18 C
Karnataka
Sunday, November 24, 2024

ಅಕ್ವೇರಿಯಂ ಜೋಡಣೆ ಮತ್ತು ನಿರ್ವಹಣೆ ತರಬೇತಿ

ಮಂಗಳೂರು: ಕರ್ನಾಟಕ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಅಂಗ ಸಂಸ್ಥೆಯಾದ ಮಂಗಳೂರಿನ ಮೀನುಗಾರಿಕಾ ಕಾಲೇಜಿನ ಹ್ಯೊಗೆಬಜಾರ್ ಆವರಣದಲ್ಲಿರುವ ಮಂಗಳೂರು ಸ್ಮಾರ್ಟ್ ಸಿಟಿ ಪ್ರಾಯೋಜಿತ ಯೋಜನೆಯಾದ ‘ಮೀನುಗಾರಿಕೆಯಲ್ಲಿ ಕೌಶಲ್ಯಾಭಿವೃಧ್ಧಿ ಮತ್ತು ಸುರಕ್ಷತಾ ತರಬೇತಿ ಕೇಂದ್ರ’ ದಲ್ಲಿ ಫೆಬ್ರವರಿ 1 ರಿಂದ 30 ದಿನಗಳವರೆಗೆ ಉಚಿತ ತರಬೇತಿ ಹಮ್ಮಿಕೊಳ್ಳಲಾಗಿರುತ್ತದೆ.
ಈ ಮೊದಲನೇ ತರಬೇತಿಯಲ್ಲಿ ಅಕ್ವೇರಿಯಂ ಜೋಡಣೆ, ನಿರ್ವಹಣೆ, ಅಲಂಕಾರಿಕಾ ಮೀನುಗಳ ಸಾಕಣೆ, ಮರಿ ಉತ್ಪಾದನೆ, ಉದ್ಯಮಶೀಲತೆ, ಮಾರಾಟ, ಇತ್ಯಾದಿಗಳ ಬಗ್ಗೆ ಪ್ರಾತ್ಯಕ್ಷಿಕೆಮೂಲಕ ತರಬೇತಿ ನೀಡಲಾಗುವುದು.
ಒಂದು ತರಬೇತಿಯಲ್ಲಿ ಒಟ್ಟು 30 ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುವುದು. ನಿರುದ್ಯೋಗಿ ಪದವೀಧರರು, ಕಾಲೇಜು ವ್ಯಾಸಂಗವನ್ನು ಮೊಟಕುಗೊಳಿಸಿರುವ ಯುವಕ-ಯುವತಿಯರು, ಸ್ವಉದ್ಯೋಗಾಂಕ್ಷಿಗಳು, ಸ್ವಂತ ವ್ಯಾಪಾರ ಮಾಡಬಯಸುವ ಕರ್ನಾಟಕ ಕರಾವಳಿಯ ನಿವಾಸಿಗಳು ತರಬೇತಿಗೆ ಅರ್ಜಿಯನ್ನು ಸಲ್ಲಿಸಬಹುದು.
ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಕಾಲೇಜಿನ ವೆಬ್‍ಸೈಟ್: www.cofm.edu.in ಯಿಂದ ಡೌನ್‍ಲೋಡ್ ಮಾಡಿ ಇಮೇಲ್: sdfstc2023@gmail.com ಗೆ ಕಳುಹಿಸಲು ಕೋರಲಾಗಿದೆ. ಅರ್ಜಿಯನ್ನು ಜನವರಿ 25 ರೊಳಗೆ ಕಳುಹಿಸಬೇಕು. ಹೆಚ್ಚಿನ ಮಾಹಿತಿಗೆ ಯೋಜನೆಯ ಸಂಯೋಜಕರು ಹಾಗೂ ಪ್ರಧಾನ ಸಂಶೋಧಕರನ್ನು ಮೊಬೈಲ್ ಸಂಖ್ಯೆ: 9916924084 ಅಥವಾ 8618660949 ಸಂಪರ್ಕಿಸಬಹುದಾಗಿದೆ.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles