ಮ೦ಗಳೂರು: ಕ್ರಿಶ್ಚಿಯನ್ ಸ್ಪೋರ್ಟ್ಸ್ ಅಸೋಸಿಯೇಷನ್ ರವರ ವತಿಯಿಂದ ಮೊದಲ ಕ್ರಿಶ್ಚಿಯನ್ ಬ್ಯಾಡ್ಮಿಂಟನ್ ಪ್ರೀಮಿಯರ್ ಲೀಗ್
ಅನ್ನು ಜನವರಿ 14,ರಂದು ಫಾದರ್ ಮುಲ್ಲರ್ಸ್ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಿತು.
ಬೆಳಿಗ್ಗೆ ಉದ್ಘಾಟನಾ ಕಾಯ೯ಕ್ರಮದಲ್ಲಿ , ಮುಖ್ಯ ಅತಿಥಿಗಳಾಗಿ ಎಂ ಸಿ ಸಿಬ್ಯಾಂಕಿನ ಅಧ್ಯಕ್ಷಅನಿಲ್ ಲೋಬೋ ಮತ್ತು ಲೆಕ್ಸಾ ಲೈಟೆನಿಂಗ್ ಟೆಕ್ನಾಲಜೀಸ್ ಪ್ರೈವೇಟ್ ಲಿಮಿಟೆಡ್‌ನಸಂಸ್ಥಾಪಕ ಮತ್ತು ಕಾರ್ಯನಿರ್ವಾಹಕ ನಿರ್ದೇಶಕರೊನಾಲ್ಡ್ ಡಿಸೋಜಾ ಅವರು ಭಾಗವಹಿಸಿದರು. ಮೆಲ್ವಿನ್ ಪೆರಿಸ್ ಕಾರ್ಯಕ್ರಮವನ್ನು ನಿರ್ವಹಿಸಿದರು. ಅಜಯ್ ಟೆರೆನ್ಸ್ ಸ್ವಾಗತಿಸಿದರು. ಅರುಣ್ ಬ್ಯಾಪ್ಟಿಸ್ಟ್ಪಂದ್ಯಾವಳಿಯ ಸಂಚಾಲಕರಾಗಿ ದಿನದ ಬಗ್ಗೆ ಮಾಹಿತಿ ನೀಡಿದರು. ಜಾನ್ ಪೈಸ್ ಅವರು ವ೦ದಿಸಿದರು.ಸಲಾರೆನ್ಸ್ ಕ್ರಾಸ್ತಾ, ಅನಿಲ್ ಪಿಂಟೋ ಮತ್ತುಆಗ್ನೆಲ್ ಡಿಸೋಜಾ ಉಪಸ್ಥಿತರಿದ್ದರು.
ಸ್ಪರ್ಧೆಯಲ್ಲಿ ಸ್ಟೆಲ್ಲರ್ ಸ್ಮಾಷರ್ಸ್ , ರೆಡ್ ಇಂಡಿಯನ್ಸ್ ,ಶಟಲ್ ಬ್ಲಾಕರ್ಸ್ ,ಪೈಸ್ ಶಟ್ಲರ್ಸ್ , ರಾಯ್ ರಾಕರ್ಸ್, ಸ್ಪೋರ್ಟ್ಸ್ ಗ್ಯಾರೇಜ್ ತಂಡಗಳುಭಾಗವಹಿಸಿದ್ದವು.ರೋಚಕ ಅಂತಿಮ ಪಂದ್ಯದಲ್ಲಿ, ಉಡುಪಿಯ ರಾಯ್ ರಾಕರ್ಸ್ ವಿಜಯಶಾಲಿಯಾದರು, ಮಂಗಳೂರಿನ ಶಟಲ್ ಬ್ಲಾಕರ್ಸ್ ತಂಡವು ರನ್ನರ್ಸ್-ಅಪ್ ಪ್ರಶಸ್ತಿ ಗೆದ್ದುಕೊ೦ಡಿತು.
ಸಮಾರೋಪ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಪತ್ರಾವೊ ಕೆಟರಾರ್ಸ್ ಮಾಲಕ ಐವನ್ ಪತ್ರಾವೊ, ಜಿಲ್ಲಾ ಕೌಶಲ್ಯ ಅಭಿವೃದ್ಧಿ ಅಧಿಕಾರಿ, ಪ್ರದೀಪ್ ಡಿಸೋಜ ಅವರು ಬಹುಮಾನ ವಿತರಿಸಿದರು. ರಾಷ್ಟ್ರ ಮಟ್ಟದ ಆಟಗಾರ ಕ್ರಿಸ್ ಅಂಜನ್ ಬ್ಯಾಪ್ಟಿಸ್ಟ್ ರವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು