23.1 C
Karnataka
Saturday, November 23, 2024

ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳು — ಶ್ರೀ ರಾಮ ವೈಭವ ಅನಾವರಣ

ಮಂಗಳೂರು:ಅಯೋಧ್ಯೆಯಲ್ಲಿ ರಾಮಮಂದಿರದ ನಿರ್ಮಾಣ ಭಾರತೀಯರ ಅತ್ಯಂತ ದೊಡ್ಡ ಕನಸು. ಅದು ಪ್ರಸ್ತುತ ಸಾಕಾರಗೊಳ್ಳುತ್ತಿದೆ. ಈ ಮೂಲಕ ಭಾರತ ಇತಿಹಾಸ ನಿರ್ಮಾಣದ ಕಡೆಗೆ ಹೆಜ್ಜೆ ಹಾಕಿದೆ. ಭಾರತೀಯರ ಕಣಕಣದಲ್ಲೂ ರಾಮ ನಾಮ ಪುಟಿದೆಳುತ್ತಿದೆ. ಎಂದು ವೇದಮೂರ್ತಿ ಶ್ರೀ ಎಸ್ ವೈ ಸುಧಾಕರ್ ಭಟ್ ಅವರು ಹೇಳಿದರು.
ಟಿ ವಿ ರಮಣ ಪೈ ಕನ್ವೆನ್ಷನ್ ಸೆಂಟರ್ ನಲ್ಲಿ ಕೆನರಾ ಸಮೂಹ ಶಿಕ್ಷಣ ಸಂಸ್ಥೆಗಳ ವತಿಯಿಂದ ನಡೆದ ಶ್ರೀರಾಮ ವೈಭವ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತ್ತಿದ್ದರು.
ಜ.22ರಂದು ಅಯೋಧ್ಯೆಯಲ್ಲಿ ನಡೆಯುವ ಐತಿಹಾಸಿಕ ಶ್ರೀ ರಾಮ ಮಂದಿರದ ಲೋಕಾರ್ಪಣೆ ಮತ್ತು ಭಗವಾನ್ ಶ್ರೀರಾಮನ ಪ್ರಾಣಪ್ರತಿಷ್ಠೆ ಕಾರ್ಯಕ್ರಮದ ಹಿನ್ನೆಲೆಯಲ್ಲಿ ಕೆನರಾ ಸಮೂಹ ಶಿಕ್ಷಣ ಸಂಸ್ಥೆ ಶ್ರೀರಾಮ ವೈಭವ ಎನ್ನುವ ವಿದ್ಯಾರ್ಥಿಗಳಲ್ಲಿ ಸಂಸ್ಕಾರ ಬೆಳೆಸುವ ಇಂತಹ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯವಾಗಿದೆ. ನಮ್ಮ ಆಚಾರ ವಿಚಾರ, ಸಂಸ್ಕಾರಗಳು ರಾಮಾಯಣದಿಂದ ಪ್ರೇರಿತವಾಗುವಂತೆ ಮಕ್ಕಳನ್ನು ಬೆಳೆಸಬೇಕಿದೆ. ವೇದಗಳು, ರಾಮಾಯಣ ಮಹಾಭಾರತಗಳ ಚಿಂತನೆ ಪ್ರತಿಯೊಂದು ಮನೆ ಮನದಲ್ಲೂ ಆಗಬೇಕಿದೆ. ರಾಮ ನಾಮದ ಜಪದ ಮಹಿಮೆ, ರಾಮರಕ್ಷಾ ಸ್ತೋತ್ರದ ಹಿರಿಮೆ ಜಗತ್ತಿಗೆ ಸಾರಬೇಕಾಗಿದೆ. ಎಂದು ಅವರು ಹೇಳಿದರು. ಈ ಸಂದರ್ಭದಲ್ಲಿ ಅವರನ್ನು ಆಡಳಿತ ಮಂಡಳಿಯ ವತಿಯಿಂದ ಮಂಡಳಿಯ ಅಧ್ಯಕ್ಷ ಡಿ. ವಾಸುದೇವ ಕಾಮತ್ ಅವರು ಸನ್ಮಾನಿಸಿದರು.
