ಉಜಿರೆ: ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನ (ರಿ.) ಉಜಿರೆ ಇದರ ರಜತ ಪರ್ವ ಸರಣಿಯ ಸಮಾಪನ ಪ್ರಯುಕ್ತ, ಬಲಿಪ ನಾರಾಯಣ ಭಾಗವತರ ಸ್ಮೃತಿ ಗೌರವಾರ್ಥ ತೆಂಕುತಿಟ್ಟು ಯಕ್ಷಗಾನ ಭಾಗವತಿಕೆ ಸ್ಪರ್ಧೆ ಆಯೋಜಿಸಲಾಗಿದೆ. ರಜತಪರ್ವ ಸರಣಿಯಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳಲ್ಲಿ 150 ತಾಳಮದ್ದಳೆಗಳನ್ನು ಸಂಘಟಿಸಲಾಗಿದ್ದು ಸಮಾರೋಪ ಸಮಾರಂಭದ ಪ್ರಯುಕ್ತ, ತೆಂಕುತಿಟ್ಟು ಭಾಗವತಿಕೆಯನ್ನು ಪ್ರೋತ್ಸಾಹಿಸುವ ದೃಷ್ಟಿಯಿಂದ, ಪದವಿ ಪೂರ್ವ ಕಾಲೇಜು ವಿಭಾಗ ಹಾಗೂ ಪದವಿ, ಸ್ನಾತಕೋತ್ತರ ಪದವಿ ವಿಭಾಗಗಳಲ್ಲಿ ಪ್ರತ್ಯೇಕ ಸ್ಪರ್ಧೆ ನಡೆಯಲಿದೆ. ಪ್ರಥಮ, ದ್ವಿತೀಯ, ತೃತೀಯ ಬಹುಮಾನಗಳನ್ನು ನೀಡಲಾಗುವುದು. ಎಲ್ಲ ಸ್ಪರ್ಧಾಳುಗಳಿಗೆ ಪ್ರಯಾಣ ವೆಚ್ಚ ಭರಿಸಲಾಗುವುದು. ಒಬ್ಬ ಸ್ಪರ್ಧಾಳುವಿಗೆ 10 ನಿಮಿಷಗಳ ಕಾಲಾವಕಾಶ ಇದ್ದು, ಹಿಮ್ಮೇಳ ಪರಿಕರ ಹಾಗೂ ನುರಿತ ಹಿಮ್ಮೇಳ ವಾದಕರನ್ನು ಪ್ರತಿಷ್ಠಾನದ ವತಿಯಿಂದ ಒದಗಿಸಲಾಗುವುದು. ಒಡ್ಡೋಲಗದ ಪದ್ಯ, ಶೃಂಗಾರ, ವೀರರಸದ ಹಾಡುಗಳನ್ನು ಆಯ್ಕೆ ಮಾಡುವುದು ಕಡ್ಡಾಯ. ಕೊಟ್ಟ ಸಮಯದ ಮಿತಿಯಲ್ಲಿ ಎಷ್ಟು ಹಾಡುಗಳನ್ನಾದರೂ ಹಾಡಬಹುದು. ಪೌರಾಣಿಕ ಪ್ರಸಂಗಗಳ ಹಾಡುಗಳನ್ನೇ ಆಯ್ದುಕೊಳ್ಳಬೇಕು. ಸ್ಪರ್ಧಾಳುಗಳು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿರುವ ಕುರಿತು ಪ್ರಾಂಶುಪಾಲರಿಂದ ದೃಢೀಕರಣ ಮಾಡಿರಬೇಕು. ಜ.30ರ ಒಳಗೆ ಆಸಕ್ತರು ಸಂಪರ್ಕಿಸಬೇಕಾದ ವಿಳಾಸ: ಉಜಿರೆ ಅಶೋಕ ಭಟ್, ಚಿನ್ಮಯ, ಅಜಿತ ನಗರ, ಉಜಿರೆ 574240 ದ.ಕ., ದೂ: 9449510666, 9449255666.