20.5 C
Karnataka
Friday, November 15, 2024

ಜಾಗತಿಕ ಬಂಟರ ಸಂಘಗಳ ಒಕ್ಕೂಟ:ಓಪನ್ ಏರ್ ಗಾರ್ಡನ್

ಮಂಗಳೂರು: ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಮಹತ್ವಕಾಂಕ್ಷಿ ಯೋಜನೆಯಾದ ಮುಲ್ಕಿ ರಾಷ್ಟ್ರೀಯ ಹೆದ್ದಾರಿ ಬಳಿ ಇರುವ ಕನ್ಯಾನ ಸದಾಶಿವ ಶೆಟ್ಟಿ ಸಂಕೀರ್ಣದಲ್ಲಿ ನಿಶಿತಾರ್ಥ, ಮೆಹೆಂದಿ, ಮದುವೆ, ಔತಣ ಕೂಟ, ಹುಟ್ಟುಹಬ್ಬ ಹಾಗೂ ಇತರ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ನಡೆಸಲು ಅನುಕೂಲವಾಗುವಂತೆ ಶ್ರೀಮತಿ ತೋನ್ಸೆ ಶಶಿರೇಖಾ ಆನಂದ ಶೆಟ್ಟಿ ಓಪನ್ ಏರ್ ಗಾರ್ಡನ್ ಎಂಬ ಹೆಸರಿನಲ್ಲಿ ತೆರೆದ ವೇದಿಕೆ ನಿರ್ಮಾಣವಾಗಲಿದೆ.
ಈ ಓಪನ್ ಏರ್ ಗಾರ್ಡನ್ ಸಂಪೂರ್ಣ ಪ್ರಾಯೋಜಕತೆಯನ್ನು ಒಕ್ಕೂಟದ ವಿಶೇಷ ಮಹಾ- ನಿರ್ದೇಶಕರಾದ ಮುಂಬೈಯ ಆರ್ಗಾನಿಕ್ ಗ್ರೂಪ್ ಆಫ್ ಇಂಡಸ್ಟ್ರೀಸ್ ಇದರ ಸಿ. ಎಂ. ಡಿ. ತೋನ್ಸೆ ಆನಂದ್ ಎಂ. ಶೆಟ್ಟಿ ಮತ್ತು ಶಶಿರೇಖಾ ಆನಂದ ಎಂ.ಶೆಟ್ಟಿಯವರಿಗೆ ಜಾಗತಿಕ ಬಂಟರ ಸಂಘಗಳ ಒಕ್ಕೂಟದ ಪರವಾಗಿ ಅಧ್ಯಕ್ಷರಾದ ಐಕಳ ಹರೀಶ್ ಶೆಟ್ಟಿಯವರು ವಿಶೇಷ ಮಹಾ ನಿರ್ದೇಶಕರಾದ ಪ್ರವೀಣ್ ಭೋಜ ಶೆಟ್ಟಿ ಹಾಗೂ ಕೋಶಾಧಿಕಾರಿ ಉಳ್ತೂರು ಮೋಹನದಾಸ ಶೆಟ್ಟಿಯವರು ಜೊತೆ ಸೇರಿ ಗೌರವ ಪೂರ್ವಕವಾಗಿ ಅಭಿನಂದಿಸಿ ಕೃತಜ್ಞತೆ ಸಲ್ಲಿಸಿದರು.
ಓಪನ್ ಏರ್ ಗಾರ್ಡನ್ ಯೋಜನೆಯ ಪೂರ್ತಿ ಜವಾಬ್ದಾರಿಯನ್ನು ಮತ್ತು ಅದರ ಕೆಲಸ ಕಾರ್ಯಗಳನ್ನು ತನ್ನ ಯೋಚನೆಯ ಪ್ರಕಾರದಂತೆ ಮಾಡಿ ಈ ವರ್ಷ 2024 ಡಿಸೆಂಬರ್ ಕೊನೆಯಲ್ಲಿ ಒಕ್ಕೂಟಕ್ಕೆ ಒಪ್ಪಿಸುತ್ತೇನೆ ಎಂದು ತೋನ್ಸೆ ಆನಂದ ಶೆಟ್ಟಿಯವರು ಭರವಸೆಯ ಮಾತನ್ನು ನೀಡಿದ್ದಾರೆ.
ಈ ಯೋಜನೆಗೆ ಸಹಕಾರ ನೀಡಿದ ತೋನ್ಸೆ ಶಶಿರೇಖಾ ಆನಂದ ಎಂ. ಶೆಟ್ಟಿಯವರಿಗೆ ಒಕ್ಕೂಟದ ಮಹಾದಾನಿ ಕನ್ಯಾನ ಸದಾಶಿವ ಶೆಟ್ಟಿ ಉಪಾಧ್ಯಕ್ಷ ಕರ್ನಿರೆ ವಿಶ್ವನಾಥ ಶೆಟ್ಟಿ .ಗೌರವ ಪ್ರಧಾನ ಕಾರ್ಯದರ್ಶಿ
ಇಂದ್ರಾಳಿ ಜಯಕರ ಶೆಟ್ಟಿ .ಜೊತೆ -ಕಾರ್ಯದರ್ಶಿ ಚಂದ್ರಹಾಸ್ ಡಿ. ಶೆಟ್ಟಿ ರಂಗೋಲಿ ಮತ್ತು ಮಹಾ ನಿರ್ದೇಶಕರು, ನಿರ್ದೇಶಕರು, ಮಹಾ-ಪೋಷಕರು, ಪೋಷಕರು, ದಾನಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಸರ್ವ ಸದಸ್ಯರು ಅಭಿನಂದನೆಯನ್ನು ಸಲ್ಲಿಸಿದ್ದಾರೆ

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles