20.5 C
Karnataka
Friday, November 15, 2024

ವಿವಿ ಕಾಲೇಜು: ರಾಷ್ಟ್ರೀಯ ಯುವ ದಿನಾಚರಣೆ

ಮಂಗಳೂರು: ಸಂತ ಸ್ವಾಮಿ ವಿವೇಕಾನಂದರು ಯುವ ಪೀಳಿಗೆಗೆ ಸ್ಫೂರ್ತಿಯಾಗಿ ಬದುಕಿದವರು. ಅವರ ಜೀವನದ ಆದರ್ಶಗಳನ್ನು ಬದುಕಿನಲ್ಲಿ ಅಳವಡಿಸಿಕೊಂಡರೆ ಜೀವನ ಬೆಳಗುತ್ತದೆ. ಎಂದು ವಿಶ್ವವಿದ್ಯಾನಿಲಯ ಕಾಲೇಜಿನ ಪ್ರಾಂಶುಪಾಲೆ ಡಾ.ಅನಸೂಯ ರೈ ಅಭಿಪ್ರಾಯಪಟ್ಟರು.

ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಗ್ರಂಥಾಲಯದಲ್ಲಿ, ಕಾಲೇಜಿನ ಗ್ರಂಥಾಲಯ ವಿಭಾಗ, ಆಂತರಿಕ ಗುಣಮಟ್ಟ ಖಾತರಿ ಕೋಶ ಹಾಗೂ ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಹಯೋಗದೊಂದಿಗೆ,ಶುಕ್ರವಾರ ನಡೆದವಿವೇಕಾನಂದ ಜಯಂತಿಯ ಅಂಗವಾಗಿ ನಡೆದ ʼರಾಷ್ಟ್ರೀಯ ಯುವ ದಿನಾಚರಣೆʼ ಮತ್ತು ʼಗ್ರಂಥಾವಲೋಕನʼ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಸ್ನಾತಕೋತ್ತರ ಇತಿಹಾಸ ಮತ್ತು ಪುರಾತತ್ವ ವಿಭಾಗದ ಸಂಯೋಜಕಿ ಡಾ.ಮೀನಾಕ್ಷಿ ಎಂ ಮಾತನಾಡಿ, ಯುವಜನತೆ ಸ್ವಾಮಿ ವಿವೇಕಾನಂದರ ಕುರಿತು ಅವಲೋಕಿಸಿ, ಅವರಂತೆ ಬಾಳಿ ದೇಶಕ್ಕೆ ಉತ್ತಮ ಕೊಡುಗೆ ನೀಡಬೇಕು,ಎಂದರು. ಗ್ರಂಥಪಾಲಕಿ ಡಾ. ವನಜಾ ಗ್ರಂಥಾವಲೋಕನದ ಬಗ್ಗೆ ಪ್ರಾಸ್ತಾವಿಕವಾಗಿ ಮಾತನಾಡಿ, ಅತಿಥಿಗಳನ್ನು ಸ್ವಾಗತಿಸಿದರು.

ಸ್ವಾಮಿ ವಿವೇಕಾನಂದರ ಕುರಿತ ಪುಸ್ತಕಗಳನ್ನು ಪ್ರದರ್ಶನಕ್ಕೆ ಇಡಲಾಗಿತ್ತು. ಸ್ನಾತಕೋತ್ತರ ವಿದ್ಯಾರ್ಥಿಗಳಾದ ಮಹೇಶ್ ,ವೀರಣ್ಣ ಗೌಡ , ಗೀರಿಶ್ ಪಿ.ಎಂ ಮತ್ತು ಶಿವ ಪ್ರಸಾದ್ ಬಿ. ಪುಸ್ತಕಗಳ ವಿಮರ್ಶೆ ಮಾಡಿದರು. ಆಂತರಿಕ ಗುಣಮಟ್ಟ ಖಾತರಿ ಕೋಶದ ಸಂಯೋಜಕ ಡಾ.ಸಿದ್ಧರಾಜು ಎಂ., ಹಿರಿಯ ಪ್ರಧ್ಯಾಪಕರಾದ ಪ್ರೊ.ಗಣಪತಿ ಗೌಡ, ಫ್ರೊ. ರಾಮಕೃಷ್ಣ. ಬಿ.ಮೊದಲಾದವರು ಉಪಸ್ಥಿತರಿದ್ದರು.

ಇತಿಹಾಸ ಮತ್ತು ಪುರಾತತ್ವ ವಿಭಾಗದ ವಿದ್ಯಾರ್ಥಿ ಕೀರ್ತನರಾಜ್ ಕಾರ್ಯಕ್ರಮ ನಿರೂಪಿಸಿದರು. ದ್ವಿತೀಯ ಎಂ.ಎ.ಇತಿಹಾಸ
ಮತ್ತು ಪುರಾತತ್ವ ವಿದ್ಯಾರ್ಥಿನಿ ರಫ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles