಿತ್ರ ನಿರ್ದೇಶಕ ನವೀನ್ ಜಿ. ಪೂಜಾರಿ, ಸಂಗೀತ ನಿರ್ದೇಶಕ ಮಿಲನ್, ಚಿತ್ರ ವಿತರಕ ಸಚಿನ್ ಎ.ಎಸ್. ಉಪ್ಪಿನಂಗಡಿ, ರಾಜೇಶ್ ಫೆರಾವೋ ಮತ್ತಿತರರು ಉಪಸ್ಥಿತರಿದ್ದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles