24 C
Karnataka
Friday, November 15, 2024

ಶಿಕ್ಷಣ ಕ್ಷೇತ್ರದಲ್ಲಿ ಮಂಗಳೂರು ಜಿಲ್ಲೆ ಇಡೀ ರಾಜ್ಯಕ್ಕೆ ಮಾದರಿಯಾಗಿದೆ : ಸಚಿವ ಬಿ. ನಾಗೇಂದ್ರ

ಮಂಗಳೂರು :ತುಳುನಾಡು ಮಂಗಳೂರುನಲ್ಲಿ ಕ್ರೀಡಾ ಸಾಧಕರ ಜೊತೆಗೆ ಶಿಕ್ಷಣ ಕ್ಷೇತ್ರದಲ್ಲಿ ಕೂಡ ಬಹಳಷ್ಟು ಸಾಧನೆ ಮಾಡಿದ ಸಾಧಕರು ಇದ್ದಾರೆ ನಮ್ಮ ಉತ್ತರ ಕರ್ನಾಟಕಕ್ಕಿಂತಲೂ ಮಂಗಳೂರು ಭಾಗದ ಜನರು ಬಹಳ ಬುದ್ಧಿವಂತರು ಇರುವ ಕಾರಣ ಮಂಗಳೂರು ಜಿಲ್ಲೆಯನ್ನು ಬುದ್ದಿವಂತರ ನಾಡು ಬಹಳ ಅನ್ನುತ್ತಾರೆ ನಾನು ಯುವ ಕ್ರೀಡಾಪಟುಗಳನ್ನು ನೋಡಿದ್ದೇ .ಆದರೆ ಇಂದು ವಿಶೇಷವಾಗಿ 30 ರಿಂದ 90 ವರ್ಷದವರೆಗಿನ ಕ್ರೀಡಾ ಸಾಧಕರನ್ನು ನೋಡಿ ಬಹಳ ಸಂತೋಷ ತಂದಿದೆ ಎಂದು ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆ ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವ ಬಿ. ನಾಗೇಂದ್ರ ಅವರು ಹೇಳಿದರು
ಶನಿವಾರ ಮಂಗಳೂರು ನಗರದ ಮಂಗಳ ಕ್ರೀಡಾಂಗಣದಲ್ಲಿ ಆಯೋಜಿಸಿದ್ದ ಕರ್ನಾಟಕ ಮಾಸ್ಟರ್ಸ್ ಅಥ್ಲೆಟಿಕ್ಸ್ ಅಸೋಸಿಯೇಶನ್ ಹಾಗೂ ದಕ್ಷಿಣ ಕನ್ನಡ ಮಾಸ್ಟರ್ಸ್ ಆಥ್ಲೆಟಿಕ್ ಅಸೋಶೇಷನ್ ವತಿಯಿಂದ ಆಯೋಜಿಸಿದ್ದ 42 ನೇ ರಾಜ್ಯ ಮಟ್ಟದ ರಾಜ್ಯ ಮಟ್ಟದ ಮಾಸ್ಟರ್ಸ್ ಅಥ್ಲೆಟಿಕ್ಸ್ ಕ್ರೀಡಾಕೂಟ ಉದ್ಘಾಟನೆ ಮಾಡಿ ಅವರು ಮಾತನಾಡಿದರು .ಈಗಾಗಲೇ ನಮ್ಮ ರಾಜ್ಯದ ಎಲ್ಲಾ ಜಿಲ್ಲೆಯಲ್ಲಿ ಇರುವ ಸ್ಥಳೀಯ ಕ್ರೀಡೆಗಳನ್ನು ಗೌರವಿಸಿ ಒಂದು ಜಿಲ್ಲೆ – ಒಂದು ಕ್ರೀಡೆ ಎನ್ನುವ ಘೋಷ ವಾಕ್ಯದಲ್ಲಿ ಸ್ಥಳೀಯ ಕ್ರೀಡೆಗಳನ್ನು ಅಂತರ್ ರಾಷ್ಟ್ರೀಯ ಮಟ್ಟಕ್ಕೆ ಕೊಂಡೋಯ್ಯಲು ನಮ್ಮ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ವತಿಯಿಂದ ಉತ್ತಮ ಕೆಲಸಕ್ಕೆ ಮುಂದಾಗಿದ್ದೇವೆ ಎಂದು ತಿಳಿಸಿದರು.
