ಮ೦ಗಳೂರು: ಆಭರಣ್ ಜ್ಯುವೆಲ್ಲರ್ ಪ್ರಾಯೋಜಿತ ಜಿಪಿಎಲ್ 2024 ಅಖಿಲ ಭಾರತ ಜಿಎಸ್ ಬಿ ಬ್ಯಾಡ್ಮಿಂಟನ್ ಲೀಗ್ ಟೂರ್ನಮೆಂಟ್ ಇದರ ಆಟಗಾರರ ಹರಾಜು ಪ್ರಕ್ರಿಯೆ ಭಾನುವಾರ ನಡೆಯಿತು.
ಮಂಗಳೂರಿನ ಮಹಾರಾಜ ಹೋಟೇಲಿನಲ್ಲಿ ನಡೆದ ಹರಾಜು ಪ್ರಕ್ರಿಯೆಯಲ್ಲಿ ಎಂಟು ತಂಡಗಳಾದ ಮಾಲಸಿ ಸ್ಟೈಕರ್ಸ್, ಡೆಡ್ಲಿ ಪ್ಯಾಂಥರ್ಸ್ ಕೊಡಿಯಾಲ್, ಬ್ಯಾಡ್ಮಿಂಟನ್ ಬುಲ್ಸ್, ಕೊಡಿಯಾಲ್ ಯುನೈಟೆಡ್ ಸ್ಪೋರ್ಟ್ಸ್, ರೈಸಿಂಗ್ ಸ್ಟಾರ್ಸ್ ಮಂಗಳೂರು, ಕಶ್ಯರ್ಪ್ ಯುನೈಟೆಡ್, ಕೊಡಿಯಾಲ್ ಸೂಪರ್ ಕಿಂಗ್ಸ್, ಯೋ ಜಿಎಸ್ ಬಿ ಸ್ಮ್ಯಾಶರ್ಸ್ ತಂಡಗಳ ಮಾಲೀಕರು, ಸಹ ಮಾಲೀಕರು ಉಪಸ್ಥಿತರಿದ್ದರು. ಮುಂಬೈ, ಪುಣೆ, ಹೈದ್ರಾಬಾದ್, ಬೆಂಗಳೂರು, ಬೆಳಗಾಂ, ಉತ್ತರ ಕರ್ನಾಟಕ ಸಹಿತ ವಿವಿಧ ಭಾಗಗಳಿಂದ 155 ಕ್ರೀಡಾಪಟುಗಳು ಹೆಸರು ನೋಂದಾಯಿಸಿದ್ದರು. ಒಪನ್ ವಿಭಾಗ, ಜಂಬ್ಲಡ್, 40 ಹಾಗೂ 50 ವಯೋಮಿತಿಯ ಪ್ರತ್ಯೇಕ ವಿಭಾಗ, ಮಹಿಳಾ ವಿಭಾಗದಲ್ಲಿ ಪಂದ್ಯಾಟಗಳು ನಡೆಯಲಿವೆ.
ಜಿಎಸ್ ಬಿ ಸಮಾಜದಲ್ಲಿ ಪ್ರಥಮ ಬಾರಿಗೆ ಅಖಿಲ ಭಾರತ ಮಟ್ಟದಲ್ಲಿ ಬ್ಯಾಡ್ಮಿಂಟನ್ ಕ್ರೀಡಾಕೂಟ ಇದಾಗಿದ್ದು, ಎಂಟನೇ ವರ್ಷದ ಬಹುನಿರೀಕ್ಷಿತ ಜಿಪಿಎಲ್ ಉತ್ಸವದಲ್ಲಿ ಈ ಬಾರಿ ಪ್ರಥಮ ಬಾರಿಗೆ ಬ್ಯಾಡ್ಮಿಂಟನ್ ಕ್ರೀಡಾಕೂಟ ಸೇರ್ಪಡೆಗೊಳಿಸಲಾಗಿದೆ. ಯು.ಎಸ್. ಮಲ್ಯ ಒಳಾಂಗಣ ಮೈದಾನದಲ್ಲಿ ಫೆಬ್ರವರಿ 24 ಹಾಗೂ 25 ರಂದು ಈ ಟೂರ್ನಮೆಂಟ್ ನಡೆಯಲಿದ್ದು, ವಿಜೇತರಿಗೆ ಸಹ್ಯಾದ್ರಿ ಕಾಲೇಜಿನಲ್ಲಿ ಫೆಬ್ರವರಿ 25 ರಂದು ಜಿಪಿಎಲ್ ಉತ್ಸವದ ಸಮಾರೋಪ ಸಮಾರಂಭದಲ್ಲಿ ಪ್ರಶಸ್ತಿ ಪ್ರದಾನ ನಡೆಯಲಿದೆ.ಈ ಸಂದರ್ಭದಲ್ಲಿ ಜಿಪಿಎಲ್ ಉತ್ಸವ ಆಯೋಜಕರಾದ ಮಂಗಲ್ಪಾಡಿ ನರೇಶ್ ಶೆಣೈ, ಚೇತನ್ ಕಾಮತ್, ನರೇಶ್ ಪ್ರಭು, ಪ್ರಮುಖರಾದ ಸಂಜಯ್ ಪೈ, ಕೊಡಿಯಾಲ್ ಸ್ಫೋರ್ಟ್ ಅಸೋಸಿಯೇಶನ್ ಅಧ್ಯಕ್ಷರು, ಪದಾಧಿಕಾರಿಗಳು, ಗಣ್ಯರು ಉಪಸ್ಥಿತರಿದ್ದರು.