ಮಂಗಳೂರು : ಅಫಘಾತಗಳಿಗೆ ನಿರ್ಲಕ್ಷ ವಾಹನ ಚಾಲನೆಯೇ ಪ್ರಮುಖ ಕಾರಣವಾಗಿದ್ದು, ನೈಸರ್ಗಿಕ ಕಾರಣಗಳನ್ನು ಹೊರತು ಪಡಿಸಿ ವಾಹನ ಅಫಘಾತಗಳಿಂದಲೇ ಹೆಚ್ಚಿನ ಸಾವು ನೋವುಗಳು ಸಂಭವಿಸುತ್ತಿದ್ದು, 15 ರಿಂದ 49 ರ ವಯೋಮಾನದ ಯುವ ಜನರಲ್ಲಿ ಅತೀ ಹೆಚ್ಚು ಅಫಘಾತಗಳು ಸಂಭವಿಸುತ್ತಿರುವುದು ಅಂಕಿ ಅಂಶಗಳಿಂದ ತಿಳಿದು ಬರುತ್ತದೆ ಎಂದು ಅಪರಾಧ ವಿಭಾಗದ ಡಿ.ಸಿ.ಪಿ. ದಿನೇಶ್ ಕುಮಾರ್ ತಿಳಿಸಿದರು.
ಅವರು ರೋಟರಿ ಅಂತರ್ ರಾಷ್ಟೀಯ ಜಿಲ್ಲೆ 3181 ಪಬ್ಲಿಕ್ ಇಮೇಜ್ ಮತ್ತು ರಸ್ತೆ ಸುರಕ್ಷಿತ ಜಾಗೃತಿ ವಿಭಾಗದ ನೇತ್ರತ್ವದಲ್ಲಿ ನಗರದ ರೋಟರಿ ಬಾಲ ಭವನದಲ್ಲಿ ‘ರೋಟರಿ ಸಪ್ತಾಹ 2024’ ಮತ್ತು ಇದರ ಅಂಗವಾಗಿ ನಡೆದ ಜಸ್ಟಿಸ್ ಕೆ. ಎಸ್. ಹೆಗ್ಡೆ ಚಾರಿಟೇಬಲ್ ಆಸ್ಪತ್ರೆ ದೇರಳಕಟ್ಟೆ ಇದರ ವೈದ್ಯರ ತಂಡದಿಂದ ಆಟೋ ರಿಕ್ಷಾ, ಟ್ಯಾಕ್ಸಿ ಮತ್ತು ವಾಹನ ಚಾಲಕರಿಗೆ ಉಚ್ಚಿತ ವೈದ್ಯಕೀಯ ಶಿಬಿರದಲ್ಲಿ ಭಾಗವಹಿಸಿ ಮಾತನಾಡಿದರು.
ರೋಟರಿ 3181 ಜಿಲ್ಲಾ ಮಾಜಿ ಗವರ್ನರ್ ರಂಗನಾಥ್ ಭಟ್ ಕಾರ್ಯಕ್ರಮವನ್ನು ಉದ್ಘಾಟಿಸಿದರು ನಿಕಟ ಪೂರ್ವ ರೋಟರಿ ಜಿಲ್ಲಾ ಗವರ್ನರ್ ಪ್ರಕಾಶ್ ಕಾರಂತ್ ಅಧ್ಯಕ್ಷತೆ ವಹಿಸಿದ್ದರು. ಹೆಚ್ಚುವರಿ ಪೊಲೀಸ್ ಅಧೀಕ್ಷಕ ಧರ್ಮಪ್ಪ ನವರು ಸಂಚಾರಿ ಅರಿವು ಮೂಡಿಸುವ ಫಲಕವನ್ನು ಬಿಡುಗಡೆ ಗೊಳಿಸಿ ವಿದ್ಯಾರ್ಥಿಗಳು ಮತ್ತು ಆಟೋ ಚಾಲಕರನ್ನು ಒಗ್ಗೂಡಿಸಿ ವಿದ್ಯಾರ್ಥಿಗಳಿಗೂ ಜಾಗೃತಿ ಮೂಡಿಸುವುದಿಂದ ಮುಂದಿನ ದಿನಗಳಲ್ಲಿ ಅವರೇ ವಾಹನವನ್ನು ಚಲಾಯಿಸುವ ಸಂದರ್ಭದಲ್ಲಿ ಮುಂಜಾಗ್ರತೆ ವಹಿಸಲು ಸಾಧ್ಯವಾಗುತ್ತದೆ ಎಂದರು.
ಕೆ.ಎಸ್.ಹೆಗ್ಡೆ ಮೆಡಿಕಲ್ ಕಾಲೇಜಿನ ಅಸೋಸಿಯೇಟ್ ಪ್ರೊಫೆಸರ್ ಡಾ. ಪ್ರತೀಕ್ಷಾ ರೈ ಆಟೋ ಚಾಲಕರಿಗೆ ಆರೋಗ್ಯ ಮತ್ತು ಮುಂಜಾಗ್ರತೆಯ ಬಗ್ಗೆ ಮಾಹಿತಿ ನೀಡಿದರು.
ರೋಟರಿ ಕ್ಲಬ್ ನಾರ್ತ್ ಅಧ್ಯಕ್ಷ ಗಣೇಶ್ ಭಟ್ ಸ್ವಾಗತಿಸಿದರು. , ಕಾರ್ಯಕ್ರಮದ ಚೇರ್ಮ್ಯಾನ್ ರೋಟರಿ ಜಿಲ್ಲಾ ಗವರ್ನರ್ ಕೃಷ್ಣ ಶೆಟ್ಟಿ ಮಾರ್ಗದರ್ಶನ ನೀಡಿದರು. ಕಾರ್ಯಕ್ರಮದ ಸಾಯೋಜಕ ಡಾ ಹರ್ಷ ಕುಮಾರ್ ರೈ ಪ್ರಸ್ತಾವನೆ ಗೈದರು, ನ್ಯಾಷನಲ್ ಹೈ-ವೇ ಅಥರಿಟಿ ಪ್ರೊಜೆಕ್ಟ್ ಡೈರೆಕ್ಟರ್ ಅಬ್ದುಲ್ಲಾ ಜಾವೇದ್ ಅಜ್ಮೀ, ನ್ಯಾಷನಲ್ ಹೈ-ವೇ ಎಕ್ಸಿಕ್ಯುಟಿವ್ ಇಂಜಿನಿಯರ್ ಶಿವಪ್ರಸಾದ್ ವೈದ್ಯಕೀಯ ಶಿಬಿರ ವನ್ನು ಉದ್ಘಾಟಿಸಿದರು. ಪಬ್ಲಿಕ್ ಇಮೇಜ್ ಚೇರ್ಮ್ಯಾನ್ ಎ. ಕೆ. ಯಸ್ ವಿಶ್ವಾಸ್ ಶೆಣೈ ಕಾರ್ಯಕ್ರಮ ನಿರ್ವಹಿಸಿದರು., ಓಸ್ಕರ್ ಆನಂದ್, ಅಭಿಷ, ಸುರೇಶ್ ಸುವರ್ಣ ಸಹಕರಿಸಿದರು ವಿಶ್ವನಾಥ್ ಶೆಟ್ಟಿ ಧನ್ಯವಾದ ಸಮರ್ಪಿಸಿದರು.