ಮಂಗಳೂರು: ಕಾರ್ ಸ್ಟ್ರೀಟ್ ನ ಜ್ಯುವೆಲ್ಲರ್ಸ್ ವೊ೦ದಕ್ಕೆ ಗ್ರಾಹಕರ ಸೋಗಿನಲ್ಲಿ ಬಂದು ಗಮನ ಬೇರೆಡೆ ಸೆಳೆದು ಸುಮಾರು 6,00,000
ರೂ. ಮೌಲ್ಯದ 97.11 ಗ್ರಾಂ ತೂಕದ ಚಿನ್ನಾಭರಣ ದೋಚಿ ಪರಾರಿಯಾದ ಮೂವರನ್ನು ಪೊಲೀಸರು ಬ೦ಧಿಸಿದ್ದಾರೆ.ಮಹಮ್ಮದ್ ಸಿನಾನ್ ,ಹೈದರ್ ಆಲಿ ಆಸಿಲ್ ಮತ್ತು ಮೊಹಮ್ಮದ್ ತನ್ವೀರ್ ಬ೦ಧಿತ ಆರೋಪಿಗಳು.
ಕಾರ್ ಸ್ಟ್ರೀಟ್ ನ ಜಿ.ಎಚ್.ಎಸ್ ಕ್ರಾಸ್ ರಸ್ತೆಯಲ್ಲಿರುವ ಪ್ರಗತಿ ಜ್ಯುವೆಲ್ಲರ್ಸ್ ಗೆ ಗ್ರಾಹಕರ ಸೋಗಿನಲ್ಲಿ ಬಂದಿದ್ದ ಆರೋಪಿಗಳು ಅ೦ಗಡಿಯವರ ಗಮನ ಬೇರೆಡೆ ಸೆಳೆದು ಚಿನ್ನಾಭರಣ ದೋಚಿ ಪರಾರಿಯಾಗಿದ್ದರು.
ಪ್ರಕರಣಕ್ಕೆ ಸಂಬಂದಿಸಿದಂತೆ ಆರೋಪಿಗಳ ಪತ್ತೆಯ ಬಗ್ಗೆ
ಪೊಲೀಸ್ ಆಯುಕ್ತ ಅನುಪಮ್ ಅಗ್ರವಾಲ್ ಅವರ ಮಾರ್ಗದರ್ಶನದಲ್ಲಿ ಉಪ ಪೊಲೀಸ್ ಆಯುಕ್ತರಾದ ಸಿದ್ದಾರ್ಥ ಗೋಯಲ್ ಹಾಗೂ ದಿನೇಶ್ಕುಮಾರ್ ಮತ್ತು ಸಹಾಯಕ ಪೊಲೀಸ್ ಆಯುಕ್ತಮಹೇಶ್ ಕುಮಾರ್ ನಿರ್ದೇಶನದಂತೆ ಮಂಗಳೂರು ಉತ್ತರ ಪೊಲೀಸ್ ಠಾಣೆಯ ಪೊಲೀಸ್ ನಿರೀಕ್ಷಕಅಜ್ಮತ್ ಅಲಿ.ಜಿ ರವರ ನೇತೃತ್ವದಲ್ಲಿ
ಪೊಲೀಸ್ ಉಪ ನಿರೀಕ್ಷಕರುಗಳಾದ ಪ್ರದೀಪ್ ಟಿ.ಆರ್, ಶಿವಪ್ಪ ಗೌಡ ಹಾಗೂ ಉತ್ತರ ಪೊಲೀಸ್ ಠಾಣಾ ಸಿಬ್ಬಂದಿಗಳನ್ನು
ಒಳಗೊಂಡ ತಂಡ ಕಾರ್ಯಾಚರಿಸಿ ಮಂಗಳೂರು ಕೇಂದ್ರ ಮಾರುಕಟ್ಟೆ ಪರಿಸರದಲ್ಲಿ ಆರೋಪಿಗಳನ್ನು ಬ೦ಧಿಸಿದ್ದಾರೆ.
ಆರೋಪಿಗಳಿಂದ ಸುಮಾರು ರೂ 6,00,000/- ಮೌಲ್ಯದ 97.11 ಗ್ರಾಂ ತೂಕದ ಚಿನ್ನಾಭರಣ, ಹಾಗೂಕೃತ್ಯಕ್ಕೆ ಬಳಸಿದ್ದ ಸ್ಕೂಟರ್ ಹಾಗೂ ಸುಮಾರು 2 ಮೊಬೈಲ್ ಪೋನ್ ವಶಪಡಿಸಿಕೊಂಡಿದ್ದುಇವುಗಳ ಒಟ್ಟು ಮೌಲ್ಯ ಸುಮಾರು 7,15,000/- ರೂ ಆಗಿರುತ್ತದೆ.ಪ್ರಕರಣ ಆರೋಪಿ ಮೊಹಮ್ಮದ್ ತನ್ವೀರ್ ನ ವಿರುದ್ದ ಈ ಹಿಂದೆ ಕೋಣಾಜೆ ಪೊಲೀಸ್ ಠಾಣೆಯಲ್ಲಿ
ದರೋಡೆ ಪ್ರಕರಣ ಹಾಗೂ ಹೈದರ್ ಆಲಿ ಆಸಿಲ್ ನ ವಿರುದ್ದ ಕೋಣಾಜೆ ಪೊಲೀಸ್ ಠಾಣೆಯಲ್ಲಿ 2 ಹಲ್ಲೆ ಪ್ರಕರಣದಾಖಲಾಗಿರುತ್ತದೆ.