ಪುತ್ತೂರು : ತೋಟಕ್ಕೆ ನೀರು ಹಾಯಿಸಲು ನಿರ್ಮಿಸಿದ್ದ ಕೃತಕ ಕಚ್ಚಾ ಮಣ್ಣಿನ ತೊಟ್ಟಿಗೆ ಬಿದ್ದು ಪುತ್ತೂರು ಒಳಮೊಗ್ರು ಗ್ರಾಮ ಕೈಕಾರದ ಶುಭಲಕ್ಷ್ಮೀ (49) ಎ೦ಬವರು ಮೃತಪಟ್ಟ ಘಟನೆ ವರದಿಯಾಗಿದೆ. ಪತ್ನಿ ಶುಭಲಕ್ಷ್ಮೀ ಜ. 17ರಂದು ಬೆಳಿಗ್ಗೆ ಮನೆಯಲ್ಲಿದ್ದವರು ಕ೦ಡು ಬರಲಿಲ್ಲ. ಸುತ್ತಮುತ್ತ ಎಲ್ಲಾ ಕಡೆ ಹುಡುಕಾಡಿ ನಂತರ ತೋಟಕ್ಕೆ ನೀರು ಹಾಯಿಸಲು ನಿರ್ಮಿಸಿದ್ದ ಕೃತಕ ಕಚ್ಚಾ ಮಣ್ಣಿನ ತೊಟ್ಟಿಯ ಬಳಿ ಹೋದಾಗ ಅವರು ನೀರಿನಲ್ಲಿ ಕವುಚಿ ಬಿದ್ದ ಸ್ಥಿತಿಯಲ್ಲಿ ಮೃತಪಟ್ಟಿದ್ದರು. ಪತ್ನಿಯು ತೋಟದ ಗುಡ್ಡೆಯ ನೀರಿನ ತೊಟ್ಟಿಯಲ್ಲಿ ನೀರು ಇರುವ ಬಗ್ಗೆ ನೋಡಲು ಆಗಾಗ ಹೋಗುತ್ತಿದ್ದು ಬೆಳಗ್ಗೆ ನೀರಿನ ತೊಟ್ಟಿಯ ಬಳಿ ನೀರು ನೋಡಲು ಹೋದಾಗ ಆಕಸ್ಮಿಕವಾಗಿ ಕಾಲು ಜಾರಿ ತೊಟ್ಟಿಯ ನೀರಿಗೆ ಬಿದ್ದು ಉಸಿರುಗಟ್ಟಿ ಮೃತಪಟ್ಟಿದ್ದಾರೆ ಎ೦ದು ಪತಿ ಪ್ರಕಾಶ್ ಚಂದ್ರ ಎಂಬವರು ಪುತ್ತೂರು ಗ್ರಾಮಾಂತರ ಪೊಲೀಸ್ ಠಾಣೆಗೆ ನೀಡಿರುವ ದೂರಿನಲ್ಲಿ ತಿಳಿಸಿದ್ದಾರೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸುತ್ತಿದ್ದಾರೆ.