ಸಂಸ್ಥೆಯ ಬಾಲ ವಿದ್ಯಾರ್ಥಿಗಳ ರಾಮಾಯಣದ ವಿವಿಧ ಪಾತ್ರಗಳ ವೇಷಗಳು ಕಾರ್ಯಕ್ರಮಕ್ಕೆ ಹೊಸ ಮೆರುಗನ್ನು ತಂದವು.ರಾಮರಕ್ಷಾ ಸ್ತೋತ್ರ ಪಠಣ, ಭಕ್ತಿ ಗೀತೆಗಳು, ಶ್ರೀರಾಮ ಗುಣಗಾನ ನಾಟ್ಯ ವೈಭವ,ಸೀತಾ ಕಲ್ಯಾಣ, ಭರತನಾಟ್ಯ, ಸೀತಾ ಸ್ವಯಂವರ, ರಾಮಾಯಣ ಕಥಾ ನೃತ್ಯ, ಹನುಮಾನ್ ಚಾಲೀಸಾ ಕಥಾ ನೃತ್ಯ, ಶ್ರೀ ರಾಮ ವೈಭವ ಭರತನಾಟ್ಯ, ಫ್ಯೂಶನ್ ರಾಮಾಯಣ, ಲಂಕಾ ದಹನ ರೂಪಕ, ಇತ್ಯಾದಿ ಅನೇಕ ಸಾಂಸ್ಕೃತಿಕ ಕಾರ್ಯಕ್ರಮಗಳು ಪ್ರದರ್ಶನ ಗೊಂಡವು.
ರಾಮಾಯಣಕ್ಕೆ ಸಂಬಂಧಿಸಿದ ಅನೇಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಿ ಗೌರವಿಸಲಾಯಿತು.
ಕೆನರಾ ಆಡಳಿತ ಮಂಡಳಿಯ ಅಧ್ಯಕ್ಷ ಡಿ ವಾಸುದೇವ ಕಾಮತ್,ಖಜಾಂಚಿ CA ಎಂ.ವಾಮನ್ ಕಾಮತ್, ಸದಸ್ಯರಾದ ಬಸ್ತಿ ಪುರುಷೋತ್ತಮ ಶೆಣೈ, , ಅಶ್ವಿನಿ ಕಾಮತ್, ಮಹಾತ್ಮ ಗಾಂಧಿ ಮ್ಯೂಸಿಯಂ ನಿರ್ದೇಶಕರಾದ ಪಯ್ಯನೂರು ರಮೇಶ್ ಪೈ,ಆಡಳಿತ ಅಧಿಕಾರಿ ಡಾ. ದೀಪ್ತಿ ನಾಯಕ್, ಪಿ ಆರ್ ಒ ಉಜ್ವಲ್ ಮಲ್ಯ, ,ಕೆನರಾ ಶಿಕ್ಷಣ ಸಂಸ್ಥೆಗಳ ಪ್ರಾಂಶುಪಾಲರು, ಮುಖ್ಯೋಪಾಧ್ಯಾಯರುಗಳು, ಬೋಧಕ ಬೋಧಕೇತರ ಸಿಬ್ಬಂದಿ ವರ್ಗ, ವಿದ್ಯಾರ್ಥಿಗಳ ಪೋಷಕರು ಈ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು..ಕೆನರಾ ಸಿಬಿಎಸ್‌ಇ ಶಾಲೆಯ ಶಿಕ್ಷಕಿ ಜಯಲಕ್ಷ್ಮಿ ಶೆಟ್ಟಿ ಕಾರ್ಯಕ್ರಮವನ್ನು ನಿರೂಪಿಸಿದರು. ಶಿಕ್ಷಕಿ ಸುಲಕ್ಷಣ ಸ್ವಾಗತಿಸಿ, ಶಿಕ್ಷಕಿ ಸೌಮ್ಯ ವಂದಿಸಿದರು.

Related Articles

LEAVE A REPLY

Please enter your comment!
Please enter your name here

Stay Connected

0FansLike
3,912FollowersFollow
0SubscribersSubscribe

Latest Articles