ಮೇಯರ್‌ ಸುಧೀರ್‌ ಶೆಟ್ಟಿ , ವಿಧಾನ ಪರಿಷತ್‌ ಮಾಜಿ ಸದಸ್ಯ ಐವನ್‌ ಡಿಸೋಜ, ಡಾ. ಯು.ಟಿ.ಇಪ್ಪಿಕಾರ್, ತೇಜೋಮಯ ಮತ್ತಿತರರು ಉಪಸ್ಥಿತರಿದ್ದರು.
2 ದಿನಗಳ ಕಾಲ ರಾಜ್ಯದ 31 ಜಿಲ್ಲೆಗಳಿಂದ ಸಾವಿರಾರು ಕ್ರೀಡಾಪಟುಗಳು & ಕ್ರೀಡಾಭಿಮಾನಿಗಳು ಆಗಮಿಸಿರುವ ಈ ಕ್ರೀಡಾಕೂಟದಲ್ಲಿ 30 ರಿಂದ 90 ವರ್ಷದ ವರೆಗಿನ ಮಹಿಳಾ ಮತ್ತು ಪುರುಷ ಅಥ್ಲೆಟ್ ಗಳು ಪಾಲ್ಗೊಳ್ಳುತ್ತಿದ್ದಾರೆ.
ಮೊದಲ ದಿನದ ಕ್ರೀಡಾಕೂಟದಲ್ಲಿ ಮಹಿಳಾ ಮತ್ತು ಪುರುಷರ ವಿಭಾಗದಲ್ಲಿ 5000 ಮೀಟರ್ ವಾಕ್, ಮಹಿಳೆಯರ 3000 ಮೀಟರ್ ವಾಕ್, ಟ್ರಿಪಲ್ ಜಂಪ್, ಹೈ ಜಂಪ್, 1500 ಮೀಟರ್ ಓಟ, ಡಿಸ್ಯಸ್ ಎಸೆತ, 100 ಮೀಟರ್, ಓಟ, ಜಾವೆಲಿನ್ ಎಸೆತ, 200 ಮೀಟರ್ ಓಟ, 5000 ಮೀಟರ್ ಪುರುಷರ ಓಟ ಹಾಗೂ ಮಹಿಳೆಯರಿಗೆ 3000 ಮೀಟರ್ ಓಟದ ಕ್ರೀಡಾಕೂಟ ನಡೆಯುದೆ.
ಜ್ಯದಲ್ಲಿ ಇದೊಂದು ವಿಭಿನ್ನ ಕ್ರೀಡಾಕೂಟ ಆಗಿದೆ ಹಿರಿಯ ಸಾಧಕರನ್ನು ಗೌರವಿಸುವ ಕಾರ್ಯಕ್ರಮ ಇದಾಗಿದೆ.2 ನೇ ದಿನದ ಕ್ರೀಡಾಕೂಟದಲ್ಲಿ ಮಹಿಳೆಯರ ಮತ್ತು ಪುರುಷರ ಓಟ, ಹ್ಯಾಮರ್ ಎಸೆತ, ಲಾಂಗ್ ಜಂಪ್, 800 ಮೀಟರ್ ಓಟ, ಶಾಟ್ ಪುಟ್, ಹೈ ಜಂಪ್, 400 ಮೀಟರ್ ಓಟ, 100 ಮೀಟರ್ ಮತ್ತು 80 ಮೀಟರ್ ಹರ್ಡಲ್ಸ್ ರಿಲೇ ನಡೆಯಲಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles