ಮ೦ಗಳೂರು: .ತಾಲೂಕು ಕೇಂದ್ರ ಸುಳ್ಯದಿಂದ 40 ಕಿ.ಮೀ. ದೂರದಲ್ಲಿರುವ ಕಲ್ಮಕಾರು, ಕೊಲ್ಲಮೊಗ್ರು ಹರಿಹರ, ಬಾಳುಗೋಡು,ಉಪ್ಪುಕಳ ಈ ಭಾಗದ ತುತ್ತತುದಿಯ ನಿವಾಸಿಗಳ ಸಮಸ್ಯೆಗಳನ್ನು ಸರಕಾರ ಮಟ್ಟಕ್ಕೆ ನೇರ ತರಬೇಕು ಎನ್ನುವ ಪ್ರಯತ್ನದ ಫಲವಾಗಿ ದ.ಕ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ನೇತೃತ್ವದಲ್ಲಿ ,ಸುಳ್ಯ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ ಹಾಗೂ ಸುಬ್ರಹ್ಮಣ್ಯ ಪ್ರಸ್ ಕ್ಲಬ್ ಇದರ ಸಂಯುಕ್ತಅಶ್ರಯದಲ್ಲಿ ಜಿಲ್ಲಾಡಳಿತ,ತಾಲೂಕು ಆಡಳಿತ, ಸ್ಥಳಿಯಾಡಳಿತ,ಎರಡು ಪಂಚಾಯತು ವ್ಯಾಪ್ತಿಯ ಊರ ನಾಗರಿಕರ ಸಹಕಾರದಲ್ಲಿ ಅವಳಿ ಪಂಚಾಯತ್ ವ್ಯಾಪ್ತಿಯ ಆಯ್ದ ಒಂದು ಕಡೆ ಪತ್ರಕರ್ತರ, ಪ್ರಮುಖ ಇಲಾಖೆಯ ಮಂತ್ರಿಗಳ, ಶಾಸಕರ , ಅಧಿಕಾರಿಗಳ ರಾತ್ರಿ ಗ್ರಾಮವಾಸ್ತವ್ಯ ನಡೆಸುವ ಬಗ್ಗೆ ಚಿಂತನೆ ನಡೆಸಲಾಗಿದೆ. ಈ ಭಾಗದ ಸಮಸ್ಯೆಗಳಿಗೆ ಧ್ವನಿಯಾಗಿ, ಸರಕಾರಕ್ಕೆ ತಲುಪಿಸುವ ಪ್ರಯತ್ನ ಇದಾಗಿದ್ದು, ಅದರಂತೆ ಎರಡು ಪಂಚಾಯತ್ ವ್ಯಾಪ್ತಿಯ ಪ್ರಮುಖರ ಪೂರ್ವಭಾವಿ ಸಭೆಯನ್ನು ಜನವರಿ 21ರಂದು( ರವಿವಾರ) ಪೂರ್ವಾಹ್ನ 11ಕ್ಕೆ ಕೊಲ್ಲಮೊಗ್ರು ಮಯೂರ ಕಲಾ ಮಂದಿರದಲ್ಲಿ ಕರೆಯಲಾಗಿದೆ.ಮಲೆನಾಡಿನ ತಪ್ಪಲಿನ ಜ್ವಲಂತ ಸಮಸ್ಯೆಗಳಿಗೆ ಬೂಸ್ಟ್ ನೀಡುವ ಪ್ರಯತ್ನದ ಪಲವಾಗಿ ನಡೆಯುವ ಮಹತ್ವದ ಗ್ರಾಮವಾಸ್ತವ್ಯದ ಪ್ರಥಮ ಹಂತದ ಪೂರ್ವಭಾವಿ ಸಭೆಗೆ ಎರಡು ಗ್ರಾಮಗಳ ಪ್ರಮುಖರನ್ನು ಆಹ್ವಾನಿಸಲಾಗಿದೆ. ಸಭೆಯಲ್ಲಿ ಜಿಲ್ಲಾ ಕಾರ್ಯ ನಿರತ ಪತ್ರಕರ್ತರ ಸಂಘ, ತಾಲೂಕು ಪತ್ರಕರ್ತರ ಸಂಘದ ಪ್ರತಿನಿಧಿಗಳು ಉಪಸ್ಥಿತರಿರುವರು. ಎರಡು ಗ್ರಾಮಗಳ ಪ್ರಮುಖರು ಹೆಚ್ಚಿನ ಸಂಖ್ಯೆಯಲ್ಲಿ ಉಪಸ್ಥಿತರಿರುವಂತೆ ಕಾರ್ಯನಿರತ ಪತ್ರಕರ್ತರ ಸಂಘ ಮನವಿ ಮಾಡಿದೆ.. ಹೆಚ್ಚಿನ ಮಾಹಿತಿಗೆ 8431927596,9449792508,9481385886,9448924432,9448548574, 9902896424 ಮೊಬೈಲ್ ಸ೦ಖ್ಯೆಯನ್ನು ಸ೦ಪಕಿ೯ಸುವ೦ತೆ ಕೋರಲಾಗಿದೆ.