ಕಿನ್ನಿಗೋಳಿ: ಅತಿಯಾದ ಕೈಗಾರಿಕೀಕರಣ,ನಗರೀಕರಣ ಮತ್ತು ಬದಲಾದ ಜೀವನ ಶೈಲಿಯ ಪರಿಣಾಮ ಹವಾಗುಣ ವೈಪರೀತ್ಯದ ತುರ್ತು ಸಮಸ್ಯೆ ಎದುರಾಗಿದೆ . ಈಗ ನಾವು ಎಚ್ಚೆತ್ತುಕೊಂಡು ಪರಿಸರದ ಸಮಸ್ಯೆಗಳಿಗೆ
ಪರಿಹಾರಗಳನ್ನು ಕಂಡುಕೊಳ್ಳದಿದ್ದರೆ ಜೀವ ಸಂಕುಲದ ಅಳಿವು ಇನ್ನು ಕೆಲವು ದಶಕಗಳಲ್ಲಿ ನಿಶ್ಚಿತ ಎಂದು ಪರಿಸರ ತಜ್ಞರು ಎಚ್ಚರಿಸಿದ್ದಾರೆ. ಈ ದಿಸೆಯಲ್ಲಿ ಪರಿಸರ ಪರ ಕೆಲಸ ಮಾಡಲು ರಾಜ್ಯಾದ್ಯಂತ ವಿವಿಧ ಜಿಲ್ಲೆಗಳ ಪರಿಸರ ಕಾರ್ಯಕರ್ತರನ್ನು ಒಗ್ಗೂಡಿಸಿ ರಾಜ್ಯ ಮಟ್ಟದ ಒಕ್ಕೂಟ ಕಟ್ಟಲು ಪರಿಸರಕ್ಕಾಗಿ ನಾವು ಎನ್ನುವ ರಾಜ್ಯ ಮಟ್ಟದ ಬಳಗ ರಚನೆಯಾಗಿದೆ. ಜೊತೆಗೆ ಪ್ರತಿ ಜಿಲ್ಲೆಯಲ್ಲೂ ಅದರ ಉಪಘಟಕ ರಚಿಸಲಾಗಿದೆ.
ಪರಿಸರಕ್ಕಾಗಿ ನಾವು – ಇದರ ದಕ್ಷಿಣ ಕನ್ನಡ ಉಡುಪಿ ಜಿಲ್ಲೆಗಳ ಸಂಯುಕ್ತ ಘಟಕದ ಮೊದಲ ಸಭೆ ಜ. 15 ರಂದು ಕಿನ್ನಿಗೋಳಿಯ ನೇಕಾರ ಸಂಘದ ಸಭಾ ಭವನದಲ್ಲಿ ನಡೆಯಿತು.ದ.ಕ. ಜಿಲ್ಲೆಯಿಂದ ಅಶ್ವಿನಿ ಭಟ್ ಮತ್ತು ಭುವನ್ ದೇವಾಡಿಗ ಹಾಗೂ ಉಡುಪಿ ಜಿಲ್ಲೆಯಿಂದ ಶ್ರೀಕುಮಾರ್ ಮತ್ತು ದೀಪ್ತಿ ಅವರು ರಾಜ್ಯ ಸಂಚಾಲನ ಸಮಿತಿಗೆ ಈಗಾಗಲೇ ಆಯ್ಕೆಆಗಿದ್ದಾರೆ.ಪರಿಸರಕ್ಕಾಗಿ ನಾವು ರಾಜ್ಯ ಬಳಗದ ಆರಂಭಿಕ ಸಮಿತಿಯ ಪರವಾಗಿ ಮಮತಾ ರೈ ಹಾಗೂಉಭಯ ಜಿಲ್ಲೆಗಳ ಅನೇಕ ಪ್ರಮುಖ ಪರಿಸರ ಕಾರ್ಯಕರ್ತರು ಉಪಸ್ಥಿತರಿದ್ದರು.
ಹವಾಗುಣ ವೈಪರೀತ್ಯ ದಿಂದ ಹಿಡಿದು ಉಭಯ ಜಿಲ್ಲೆಗಳನ್ನು ಕಾಡುತ್ತಿರುವ ಅತಿ ಮುಖ್ಯ ಪರಿಸರಸಮಸ್ಯೆಗಳ ಕುರಿತು ಸಭೆಯಲ್ಲಿ ಚರ್ಚಿಸಲಾಯಿತು. ಮುಂದಿನ ದಿನಗಳಲ್ಲಿ ಆಯ್ದ ಪರಿಸರ ಸಮಸ್ಯೆಗಳ
ಪರಿಹಾರಕ್ಕಾಗಿ ಆಯಾ ಕ್ಷೇತ್ರದ ಪರಿಣಿತರನ್ನು ಒಳಗೊಂಡ ಸಮಿತಿಗಳನ್ನು ರಚಿಸಿ ಕಾರ್ಯತಂತ್ರರೂಪಿಸಲು, ಜನರಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸಲು ಯೋಜನೆಗಳನ್ನು ರೂಪಿಸಲು ಹಾಗೂ ರಾಜ್ಯ ಮಟ್ಟದ ಪರಿಸರಕ್ಕಾಗಿ ನಾವು ಬಳಗದ ಮಾರ್ಗದರ್ಶನದಂತೆ ಕೆಲಸ ಮಾಡಲು ನಿರ್ಧರಿಸಲಾಯಿತು. ಸಭೆಯಲ್ಲಿ ಬೇರೆ ಬೇರೆ ಕ್ಷೇತ್ರಗಳಲ್ಲಿ ಪರಿಸರಕ್ಕಾಗಿ ದುಡಿಯುತ್ತಿರುವ 38 ಮಂದಿಸೇರಿದ್ದರು. ಶ್ರೀಕುಮಾರ್ ಸ್ವಗತಿಸಿದರು.
ಸಮಸ್ಯೆಗಳನ್ನುಮೇಲ್ಮೈ ನೀರು ( ನದಿ,ಕೆರೆ, ಸಮುದ್ರ). ಅಂತರ್ಜಲ,ತ್ಯಾಜ್ಯ ನಿರ್ವಹಣೆ, ಅಭಿವೃದ್ಧಿಯ ಹೆಸರಿನಲ್ಲಿ ಮರ ಕಡಿಯುವುದು, ಅರಣ್ಯಗಳ ನಾಶ, ವಾಯು ಮಾಲಿನ್ಯ ಮತ್ತು ಶಬ್ದ ಮಾಲಿನ್ಯ,ಶಿಕ್ಷಣ, ಜೀವನಶೈಲಿ ಮತ್ತು ಪರಿಸರದ ಬಗ್ಗೆ ಜಾಗೃತಿ ಮೂಡಿಸುವುದುಕೃಷಿ ಮತ್ತು ಜೀವ ಸಂಕುಲಗಳ ಮೇಲೆ ಆಗುತ್ತಿರುವ ಪರಿಣಾಮಗಳ ಅಧ್ಯಯನ ಎ೦ಬುದಾಗಿ ವಿ೦ಗಡಿಸಿಸದಸ್ಯರು ತಮ್ಮ ತಮ್ಮ ಆಸಕ್ತಿಯ ಪ್ರಕಾರ ಮೇಲಿನ ಕ್ಷೇತ್ರಗಳಲ್ಲಿ ಕೆಲಸ ಮಾಡುವ ತಂಡಗಳನ್ನು ಸೇರಿಕೊಳ್ಳಬೇಕೆಂದು ನಿರ್ಧರಿಸಲಾಯಿತು.